Ad imageAd image

SSLC ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಅತ್ಯುನ್ನತ ಸ್ಥಾನಕ್ಕೇರಲು ಮಾಸ್ಟರ್ ಪ್ಲಾನ್

Bharath Vaibhav
SSLC ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಅತ್ಯುನ್ನತ ಸ್ಥಾನಕ್ಕೇರಲು ಮಾಸ್ಟರ್ ಪ್ಲಾನ್
WhatsApp Group Join Now
Telegram Group Join Now

———————————-ಯೋಜನೆ ರೂಪಿಸಿದ ಕಿತ್ತೂರು ಶಾಸಕರು ಮತ್ತು ಶಿಕ್ಷಣ ಇಲಾಖೆ

ಕಿತ್ತೂರು: ಕಿತ್ತೂರು ತಾಲ್ಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶದ ಹೆಚ್ಚಳಕ್ಕೆ ಹಾಗೂ ರಾಜ್ಯದಲ್ಲೇ ಕಿತ್ತೂರು ತಾಲ್ಲೂಕು ಅತ್ಯುನ್ನತ ಸ್ಥಾನ ಪಡೆಯಲು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಿತ್ತೂರು ಇವರ ಸಹಯೋಗದಲ್ಲಿ ತಾಲ್ಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅಭಿಪ್ರೇರಣಾ ಕಾರ್ಯಾಗಾರ 2025-26 ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಿತ್ತೂರು ಕಲ್ಮಠದ ರಾಜಗುರು ಸಂಸ್ಥಾನದ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲರ ಅಧ್ಯಕ್ಷತೆಯಲ್ಲಿ, ಬೆಳಗಾವಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಆದ ಲೀಲಾವತಿ ಹಿರೇಮಠ, ಬಿ.ಇ. ಓ ಚನ್ನಬಸಪ್ಪ ತುಭಾಕದ, ಸಿ.ಪಿ.ಐ ಶಿವಾನಂದ ಗುಡಗನಟ್ಟಿ, ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿಯರು ಆದ ಮಹಾದೇವಿ ಕುಡುಒಕ್ಕಲಿಗ ಸೇರಿದಂತೆ ಎಲ್ಲಾ ಶಿಕ್ಷಕರ ಸಹಯೋಗದಲ್ಲಿ ಖ್ಯಾತ ವ್ಯಕ್ತಿತ್ವ, ಕಲಿಕಾ, ಪ್ರೇರಣಾ ಗುರು R.V ಚೇತನ್ ರಾಮ್ ವಿಶೇಷ ಉಪನ್ಯಾಸದಲ್ಲಿ ರಾಜ್ಯದಲ್ಲೇ ಕಿತ್ತೂರು ತಾಲ್ಲೂಕು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಫಲಿತಾಂಶ ದಲ್ಲಿ ರಾಜ್ಯದಲ್ಲೇ ಅತ್ಯುನ್ನತ ಸ್ಥಾನ ಪಡೆಯಲು ಪಕ್ಕಾ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ.

ಇನ್ನೂ ಕಾರ್ಯಕ್ರಮದ ಸಂದರ್ಭದಲ್ಲಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿದ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಬೆಳಗಾವಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಲೀಲಾವತಿ ಹಿರೇಮಠ, Beo ಚನ್ನಬಸಪ್ಪ ತುಬಾಕದ ರವರು ಈ ಫಲಿತಾಂಶ ಹೆಚ್ಚಳದ ಬಗ್ಗೆ ಮಾತನಾಡಿದ್ದಾರೆ. ಒಟ್ಟಾರೆ ಈ ಭಾರಿ ಕಿತ್ತೂರು ತಾಲ್ಲೂಕು ಎಸ್.ಎಸ್.ಎಲ್.ಸಿ ಫಲಿತಾಂಶ ದಲ್ಲಿ ರಾಜ್ಯದಲ್ಲಿಯೇ ಅತ್ಯುನ್ನತ ಸ್ಥಾನ ಪಡೆಯುವುದೇ ಎಂಬುದನ್ನು ಕಾದುನೋಡಬೇಕಿದೆ.

ವರದಿ: ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!