Ad imageAd image

ಪ್ರಾಕೃತಿಕ ಚಿಕಿತ್ಸಾ ಪದ್ದತಿ ಮನುಷ್ಯನ ಭಾಗವಾಗಲಿ : ಡಾ.ರೂಪೇಶ ಎಕಲಾರಕರ್

Bharath Vaibhav
ಪ್ರಾಕೃತಿಕ ಚಿಕಿತ್ಸಾ ಪದ್ದತಿ ಮನುಷ್ಯನ ಭಾಗವಾಗಲಿ : ಡಾ.ರೂಪೇಶ ಎಕಲಾರಕರ್
WhatsApp Group Join Now
Telegram Group Join Now

ಚಿಟ್ಟಾ ರಸ್ತೆಯ ಯೋಗ ಕೇಂದ್ರದಲ್ಲಿ 8ನೇ ಪ್ರಾಕೃತಿಕ ಚಿಕಿತ್ಸಾ ದಿನಾಚರಣೆ

ಬೀದರ : ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುವ ಬದಲು ಉನ್ನತ ಶಿಕ್ಷಣ ಪಡೆದು, ಉತ್ತಮ ಚಿಂತನೆಗಳನ್ನು ಮೈಗೂಡಿಸಿಕೊಂಡು ಸದೃಢ ದೇಶ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಅದಕ್ಕಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೆ ಅವಶ್ಯವಾಗಿದೆ ಹಿಂದಿನ ಕಾಲದಲ್ಲಿ ಜನರು ಪ್ರಾಕತಿಕ ಚಿಕಿತ್ಸಾ ವಿಧಾನವನ್ನು ಅಳವಡಿಸಿ ಕೊಂಡು ಆರೋಗ್ಯವಂತರಾಗಿದ್ದರು ಆದರೆ ಆಧುನಿಕ ಕಾಲದಲ್ಲಿ ವಿದೇಶಿ ಜೀವನ ಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯ ಪೂರ್ಣವಾದ ಬದುಕು ನಡೆಸಲು ಹೆಣಗಾಡು ವಂತಾಗಿದೆ ಎಂದು ಸಿದ್ರಾಮೇಶ್ವರ ಆಯುರ್ವೇದ ಮೇಡಿಕಲ್ ಕಾಲೇಜಿನ ಪ್ರಾಚಾರ್ಯರು ಹಾಗೂ ಐ.ಎನ್.ಓ ಪೋಷಕರಾದ ಡಾ.ರೂಪೇಶ ಎಕಲಾರಕರ್ ಹೇಳಿದರು.

ಅಂತರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆ (ಐ.ಎನ್.ಓ), ಸೂರ್ಯ ಫೌಂಡೇಶನ್, ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ, ಆಯುಶ ಇಲಾಖೆ ಭಾರತ ಸರ್ಕಾರ ಇವರ ಸಂಯುಕ್ತಾಶ್ರಯದಲ್ಲಿ ನಡೆದ 8ನೇ ಪ್ರಾಕೃತಿಕ ಚಿಕಿತ್ಸೆ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಯುವಕರು ಉತ್ತಮ ಹವ್ಯಾಸವನ್ನು ಹಾಗೂ ಪ್ರಾಕತಿಕ ಚಿಕಿತ್ಸಾ ಪದ್ದತಿಯನ್ನು ಅಳವಡಿಸಿಕೊಂಡು ಆರೋಗ್ಯವಂತ ಬದುಕನ್ನು ನಡೆಸಿದರೆ ಮಾತ್ರ ದೇಶ ಅಭಿವದ್ಧಿ ಕಾಣಲು ಸಾಧ್ಯ. ನಮ್ಮದೆಯಾದ ಯೋಗ, ಧ್ಯಾನ, ಪ್ರಾಕೃತಿಕ ಚಿಕಿತ್ಸೆಯನ್ನು ವಿದೇಶಿಯರು ಕಲಿತು ಉತ್ತಮ ಬದಕು ಹಾಗು ಆರೋಗ್ಯವನ್ನು ರೂಢಿಸಿಕೊಳ್ಳುತ್ತಿದ್ದಾರೆ. ನಮ್ಮ ಯುವ ಜನಾಂಗ ಇದನ್ನು ತಮ್ಮಲ್ಲಿಯೂ ಅಳವಡಿಸಿಕೊಳ್ಳ ಬೇಕು ಎಂದು ಹೇಳಿದರು.

ಈ ನಿಟ್ಟಿನಲ್ಲಿ ದೇಶದೆಲ್ಲೆಡೆ ಪ್ರಾಕೃತಿಕ ಚಿಕಿತ್ಸಾ ಶಿಕ್ಷಣ ಸಂಸ್ಥೆಗಳು ಪ್ರಾರಂಭಗೊಂಡು ಪಾರಂಪರಿಕ ಪದ್ಧತಿಯನ್ನು ಶಾಸ್ತ್ರೀಯವಾಗಿ ಕಲಿಸಿ ಅದನ್ನು ಪ್ರಸಾರಪಡಿಸುವ ಕಾರ್ಯ ವೇಗದಿಂದ ಸಾಗುತ್ತಿದೆ ಜನರಿಂದ ಕೂಡ ಉತ್ತಮ ಸಹಕಾರ ದೊರೆಯುತ್ತಿದೆ ಇನ್ನು ಹೆಚ್ಚಿನ ಪ್ರಚಾರ ಹಾಗೂ ಪ್ರಸಾರದ ದೃಷ್ಟಿಯಿಂದ ಪ್ರತಿ ವರ್ಷ ನವೆಂಬರ 18ರಂದು ‘ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ’ವನ್ನು ಆಚರಿಸಲಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಐ.ಎನ್.ಓ ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ ಈ ದಿನ ಬರಿಯ ಆಚರಣೆಯಾಗದೆ ಮತ್ತು ಈ ಪ್ರಕೃತಿ ಚಿಕಿತ್ಸೆಯು ಉಳ್ಳವರ ಆಯ್ಕೆಯಾಗದೆ ಜನಸಾಮಾನ್ಯರ ದೈನಂದಿನ ಜೀವನಕ್ರಮವಾಗಬೇಕು ಈ ನಿಟ್ಟಿನಲ್ಲಿ ದೇಶಾದ್ಯಂತ ಸೂರ್ಯ ಫೌಂಡೇಶನ್ ಸಂಸ್ಥಾಪಕರಾದ ಪದ್ಮಶ್ರೀ ಜಯಪ್ರಕಾಶ್ ಅಗ್ರವಾಲ್ ಅವರ ಮಾರ್ಗದರ್ಶನದಲ್ಲಿ ಹಾಗೂ ಐ.ಎನ್.ಓ ರಾಷ್ಟ್ರೀಯ ಅದ್ಯಕ್ಷರು ನಮ್ಮ ಬೀದರ ಜಿಲ್ಲೆಯವಾರದ ಅನಂತ ಬಿರಾದಾರ ಅವರ ನೇತೃತ್ವದಲ್ಲಿ ಅನೇಕ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತಿವೆ ಎಂದರು.

ಐ.ಎನ್.ಓ ರಾಜ್ಯ ಕಾರ್ಯದರ್ಶಿ ಯೋಗೇಂದ್ರ ಯದಲಾಪುರೆ, ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ ಮಾತನಾಡಿದರು.

ಈ ಸಂದರ್ಭದಲ್ಲಿ ಐ.ಎನ್.ಓ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಪ್ರಮುಖರಾದ ಉಮಾದೇವಿ ಹೂಗಾರ, ಶಿವಮೂರ್ತಿ ಬಟನಾಪುರೆ, ಹುಲೆಪ್ಪಾ ಬಿರಾದಾರ, ವಿಶ್ವನಾಥ ಮಠಪತಿ, ಶಿವಶರಣಪ್ಪಾ ಮೂಲಗೆ,‌ ರಮೇಶ ಬಿರಾದಾರ, ಅಶೋಕ ರೆಡ್ಡಿ, ಲಲಿತಾ ಗಾದಗೆ, ಭಾರತಿ, ನವೀನ ಘುಳೆ, ನಾಗರಾಜ ಸ್ವಾಮಿ ಸೇರಿದಂತೆ ಐ.ಎನ್.ಓ ಹಾಗೂ ಪತಂಜಲಿ ಯೋಗ ಸಮಿತಿಯ ಸದಸ್ಯರಿದ್ದರು.

ವರದಿ:ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!