ಬೆಂಗಳೂರು: ರಾಜ್ಯ ಸರ್ಕಾರದಿಂದ ಮೇಡ್ ಇನ್ ಕರ್ನಾಟಕ ಕಂಪ್ಯೂಟರ್ ಅಭಿವೃದ್ಧಿಪಡಿಸಲಾಗಿದ್ದು, ಇಂದು ಬಿಡುಗಡೆ ಮಾಡಲಾಗುವುದು.
ಸರ್ಕಾರದಿಂದಲೇ ಕಂಪ್ಯೂಟರ್ ಅಭಿವೃದ್ಧಿ ವಿಶ್ವದಲ್ಲೇ ಮೊದಲು. ಇಂದಿನಿಂದ ‘ಕಿಯೋ’ ಬುಕಿಂಗ್ ಶುರುವಾಗಲಿದ್ದು, ಎರಡು ತಿಂಗಳಲ್ಲಿ ಡೆಲಿವರಿ ಮಾಡಲಾಗುವುದು.
ಐಟಿಬಿಟಿ ಇಲಾಖೆ, ಕಿಯೋನಿಕ್ಸ್ ಸಹಯೋಗದಲ್ಲಿ ಕರ್ನಾಟಕದ ಸ್ಟಾರ್ಟ್ ಅಪ್ ಗಳು ನಿರ್ಮಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ಕಿಯೋ ಹೆಸರಿನ ಕಂಪ್ಯೂಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಂಗಳೂರು ಟೆಕ್ ಸಮಿಟ್ 2025ರ ಉದ್ಘಾಟನೆ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಇದು ಸರ್ಕಾರವೇ ಅಭಿವೃದ್ಧಿಪಡಿಸಿದ ಮೊದಲ ಎಐ ಪರ್ಸನಲ್ ಕಂಪ್ಯೂಟರ್ ಆಗಿದೆ. ಇಂತಹ ಪ್ರಯತ್ನ ವಿಶ್ವದಲ್ಲಿ ಮೊದಲು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.




