Ad imageAd image

ಕಿರಾಣಿ ಅಂಗಡಿಗಳೇ ಈಗ ವೈನ್ ಶಾಪ್‌ಗಳು..!

Bharath Vaibhav
ಕಿರಾಣಿ ಅಂಗಡಿಗಳೇ ಈಗ ವೈನ್ ಶಾಪ್‌ಗಳು..!
WhatsApp Group Join Now
Telegram Group Join Now

———————–ತಾಲೂಕಿನಲ್ಲಿ ಅಕ್ರಮ ಮಧ್ಯ ಮಾರಾಟ ನಿರಂತರ..!

———————————ಸಂಪರ್ಕಕ್ಕೆ ಸಿಗದ ಅಬಕಾರಿ ಅಧಿಕಾರಿಗಳು.!!

ಕಾಗವಾಡ:  ತಾಲೂಕಿನಾದ್ಯಂತ ಸಾಕಷ್ಟು ವೈನ್ ಶಾಪ್‌ಗಳು, ಬಾರ್‌ಗಳಿದ್ದರೂ ಅಬಕಾರಿ ಇಲಾಖೆಯ ಟಾಗ್ರೆಟ್ ರಿಚ್ ಆಗುತ್ತಿಲ್ಲ. ಆದ್ದರಿಂದ ಇಲಾಖೆಯ ಅಧಿಕಾರಿಗಳು ಟಾಗ್ರೆಟ್ ರಿಚ್ ಮಾಡುವ ಜೊತೆಗೆ ತಮ್ಮ ಜೇಬು ಗರಂ ಮಾಡಿಕೊಳ್ಳುವ ಉದ್ದೇಶದಿಂದ ತಾಲೂಕಿನ ಗ್ರಾಮಗಳ ಕೆಲ ಕಿರಾಣ ಅಂಗಡಿಗಳನ್ನೇ ಈಗ ವೈನ್ ಶಾಪ್‌ಗಳಾಗಿ ಮಾರ್ಪಾಡು ಮಾಡಿದ್ದಾರೆ.

ಇದರಿಂದ ಅಧಿಕಾರಿಗಳು ಮದ್ಯ ಪ್ರೀಯರಿಗೆ ಅನುಕೂಲು ಮಾಡಿಕೊಟ್ಟು, ಕುಡುಕರ ಆಶೀರ್ವಾದ ಪಡೆದುಕೊಂಡು, ಪುಣ್ಯಪ್ರಾಪ್ತಿ, ಧನಪ್ರಾಪ್ತಿ ಮಾಡಿಕೊಳ್ಳುತ್ತಿದ್ದಾರೆ. ಹೌದು ವಿಕ್ಷಕರೇ ಕಾಗವಾಡ ತಾಲೂಕಿನ ವಿವಿಧ ಗ್ರಾಮಗಳ ಕಿರಾಣಿ ಅಂಗಡಿಗಳೇ ಈಗ ವೈನ್ ಶಾಪ್‌ಗಳಾಗಿ ಮಾರ್ಪಟ್ಟಿವೆ. ಕೆಂಪವಾಡ, ನವಲಿಹಾಳ, ಶಿರಗುಪ್ಪಿ, ಗ್ರಾಮಗಳ ಕಿರಾಣಿ ಅಂಗಡಿಗಳಲ್ಲಿ ಮಧ್ಯ ಮಾರಾಟದ ಪ್ರಕಟಣಗಳು ಬೆಳಕಿಗೆ ಬರುತ್ತಿದ್ದು, ಇನ್ನೂ ಅನೇಕ ಗ್ರಾಮಗಳಲ್ಲಿಯೂ ಇದೇ ರೀತಿ ಮಧ್ಯ ಮಾರಾಟ ನಿರಂತರವಾಗಿದೆ.

ಈ ಕುರಿತು ಅಬಕಾರಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೇ ಅವರು ಕರೆಗಳನ್ನೇ ಸ್ವೀಕರಿಸುವುದಿಲ್ಲ. ಕೆಂಪವಾಡ ಮತ್ತು ನವಲಿಹಾಳ ಗ್ರಾಮಗಳ ರಸ್ತೆ ಪಕ್ಕದಲ್ಲಿರುವ ಕಿರಾಣಿ ಅಂಗಡಿಗಳಲ್ಲಿಯೇ ರಾಜಾರೋಷವಾಗಿ ಮಧ್ಯೆ ದೊರೆಯುತ್ತಿದೆ. ಅವರನ್ನು ಈ ಕುರಿತು ಪ್ರಶ್ನೆ ಮಾಡಿದರೇ ನಾವು ಅಬಕಾರಿ ಅಧಿಕಾರಿಗಳಿಗೆ ಹಪ್ತಾ ನೀಡುತ್ತೇವೆ ಎಂದು ಉತ್ತರಿಸುತ್ತಾರೆ. ಇವರಿಗೆ ಕಿರಾಣಿ ಅಂಗಡಿಗಳಲ್ಲಿ ಮಧ್ಯ ಮಾರಾಟಕ್ಕೆ ಪರವಾನಿಗೆ ನೀಡಿದರ‍್ಯಾರು..? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಜೊತೆಗೆ ರಸ್ತೆ ಪಕ್ಕದ ಅಂಗಡಿಗಳಲ್ಲಿಯೇ ಮಧ್ಯೆ ಮಾರಾಟದಿಂದಾಗಿ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗುತ್ತಿದ್ದರೂ ಸಹ ಅಧಿಕಾರಿಗಳು ಮಾತ್ರ ತಮ್ಮ ಟಾಗ್ರೆಟ್ ರಿಚ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಬೊಕ್ಕಸ ತುಂಬುವ ಕಾರ್ಯವನ್ನು ಅಬಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡುತ್ತ, ತಾವು ಶ್ರೀಮಂತರಾಗುತ್ತಿದ್ದಾರೆ.

ಏನೇ ಆಗಲಿ ಕುಡುಕರಿಗೆ ಮಾತ್ರ ಇದರಿಂದ ಅನುಕೂಲವಾಗಿದ್ದು, ಅವರು ಆಶೀರ್ವಾದದಿಂದ ಅಧಿಕಾರಿಗಳ ಪುಣ್ಯದ ಟಾಗ್ರೆಟ್ ಗ್ರಾಫ್ ಕೂಡಾ ಏರುತ್ತಿದ್ದು, ದೇವರೂ ಕೂಡಾ ಇವರಿಗಾಗಿ ಸ್ವರ್ಗದಲ್ಲಿ ಸ್ಥಳ ಕಾಯ್ದಿರಿಸಿ, ಇಲ್ಲಿಯೂ ಸಹ ಮಧ್ಯ ಮಾರಾಟ ಮಾಡಿ, ನಮ್ಮನ್ನೂ ಉದ್ಧಾರ ಮಾಡಿ ಎನ್ನುತ್ತಿರುಬಹುದೇ..? ಎಂಬ ಪ್ರಶ್ನೆಗೆ ಅಬಕಾರಿ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.

ವರದಿ: ಮುರಗೇಶ ಗಸ್ತಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!