ಬೆಂಗಳೂರು : ಸಿಎಂ ಸಿದ್ದರಾಮಯ್ಯ ಸರ್ಕಾರ ಎರಡೂವರೇ ವರ್ಷ ಪೂರೈಸಿದ್ದು, ಅಧಿಕಾರ ಹಂಚಿಕೆ ಚರ್ಚೆ ಜೋರಾಗಿದೆ.
ಈ ನಡುವೆ ಹಳ್ಳಿಹಕ್ಕಿ MLC ವಿಶ್ವನಾಥ್ ಸಿದ್ದರಾಮಯ್ಯ ಅವರಿಗೆ ಕೌಂಟರ್ ನೀಡಿದ್ದಾರೆ.ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ತಲಾ 30 ತಿಂಗಳು ಅಧಿಕಾರದ ಹಂಚಿಕೆ ಒಡಂಬಡಿಕೆ ಆಗಿದೆ.
ಹೀಗಾಗಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಅಧಿಕಾರವನ್ನು ಡಿ.ಕೆ.ಶಿವಕುಮಾರ್ಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಿಶ್ವನಾಥ್, ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇಬ್ಬರೂ ಸಿಎಂ ಕುರ್ಚಿಗೆ ಕಚ್ಚಾಟ ಮಾಡ್ತಿದ್ದಾರೆ.
ನೀವಿಬ್ಬರೂ ಸೇರಿ ತೆಗೆದುಕೊಂಡ ತೀರ್ಮಾನ 50:50 ಅನುಪಾತ ಅಲ್ಲವೇ? ನೀವಿಬ್ಬರೂ ಪರಸ್ಪರ ಒಪ್ಪಿ ನೀವು ಡಿ.ಕೆ.ಶಿವಕುಮಾರ್ ತಲೆಯ ಮೇಲೆ ನಿಮ್ಮ ಬಲಗೈ ಇಟ್ಟು 30 ತಿಂಗಳ ನಂತರ ನಿನಿಗೆ ಅಧಿಕಾರ ಹಸ್ತಾಂತರ ಮಾಡುತ್ತೇನೆಂಬ ನೀವು ಕೊಟ್ಟ ವಚನ ಸತ್ಯೆವಲ್ಲವೇ? ಎಂದು ಪ್ರಶ್ನೆ ಮಾಡಿದ್ರು.
ಸಿಎಂ ಸಿದ್ದರಾಮಯ್ಯಗೆ ಅಧಿಕಾರದ ದಾಹ. ಹೀಗಾಗಿಯೇ ಕುರ್ಚಿ ಬಿಟ್ಟು ಕೊಡುತ್ತಿಲ್ಲ.ಉಳಿದ 2.5 ವರ್ಷಗಳ ಅವಧಿಗೆ ನಾನೇ ಸಿಎಂ ಆಗಿರಬೇಕು ಎಂಬುದು ಅವರ ಆಸೆ. ಹೀಗಾಗಿಯೇ ಬೆಂಬಲಿಗರ ಮೂಲಕ ತಮ್ಮ ಆಸೆ ಹೇಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.




