Ad imageAd image

ಕೊಡದೂರ–ಡೊಣ್ಣೂರ ರಸ್ತೆ ಕಾಮಗಾರಿಗೆ ಶಾಸಕ ಡಾ. ಅವಿನಾಶ ಜಾಧವ ಗುದ್ದಲಿ ಪೂಜೆ

Bharath Vaibhav
ಕೊಡದೂರ–ಡೊಣ್ಣೂರ ರಸ್ತೆ ಕಾಮಗಾರಿಗೆ ಶಾಸಕ ಡಾ. ಅವಿನಾಶ ಜಾಧವ ಗುದ್ದಲಿ ಪೂಜೆ
WhatsApp Group Join Now
Telegram Group Join Now

ಕಾಳಗಿ;  ಕೊಡದೂರು ಗ್ರಾಮದಿಂದ ಡೊಣ್ಣೂರ ಗ್ರಾಮದವರೆಗೆ 3.5 ಕಿಲೋಮೀಟರ್ ಡಾಂಬರೀಕರಣ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕರಾದ ಡಾ. ಅವಿನಾಶ ಜಾಧವ ಹಾಗೂ ರವಿರಾಜ ಕೊರವಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಕೆಆರ್‌ಐಡಿಎಲ್ ಯೋಜನೆಯ ಅಡಿಯಲ್ಲಿ 3.5 ಕೋಟಿ ರೂಪಾಯಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಈ ಮಹತ್ವಾಕಾಂಕ್ಷಿ ರಸ್ತೆ ಕಾಮಗಾರಿಯು ಗ್ರಾಮೀಣ ಪ್ರದೇಶದ ಸಾರಿಗೆ ಸುಗಮಗೊಳಿಸಲು ನೆರವಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಜಾಧವ ಅವರು,“ಯಾವ ಸರ್ಕಾರ ಅಧಿಕಾರದಲ್ಲಿದ್ದರೂ ಪರವಾಗಿಲ್ಲ; ರೈತರಿಗೆ, ಗ್ರಾಮಗಳಿಗೆ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸದೆ ಮುಂದುವರಿಸಲಾಗುತ್ತದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ನಾವು ಬದ್ಧ. ರೈತರೂ, ಗ್ರಾಮಸ್ಥರೂ ಒಗ್ಗಟ್ಟಿನಿಂದ ಸಹಕಾರ ನೀಡಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರವಿರಾಜ ಕೊರವಿ, ವಿಜಯಕುಮಾರ ಚೆಂಗಟಾ, ಶರಣು ಚಂದಾ, ಪ್ರದೀಪ ಕದಮ್, ಜಗನ್ನಾಥ ತೇಲಿ, ಪುರುಷೋತ್ತಮ ಗುತ್ತೇದಾರ, ರಮೇಶ್ ಕಿಟ್ಟದ್, ಶರಣು ಸಜ್ಜನ, ಅಯ್ಯಣ್ಣ ಕುಂಬಾರ್, ಮಹೇಂದ್ರ ಪೂಜಾರಿ,ಸೇರಿದಂತೆ ಸ್ಥಳೀಯ ಪದಾಧಿಕಾರಿಗಳು, ಗ್ರಾಮಸ್ಥರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ: ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!