Ad imageAd image

ಸುಮತಾ ಸೈನಿಕ ದಳದ ನೂತನ ಪದಾಧಿಕಾರಿಗಳ ಆಯ್ಕೆ

Bharath Vaibhav
ಸುಮತಾ ಸೈನಿಕ ದಳದ ನೂತನ ಪದಾಧಿಕಾರಿಗಳ ಆಯ್ಕೆ
WhatsApp Group Join Now
Telegram Group Join Now

ಹುಕ್ಕೇರಿ: ತಾಲೂಕಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷರಾದ ಬಿ ಚನ್ನಕೃಷ್ಣಪ್ಪ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಕಮಲಾ ಮೇಡಂ ಅವರ ಆದೇಶದಂತೆ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶಿವಾಜಿ ಎನ್ ಬಾಲೇಶ್ಗೋಳ ಹಾಗೂ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ರಮೇಶ್ ತಳವಾರ್ ಅವರ ನಿಯತ್ತುತ್ವದಲ್ಲಿ ಹುಕ್ಕೇರಿ ತಾಲೂಕ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಜರಗಿತು.

ಮೊದಲಿಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಸಂಘದ ಎಲ್ಲಾ ಸದಸ್ಯರು ಸೇರಿ ಹೂ ಮಾಲೆ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಶಿವಾಜಿ ಎನ್ ಬಾಲೇಶ್ಗೋಳ ಉಪಾಧ್ಯಕ್ಷರಾಗಿ ರಮೇಶ್ ತಳವಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಅಲಿ ಬಾಡ್ಕರ್ ಬೆಳಗಾವಿ ಜಿಲ್ಲಾ ಕಾನೂನು ಸಲಹೆಗಾರರಾಗಿ ಅಡ್ವಕೇಟ್ ರಾಜೇಂದ್ರ ಮೂಶಿ ಜಿಲ್ಲಾ ಕಾರ್ಯದರ್ಶಿಯಾಗಿ ಸೊಹೈಲ್ ಬಾಗವಾನ್ ಸಹ ಕಾರ್ಯದರ್ಶಿಯಾಗಿ ರಾಜೇಂದ್ರ ಕಾಂಬಳೆ ಆಯ್ಕೆಯಾಗಿದ್ದು ಹಾಗೂ ಹುಕ್ಕೇರಿ ತಾಲೂಕ ಸಂಘದ ಅಧ್ಯಕ್ಷರಾಗಿ ಶಿವಾನಂದ್ ಬಸಪ್ಪ ಮಾಳಕರಿ ಸಂಘಟನಾ ಕಾರ್ಯಧ್ಯಕ್ಷರಾಗಿ ಸಾಹುಲ್ ನದಾಫ್ ಉಪಾಧ್ಯಕ್ಷರಾಗಿ ಜಾಫರ್ ನದಾಫ್
ಪ್ರಧಾನ ಕಾರ್ಯದರ್ಶಿಯಾಗಿ ದಸ್ತಗಿರ್ ಬಾಬಾ ಸಾಬ್ ಕಳವಂತ್ ಕಾರ್ಯದರ್ಶಿಯಾಗಿ ಅಜಯ್ ರಾಮಚಂದ್ರ ಹರಬಲೆ ಖಜಾಂಚಿಯಾಗಿ ಶರ್ಪರಾಜ್ ಕಾಂಚಾದೇ ತಾಲೂಕ ಸಂಘಟನಾ ಪ್ರಧಾನ ಸಂಚಾಲಕರಾಗಿ ವಿಠ್ಠಲ್ ಬಂಗಾರಿ ಸಂಘಟನಾ ಸಂಚಾಲಕರಾಗಿ ಗೌಸ್ ಆಝಮ್ ಜಮಾದಾರ್ ಸಂಚಾಲಕರಾಗಿ ಮಹಮ್ಮದ್ ಆರಿಫ್ ಪಠಾಣ್ ಶಮನ್ ಮುಲ್ತಾನಿ ಶಂಕರ್ ಭೀಮಪ್ಪ ತಳವಾರ್ ಆಯ್ಕೆಯಾದರು.
ಇದೇ ಸಮಯದಲ್ಲಿ ಮಹಿಳಾ ಘಟಕದ ಕಾಗವಾಡ ತಾಲೂಕ ಅಧ್ಯಕ್ಷರಾಗಿ ಕವಿತಾ ಕಾಂಬಳೆ ಹಾಗೂ ಹುಕ್ಕೇರಿ ತಾಲೂಕ ಮಹಿಳಾ ಘಟಕದ ಗೌರವ ಅಧ್ಯಕ್ಷರಾಗಿ ಶಾಂತವ್ವ ಹಳವಿ ತಾಲೂಕ ಅಧ್ಯಕ್ಷರಾಗಿ ಮಂಗಲ್ ಮನೆ ಉಪಾಧ್ಯಕ್ಷರಾಗಿ ಆರ್ತಿ ಕಾಂಬಳೆ ಖಜಾಂಚಿಯಾಗಿ ಲಗಮವ್ವ ಮಾದರ್ ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಿ ನುಲಿ ಕಾರ್ಯದರ್ಶಿಯಾಗಿ ಗೌರವ ಮಾಳಗೆ ಆಯ್ಕೆಯಾದರು ಈ ಸಮಯದಲ್ಲಿ ತಾಲೂಕಿನ ಎಲ್ಲಾ ಸದಸ್ಯರು ಹಾಗೂ ಚಿಕ್ಕೋಡಿ ಕಾಗವಾಡ ಬೆಳಗಾವಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ವರದಿ: ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!