ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಶ್ರೀ ವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ವಿಜಯಪುರ ಜಿಲ್ಲಾ ಸಹಕಾರಿ ಯುನಿಯನ್ ನಿಯಮಿತದ ಹಮ್ಮಿ ಕೊಂಡಿದ್ದ ಸಹಯೋಗದಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷ ಹಾಗೂ ಅಖಿಲ ಭಾರತ 72ನೇ ಸಹಕಾರಿ ಸಪ್ತಾಹ ಸಮಾರಂಭಕ್ಕೆ ಸಚಿವರಾದ ಶಿವಾನಂದ್ ಪಾಟೀಲ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಎಂದರೆ ಕುಡಿಯಲು ನೀರೂ ಸಿಗದ ಜಿಲ್ಲೆ ಎಂಬ ಮೂದಲಿಕೆಗೆ ಜಿಲ್ಲೆಯ ಹೈನು ಉತ್ಪಾದನೆಯಲ್ಲಿ ಮುಂದು ಇದೆ ಅಂತಾ ಹೇಳಿದರು.

ಪರಿಣಾಮ ರಾಜ್ಯದಲ್ಲಿ ನಿತ್ಯ 1.10 ಕೋಟಿ ಹಾಲು ಉತ್ಪದನೆ ಆಗುತ್ತಿದ್ದು, ವಿಜಯಪುರ ಜಿಲ್ಲೆ ಕ್ಷೀರ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂಬ ಸಾಧನೆಗೆ ಸಹಕಾರಿ ರಂಗ ಹಾಗೂ ಹಾಲು ಉತ್ಪಾದಕ ತಾಯಂದಿರೇ ಕಾರಣ ಎಂದು ಶ್ಲಾಘಿಸಿದರು.
ಇದೇ ಸಮಯದಲ್ಲಿ ಈರಣ್ಣ ಪಟ್ಟಣಶೆಟ್ಟಿ ಶಿವನಗೌಡ ಬಿರಾದಾರ ಬಾಲಚಂದ್ರ ಮುಂಜಾನೆ ಲೋಕನಾಥ್ ಅಗರ್ವಾಲ್ ಶಂಕರ್ ಗೌಡ ಪಾಟೀಲ್ ವಿಶ್ವನಾಥ್ ಪಾಟೀಲ್ ಶ್ರೀಕಾಂತ್ ಸಾರವಾಡ ರಾಜಶೇಖರ್ ಶಿರೋಳ್ ಶ್ರೀಶೈಲ್ ಹಂಗರಗಿ ಹಲವಾರು ಬ್ಯಾಂಕಿನ ಸಿಬ್ಬಂದಿಗಳು ಮತ್ತು ಊರಿನ ಮುಖಂಡರು ಉಪಸಿತರಿದ್ದರು.




