ಅಂದು ಅರಣ್ಯ ಇಲಾಖೆಯಿಂದ ಗ್ರೀನ್ ಸಿಗ್ನಲ್ ಇಂದು ರೆಡ್ ಸಿಗ್ನಲ್ ಯಾಕೆ ?
ಕಣಕುಂಬಿ: ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಲಪ್ರಭಾ ನದಿಯ ಉಗಮಸ್ಥಳ ಕಣಕುಂಬಿಯಲ್ಲಿ ಲೇಟೆಸ್ಟ್ ಸುದ್ದಿಯೊಂದು ಹೊರಬಿದ್ದಿದೆ. ಗ್ರಾಮೀಣ ರಸ್ತೆಗಳಿಂದ ಲೋಕೋಪಯೋಗಿ ಇಲಾಖೆ ರಸ್ತೆಗಳಾಗಿ ಮೇಲ್ದರ್ಜೆಗೆ ಏರಿಸಿದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆವತಿಯಿಂದ ಕಣಕುಂಬಿ ಗ್ರಾಮದ ಮಾವೊಲಿ ದೇವಸ್ಥಾನದಿಂದ ಚಿಗುಳೆ ಗ್ರಾಮದ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸುವುದಕ್ಕೆ ಅಂದಾಜು 2 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ವಸಂತ ದಾರವ ಎಂಬ ಗುತ್ತಿಗೆದಾರನಿಂದ 2024 ರಲ್ಲಿ ಆರಂಭಿಸಿ ರಸ್ತೆಯನ್ನು ಸ್ವಚ್ಛಗೊಳಿಸಿ ಕಡಿ ಹಾಕಿಸಲಾಯಿತು.

ನಂತರ ಡಾಂಬರ್ ಹಾಕಿ 6 ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಅಲ್ಲಿಯವರೆಗೂ ಸುಮ್ಮನಿದ್ದ ಸ್ಥಳೀಯ ಕಣಕುಂಬಿ ವಲಯ ಅರಣ್ಯ ಅಧಿಕಾರಿಗಳು ಏಕಾಏಕಿ ಬಂದು ಈ ಕಾಮಗಾರಿಯನ್ನು ತಡೆಹಿಡಿದಿದ್ದಾರಂತೆ. ಇದೇ ಕಣಕುಂಬಿ ವ್ಯಾಪ್ತಿಯ ವಲಯ ಅರಣ್ಯ ಇಲಾಖೆ ಅಧಿಕಾರಿಗಳು 2011 ಹಾಗೂ 2020 ರಲ್ಲಿ ಈ ರಸ್ತೆ ಸುಧಾರಣೆ ಮಾಡುವುದಕ್ಕೆ ಅನುಮತಿ ನೀಡಿ ಸದರಿ ಕಾಮಗಾರಿ ನಡೆಯುವಾಗ ಏಕಾ ಏಕಿ ಬಂದು ತಡೆದು ನಿಲ್ಲಿಸಿರುವುದು ನೋಡಿದ್ರೆ ಈ ಕಣಕುಂಬಿ ವಲಯ ಅರಣ್ಯ ಅಧಿಕಾರಿಗಳ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇನ್ನೊಂದು ಕಡೆ ಇದೇ ಚಿಗುಳೆ ಗ್ರಾಮಕ್ಕೆ ದಿನನಿತ್ಯ ಬಸ್ ವ್ಯವಸ್ಥೆ ಇದ್ದು ದಿನನಿತ್ಯ ಸಂಚಾರ ಮಾಡುತ್ತದೆ. ದಿನೇ ದಿನೇ ಚಿಗುಳೆ ಗ್ರಾಮ ತುಂಬಾ ಬೆಳೆಯುತ್ತಿದೆ. ದಿನ ನಿತ್ಯ ಸಾಕಷ್ಟು ವಿದ್ಯಾರ್ಥಿಗಳು ಕಣಕುಂಬಿಗೆ ಬರುತ್ತಾರೆ. ಪ್ರಸ್ತುತ ಈ pwd ರಸ್ತೆ ಕಾಮಗಾರಿಗೆ ಬರೀ ಕಲ್ಲಿನ ಕಡಿಯಾಕಿರುವುದು ಹಾಗೂ ಅರಣ್ಯ ಇಲಾಖೆ ತಡೆ ಹಿಡಿದಿರುವುದರಿಂದ ಈ ಭಾಗದ ಜನತೆಗೆ ತುಂಬಾ ತೊಂದರೆಯಾಗುತ್ತಿದೆ.
ಆದ್ದರಿಂದ ಕಣಕುಂಬಿ ಹಾಗೂ ಚಿಗುಳೆ ಗ್ರಾಮದ ಗ್ರಾಮಸ್ಥರ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಸ್ಥಳೀಯರ ಅಭಿಪ್ರಾಯ ಸಂಗ್ರಹ ಮಾಡಿ ಬೆಳಗಾವಿ ಜಿಲ್ಲೆಯ ಉಪ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಆದ ಇ. ಎನ್ ಕ್ರಾಂತಿ ಅವರ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಈ ರಸ್ತೆ ಕಾಮಗಾರಿಗೆ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಬಸವರಾಜು




