ಬೆಳಗಾವಿ : ರಾತ್ರಿ ರೂಮ್‌ನಲ್ಲಿ ಮಲಗಿದ್ದ ನಾಲ್ವರ ಪೈಕಿ ಮೂವರು ಯುವಕರು (boys) ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದು (death), ಮತ್ತೊಬ್ಬ ಯುವಕ ಅಸ್ವಸ್ಥನಾಗಿರುವಂತಹ ಘಟನೆ ಅಮನ್ ನಗರದಲ್ಲಿ ನಡೆದಿದೆ. ರಿಹಾನ್ ಮತ್ತಿ(22), ಸರ್ಫರಾಜ್(22), ಮೊಯಿನ್ ನಲಬಂದ್(22) ಮೃತರು.
ಗಂಭೀರವಾಗಿ ಅಸ್ವಸ್ಥಗೊಂಡಿರುವ ಮತ್ತೊಬ್ಬನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾತ್ರಿ ನಾಮಕರಣ ಕಾರ್ಯಕ್ರಮ ಮುಗಿಸಿಕೊಂಡು ನಾಲ್ವರು ಯುವಕರು ಬಂದಿದ್ದಾರೆ. ಚಳಿ ಹಿನ್ನೆಲೆ ರೂಮ್‌ನಲ್ಲಿ ಬೆಂಕಿ ಹಾಕಿಕೊಂಡು ಮಲಗಿದ್ದಾರೆ. ಸೊಳ್ಳೆ ಕಾಟ ಹಿನ್ನೆಲೆ ನಾಲ್ಕೈದು ಮಸ್ಕಿಟೋ ಕಾಯಿಲ್ ಹಾಕಿ ಮಲಗಿದ್ದಾರೆ.
ಹೊಗೆ ಹೊರಹೋಗಲು ಕಿಟಕಿ ಓಪನ್ ಮಾಡದ ಹಿನ್ನೆಲೆ ಇಡೀ ಕೊಠಡಿ ತುಂಬಾ ಹೊಗೆ ಆವರಿಸಿದ್ದು, ಉಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸ್ಥಳ ಪಂಚನಾಮೆ ಬಳಿಕ ಮೃತದೇಹಗಳನ್ನ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ.
ಜೊತೆಗೆ ಬೂದಿಯ ಸ್ಯಾಂಪಲ್ಸ್ ಅನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ. ಇಂದು ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಿ ಶವಸಂಸ್ಕಾರ ಸಾಧ್ಯತೆ ಇದೆ.




