ಯಳಂದೂರು: ಹೆಣ್ಣು ಸಿಗದೇ ಎಸ್ಟೋಜನ ಯುವಕರು ದೇವಸ್ಥಾನಗಳಿಗೆ ನೆಡೆದುಕೊಂಡು ಹೋಗುವುದು, ತಲೆಕೂದಲು ತೆಗಿಸುವುದು ಮುಂತಾದ ಹರಕೆಗಳನ್ನು ಹೊತ್ತುಕೊಳ್ಳುವುದು, ನೋಡುತ್ತಾ ಬಂದಿದ್ದೇವೆ ಇವತ್ತಿನ ಯುವಕರಲ್ಲಿ ಇಂತಹ ಸ್ಥಿತಿ ನೋಡುತಿದ್ದೇವೆ.

ಆದರೆ ಯಳಂದೂರು ತಾಲೂಕಿನ ವೈ ಕೆ ಮೋಳೆ ಗ್ರಾಮದಲ್ಲಿ ಯುವಕರು ಊರಿನ ಹೊರಗಡೆ ಇದ್ದ ದೇವರ ಮೂರ್ತಿಯನ್ನು ಸ್ವಚ್ಛಗಳಿಸಿ ಪೂಜೆಯನ್ನು ಮಾಡಲು ಮುಂದಾಗಿದಾಗ ಊರಿನ ಮುಖಂಡರಾದ ಬಸವರಾಜು ರವರು ಯಾವತ್ತು ಇಲ್ಲದ ಸ್ವಚ್ಛತೆ ಇವಾಗ ಯಾಕೆ ಎಂದು ಯುವಕರನ್ನು ಕೇಳಿದಾಗ ಗ್ರಾಮದ ಕೆಲ ಮದುವೆ ಆಗದೆ ಮನನೊಂದ ಯುವಕರು ಈ ರೀತಿಯಾಗಿ ಉತ್ತರಿಸಿದರೆ ಮದುವೆಗೆ ಹೆಣ್ಣು ನೋಡಲು ಹೋದರೆ ಹುಡುಗ ಏನು ಕೆಲಸಮಾಡುತ್ತಾನೆ. ನಮಗೆ ಗೋವರ್ನಮೆಂಟ್ ಕೆಲಸದ ಹುಡುಗಬೇಕು ಎಂದು ಹೇಳುತ್ತಾರೆ.
ಸರ್ಕಾರಿ ನೌಕರಿ ಇಲ್ಲದ ನಮಂತಹ ಹುಡುಗರು ಏನುಮಾಡಬೇಕು ಈ ದೇವರ ಪೂಜೆಯಲ್ಲಿ ತೊಡಗಬೇಕು ಅಷ್ಟೇ ಈ ದೇವರ ಆಶೀರ್ವಾದದಿಂದಾದರು ನಮಗೆ ಹೆಣ್ಣು ಸಿಗಲಿ ಎಂದು ವೈ ಕೆ ಮೋಳೆಯ ಯುವಕರು ಸುಮಾರು ದಿನಗಳಿಂದ ಸ್ವಚ್ಛತೆ ಕಾಣದೆ ಇದ್ದ ಅರಳಿಮರದ ಕೆಳಗೆ ಇರುವ ದೇವರ ಮೂರ್ತಿಗೆ ಪೂಜೆಮಾಡಿ ಜನರಿಗೆ ಮಜ್ಜಿಗೆ ಪಾನಕ ನೀಡಿದರು.
ಊರಿನ ಜನರು ಇವರ ಮದುವೆಯ ನೆಪದಲಾದರು ಸ್ವಚ್ಛತೆ ಆಯ್ತು ಎಂದು ಈ ಸ್ವಚ್ಛತೆ ಮಾಡಿದ ಹುಡುಗರಿಗೆ ಮೆಚ್ಚಿಗೆ ನೀಡಿದರು.ಮನನೊಂದ ಯುವಕರಾದ ಅಭಿ, ವೆಂಕಟೇಶ್, ಪ್ರಜ್ವಲ್, ಸಿದ್ದರಾಜು, ಪ್ರಸಾದ್, ಅಗ್ನಿ ಹಾಜರಿದ್ದರು. ಇವರ ಈ ದೇವರ ಸ್ವಚ್ಛತೆಯ ಕಾರ್ಯಕೆ ಗೆಳೆಯರಾದ ವಿಶ್ವ, ರಾಕೇಶ್, ಹಾಗೂ ಮುಂತಾದವರು ಖುಷಿಯನ್ನು ವ್ಯಕ್ತಪಡಿಸಿದರು.




