ಬೆಂಗಳೂರು : ಕಾಲೇಜಿನ ದಿನಗಳಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಿಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು.ಇಲ್ಲಿ ಸೋಲು ಗೆಲುವು ಮುಖ್ಯ ಅಲ್ಲ. ನೀವು ಭಾಗವಹಿಸಿ ಪ್ರದರ್ಶನ ನೀಡುವುದು ಮುಖ್ಯ’ ಎಂದು ಬೆಂಗಳೂರು ಉತ್ತರ ಜಿಲ್ಲೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾಲಾಕ್ಷ ಟಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಚಿಕ್ಕಬಾಣಾವರದ ಆರ್ ಆರ್ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಉತ್ತರ ಜಿಲ್ಲೆ ಇವರ ಸಹಯೋಗದೊಂದಿಗೆ 2025 -26 ನೇ ಸಾಲಿನ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟಿಸಿ ಮಾತನಾಡಿದರು.
ನೀವು ಎಲ್ಲದರಲ್ಲೂ ಸಹ ಮೊದಲ ಸ್ಥಾನದಲ್ಲಿರಬೇಕು. ಕ್ರೀಡೆ, ಸಾಂಸ್ಕೃತಿಕ ಮತ್ತು ಓದಿನಲೂ ಸಹ ಮೊದಲ ಸ್ಥಾನ ಪಡೆದು ಇಡೀ ರಾಜ್ಯಕ್ಕೆ ಬೆಂಗಳೂರು ಉತ್ತರ ಜಿಲ್ಲೆ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯಬೇಕು’ಎಂದರು.
ಇಲ್ಲಿನ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲನೇ ಮತ್ತು ಎರಡನೇ ಬಹುಮಾನ ಪಡೆದವರು ಮುಂದೆ ನಡೆಯಲಿರುವ ಮಹಾಲಕ್ಷ್ಮಿಪುರಂನ ಬಿಜಿಎಸ್ ಕಾಲೇಜಿನಲ್ಲಿ ಭಾಗವಹಿಸಲು ಆಯ್ಕೆಯಾಗುತ್ತಾರೆ’ಎಂದು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಗುರುರಾಜ ಎಸ್ ದಾವಣಗೆರೆ ಮಾತನಾಡಿ,’ ಪ್ರಥಮ ಮತ್ತು ದ್ವಿತೀಯ ಪಿಯುಸಿ ಅವರಿಗೆ ಒಟ್ಟು 11 ವಿವಿಧ ಸ್ಪರ್ಧೆಗಳು ಇವೆ. 345 ಕಾಲೇಜಿನ ವಿದ್ಯಾರ್ಥಿಗಳು ನೋಂದಣಿ ಮಾಡಿಸಿ,1265 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಚರ್ಚಾ ಸ್ಪರ್ಧೆ, ಜಾನಪದ ನೃತ್ಯ, ಗಾಯನ, ರಸಪ್ರಶ್ನೆ, ಭಾವಗೀತೆ, ಪ್ರಬಂಧ ಸ್ಪರ್ಧೆ ಇನ್ನು ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ’ಎಂದು ತಿಳಿಸಿದರು.

ಸಮಾರಂಭದಲ್ಲಿ ಅತಿಥಿಗಳನ್ನು ಕಲಾತಂಡಗಳ ಜೊತೆಗೆ ಪೂರ್ಣ ಕುಂಭ ಕಳಸ ಹೊತ್ತ ವಿದ್ಯಾರ್ಥಿಗಳು ವೇದಿಕೆಗೆ ಕರೆ ತಂದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಂಸನಾ ಪತ್ರ ಮತ್ತು ಬಹುಮಾನ ನೀಡಲಾಯಿತು.
ಸಮಾರಂಭದಲ್ಲಿ ಕಾಲೇಜಿನ ಸಂಸ್ಥಾಪಕ ವೈ. ರಾಜಾರೆಡ್ಡಿ, ಕಾರ್ಯದರ್ಶಿ ಎಚ್.ಆರ್. ಕಿರಣ್, ನಿರ್ದೇಶಕ ಎಚ್.ಆರ್ ವರುಣ್, ಪ್ರಾಂಶುಪಾಲರಾದ ವೀರೇಶ್, ಗುರುರಾಜ ಎಸ್ ದಾವಣಗೆರೆ, ಬೆಂಗಳೂರು ಉತ್ತರ ಜಿಲ್ಲೆ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಸಂಧ್ಯಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಲಾಕ್ಷ ಟಿ, ಉಪಾಧ್ಯಕ್ಷರಾದ ಆನಂದಮೂರ್ತಿ, ಶ್ರೀಕಂಠಯ್ಯ, ಖಜಾಂಚಿ ವೇಣುಗೋಪಾಲ್ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪನ್ಯಾಸಕರು ಇದ್ದರು.
ವರದಿ :ಅಯ್ಯಣ್ಣ ಮಾಸ್ಟರ್




