ಕಾಗವಾಡ: ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. ಇವರಿಂದ ರೈತ ಸಮಾವೇಶ ನಡೆಯಿತು.
ಈ ಸಮಾವೇಶದಲ್ಲಿ ರೈತರಿಗಾಗಿ ಹೋರಾಟ ಮಾಡಿದ ರಾಜ್ಯಾಧ್ಯಕ್ಷರು ಚಿನ್ನಪ್ಪ ಪೂಜಾರಿ,ಶಶಿಕಾಂತ ಗುರೂಜಿ, ಶ್ರೀಶೈಲ ಅಂಗಡಿ, ಮಾಜಿ ಶಾಸಕರಾದ ಮೋಹನಶಾ.
ಮಹಾರಾಷ್ಟ್ರ ರೈತ ಸಂಘದ ಮುಖಂಡರಾದ ರಾಜು ಶೆಟ್ಟಿ, ಶೀತಲ ಪಾಟೀಲ ಸುರೇಶ ಕುಸಾನಾಳೆ, ಮತ್ತು ಇನ್ನು ಮುಂತಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.
ಮೊದಲಿಗೆ ಮಹಾವೀರ ಸರ್ಕಲ್ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಎಂಬ ನಾಮಫಲಕವನ್ನು ಉದ್ಘಾಟನೆ ಮಾಡಿದರು.
ಹಾಗೂ ವೇದಿಕೆ ಮೇಲೆ ಆಗಮಿಸಿದಂತ ಗಣ್ಯಮಾನ್ಯರಿಗೂ ರೈತರಿಗೂ. ಹಸಿರು ಶಾಲು ಹೊದಿಸಿ ಸತ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕನ ನೆನೆದು ಮೌನಾಚರಣೆ ಕೂಡ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಶೈಲ ಅಂಗಡಿ ಅವರು ಗುರ್ಲಾಪುರದಲ್ಲಿ ರೈತರ ಹೋರಾಟಕ್ಕಾಗಿ ಬೆನ್ನೆಲುಬಾಗಿ ನಿಂತದ್ದು ಚೆನ್ನಪ್ಪ ಪೂಜಾರಿ ಶಶಿಕಾಂತ ಗುರೂಜಿ ಈ ಜೋಡೆತ್ತುಗಳು ಎಂದು ಹೇಳಿದರು.
ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಆಯಿತು ಇನ್ನು ಪ್ರತಿಯೊಂದು ಹೊರಡಬೇಕಾಗಿದೆ ಎಂದು ಹೇಳಿದರು.
ಮಾಜಿ ಶಾಸಕರು ಆದಂತಹ ಶ್ರೀ ಮೋಹನ ಶಾ. ರವರು ಮಾತನಾಡಿ ನಾನು ರೈತರಿಂದ ಶಾಸಕನಾಗಿದ್ದೆನೆ. ಅದಕ್ಕಾಗಿ ನನ್ನ ಬೆಂಬಲ ರೈತರಿಗಾಗಿ ಸದಾಕಾಲ ಇರುತ್ತದೆ. ಎಂದು ಹೇಳಿದರು ತೂಕದ ಸೇತುವೆಯನ್ನು ನಿರ್ಮಿಸಲು 2 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ಘೋಷಣೆ ಮಾಡಿದರು.
ಚಿನ್ನಪ್ಪ ಪೂಜಾರಿ ಅವರು ತಮ್ಮ ಭಾಷಣದಲ್ಲಿ ಸಕ್ಕರೆ ಕಾರ್ಖಾನೆಯವರು. ಅವರು ಉದ್ದಾರ ಆಗಲಿಕ್ಕೆ ಮಾತ್ರ ಕಾರ್ಖಾನೆಯನ್ನು ಕಟ್ಟಿದ್ದಾರೆ ಹೊರತು ರೈತರನ್ನು ಉದ್ದಾರ ಮಾಡಲು ಅಲ್ಲಾ ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ರೈತರು,ಇನ್ನು ಮುಂದೆ ನೀವು ಒಗ್ಗಟ್ಟಾಗಿರಿ. ಎಂದು ಹೇಳಿದರು.
ಹಾಗೂ ಮಹಾರಾಷ್ಟ್ರದ ರೈತ ಸಂಘದ ಮುಖಂಡರು ಆದ ರಾಜು ಶೆಟ್ಟಿರವರು ಮಾತನಾಡಿ. ನಮ್ಮ ಭಾಷೆ ಬೇರೆ ನಿಮ್ಮ ಭಾಷೆ ಬೇರೆ ಆದರೂ ನಾವೆಲ್ಲರೂ ಒಂದೇ. ನಾವೆಲ್ಲರೂ ಒಟ್ಟಾಗಿ ಹೋರಾಡಿದರೆ ಈ ತರಹದ ಫಲ ಸಿಕ್ಕೇ ಸಿಗುತ್ತದೆ. ಇಷ್ಟು ವರ್ಷ ಕಾರ್ಖಾನೆ ಅವರು ರೈತರ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದು ಸಾಕು. ಮುಂದೇ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶದಲ್ಲಿ ನಾನು ಮಹಾರಾಷ್ಟ್ರದಿಂದ ರೈತರನ್ನು ಕರೆದುಕೊಂಡು ಬರುತ್ತೇನೆ ನಿಮ್ಮ ಹಿಂದೆ ನಿಲ್ಲುತ್ತೇನೆ ಎಂದರು.
ಅದೇ ರೀತಿಯಾಗಿ ಶಶಿಕಾಂತ ಗುರುಜಿ ಅವರ ತಮ್ಮ ಭಾಷಣದಲ್ಲಿ ಮಹಾರಾಷ್ಟ್ರದಲ್ಲಿ ಕಬ್ಬಿನ ಬೆಲೆ ಇರುವಂತೆ ನಾವು ಇಲ್ಲಿ ತೆಗೆದುಕೊಳ್ಳೋಣ.
ಇಲ್ಲಿ ಬಂಗಾರಕ್ಕೆ ಬೆಲೆ ಇದೆ ನಮ್ಮ ಕಬ್ಬಿಗೆ ಬೆಲೆ ಇಲ್ಲ. ಇನ್ನು ಮುಂದೆ ಕಾರ್ಖಾನೆಯವರು ತೂಕದಲ್ಲಿ ಏನಾದರೂ ವ್ಯತ್ಯಾಸ ಮಾಡಿದರೆ. 24 ಗಂಟೆಯಲಿ ಕಾರ್ಖಾನೆಯನ್ನು ಬಂದ್ ಮಾಡುತ್ತೇವೆ ಎಂದರು. ಮೊನ್ನೆ ನಡೆದ ಗುರ್ಲಾಪುರ ಹೋರಾಟದಲ್ಲಿ ರೈತರು ಯುವಕರು ತಾಯಂದಿರು ಅನೇಕರು ಬಹಳಷ್ಟು ಬೆಂಬಲ ನೀಡಿದ್ದೀರಿ ನಿಮಗೆಲ್ಲ ಧನ್ಯವಾದಗಳು ಎಂದು ಹೇಳಿದರು.
ವರದಿ : ಭರತ ಮೂರಗುಂಡೆ




