ಲಿಂಗಸ್ಗೂರು: ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆಗೆ ಹೊಸದಾಗಿ ಆಗಮಿಸಿದ ದಕ್ಷ ಪೊಲೀಸ್ ಇನ್ಸ್ಪೆಕ್ಟರ್ ಶಿವನಂದ, ಅ. ಗಾ. ದಿನಾಂಕ 15 ನವಂಬರ್ 2025 ರಂದು ಅಧಿಕಾರ ಸ್ವೀಕಾರ ಮಾಡಿಕೊಂಡರು.
ಈ ಮೊದಲು ಬೀದರ್ ನಲ್ಲಿ ಸೈಬರ್ ಕ್ರೈಂ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಹಟ್ಟಿ ಪೊಲೀಸ್ ಠಾಣೆಯಲ್ಲಿ ಅಧಿಕಾರ ಸ್ವೀಕಾರ ಮಾಡಿಕೊಂಡಿರುವ ವಿಷಯ ತಿಳಿದು, ಪತ್ರಕರ್ತರಾದ ಸುನಿಲ್ ಕುಮಾರ್, ಶ್ರೀನಿವಾಸ್ ಮಧುಶ್ರೀ, ಅಂಬೇಡ್ಕರ್ ಸಂಘದ ಮಾಜಿ ಅಧ್ಯಕ್ಷರಾದ ಯೋಗಪ್ಪ ದೊಡ್ಮನಿ ಪೊಲೀಸ್ ಇನ್ಸ್ಪೆಕ್ಟರ್ ಇವರಿಗೆ ಸನ್ಮಾನ ಮಾಡೋ ಮೂಲಕ ಶುಭ ಹಾರೈಸಿದರು.




