ಸಿಂಧನೂರು : ನ 21, ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಮುಖಂಡ ಚಂದ್ರು ಭೂಪಾಲ್ ನಾಡಗೌಡ ಮಾತನಾಡಿ ಈಗಾಗಲೇ ಭತ್ತ ಕಟಾವು ಎಲ್ಲೆಡೆ ನಡೆದಿದೆ ಇದುವರೆಗೂ ಕೂಡ ಭತ್ತ ಖರೀದಿ ಕೇಂದ್ರ ತಗಿದಿಲ್ಲ ಅಕಾಲಿಕ ಮಳೆಯಿಂದಾಗಿ ನಾಶವಾಗಿದ್ದ ಬೆಳೆಗಳನ್ನು ಬರೀ ವೀಕ್ಷಣೆ ಮಾಡಿದರೆ ಹೊರತು, ಸರ್ವೇ ಮಾಡಿ ಡಾಟಾ ಎಂಟ್ರಿ ಮಾಡಿಲ್ಲ ಈಗ ಎರಡನೇ ಬೆಳೆಗೆ ನೀರು ಕೊಡುವುದಿಲ್ಲ ರೈತರು ಸಹಕರಿಸಬೇಕು ಅಂತಿದಾರೆ ಇದು ಸ್ಥಳೀಯ ಶಾಸಕ ಹಾಗೂ ಸರ್ಕಾರದ ವೈಫಲ್ಯ ಎಂದು ಜೆಡಿಎಸ್ ಮುಖಂಡ ಚಂದ್ರುಭೂಪಾಲ್ ನಾಡಗೌಡ ಸರ್ಕಾರದ ವಿರುದ್ಧ ಚಾಟಿ ಬೀಸಿಇವತ್ತಿಗೂ ನಮ್ಮ ಭಾಗದ 33 ಟಿ.ಎಮ್.ಸಿ ನೀರು ಉಳಿದಿದೆ ಕಮ್ಮಿಯಾದರೆ ಭದ್ರಾ ನದಿಯಿಂದ ಐದಾರು ಟಿಎಮ್ ಸಿ ನೀರನ್ನು ಬಿಡಿಸಿ ಎರಡನೇ ಬೆಳೆಗೆ ಕೊಟ್ಟ ಉದಾಹರಣೆಗಳಿವೆ ಈಗಾಗಲೇ ಮಾಜಿ ಸಚಿವರು ಹಾಗೂ ಕೆಒಎಫ್ ರಾಜ್ಯಾಧ್ಯಕ್ಷರಾದ ವೆಂಕಟರಾವ್ ನಾಡಗೌಡ ಅವರ ಸಹಪಾಠಿಗಳು ಎಲ್ಲರೂ ಹೈದ್ರಾಬಾದ್ ಗೆ ಹೋಗಿ ಡ್ಯಾಮ್ ಗಳ ತಜ್ಞ ಕನ್ನಯ್ಯನಾಯ್ಡು ಅವರನ್ನು ಭೇಟಿ ಮಾಡಿ, ನೀರಿನ ಬಗ್ಗೆ ಗೇಟ್ ಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಬಂದಿದ್ದಾರೆ ಡಿಸಿಎಂ. ಡಿಕೆ ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಶರಣುಪ್ರಕಾಶ ಪಾಟೀಲ್, ತಂಗಡಗಿ, ಎನ್.ಎಸ್.ಭೋಸರಾಜ ಅವರ ಜೊತೆಗೆ ಮಾತನಾಡಿದ್ದಾರೆ. ಅವರಿಂದ ನೀರಿದ್ದರೆ ಕೊಡಬಹುದೆಂಬ ಮಾತುಗಳನ್ನಾಡಿದ್ದಾರೆ. ನ.14 ರಂದು ನಡೆದ ಐಸಿಸಿ ಸಭೆಯಲ್ಲೂ ಕೂಡ ಎರಡನೇ ಬೆಳೆಗೆ ನೀರು ಕೊಡುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.
ಹಾಗಾದರೆ ರೈತರ ಪರಿಸ್ಥಿತಿ ಏನು ಒಂದು ಕಡೆ ಭತ್ತ ಸೇರಿದಂತೆ ಎಲ್ಲಾ ಬೆಳೆಗಳು ನಾಶವಾಗಿವೆ. ಇನ್ನೊಂದು ಕಡೆ ಎರಡನೇ ಬೆಳೆಗೆ ನೀರಿಲ್ಲ ಅಂದರೆ ರೈತರ ಪರಿಸ್ಥಿತಿ ಏನು ಆಗುತ್ತದೆಂದು ಕಳವಳ ವ್ಯಕ್ತಪಡಿಸಿದರು.
ವರದಿ:ಬಸವರಾಜ ಬುಕ್ಕನಹಟ್ಟಿ




