ತುರುವೇಕೆರೆ: ತುಮಕೂರು ಜಿಲ್ಲಾ ಮಟ್ಟದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಕಬ್, ಬುಲ್ ಬುಲ್ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ತಾಲೂಕಿನ ಮಾಯಸಂದ್ರದ ಸೌರಭ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತುಮಕೂರಿನ ರೇಣುಕಾ ವಿದ್ಯಾಪೀಠ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಕಬ್, ಬುಲ್ ಬುಲ್ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಸೌರಭ ಕಾನ್ವೆಂಟಿನ ಸ್ಕೌಟ್ಸ್ ವಿಭಾಗದಲ್ಲಿ ನೂತನ್ ಕೆ.ವೈ, ಪರಿಣಯ್ ಸಿ.ಎಸ್, ಜಯಚಂದ್ರ ಟಿ.ಡಿ., ಶಶಾಂಕ್ ಎಂ, ಮೊಹಮ್ಮದ್ ಆಹಿಲ್, ಮೊಹಮ್ಮದ್ ಅಬೂಜರ್, ಮೊಹಮ್ಮದ್ ಅಫ್ನಾನ್, ಮೊಹಮದ್ ಅಯಾನ್ ತಂಡ ಹಾಗೂ ಕಬ್ ವಿಭಾಗದ ಅಬ್ದುಲ್ ವಹಾಬ್ ಅಫ್ನಾನ್, ಚೇತನ್ ಎಂ.ಜೆ, ಮೋಹನ್ ಯಾದವ್, ಸಫೀರ್, ಲೋಹಿತ್, ಮಹಮ್ಮದ್ ಅಜಾನ್, ಪವನ್ ಪಿ. ವಿದ್ಯಾರ್ಥಿಗಳನ್ನೊಳಗೊಂಡ ತಂಡಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಭಾಗವಾಗಿರುವ ಬೆಂಗಳೂರು ವಿಭಾಗಿಯ ಮಟ್ಟಕ್ಕÉ ಆಯ್ಕೆಯಾಗಿರುತ್ತಾರÉ.

ಉಳಿದಂತೆ ಗೈಡ್ಸ್ ವಿಭಾಗದಲ್ಲಿ ಶ್ರೇಯ ಕೆ.ಸಿ., ನೂರ್ ಸಾದಿಯಾ, ಖುಷಿ ಮಾಯಸಂದ್ರ, ಖುಷಿ ಎಂ, ನಿಧಿಶ್ರೀ ಯು, ಮಾನ್ಯ ಎಸ್, ಜಸ್ಮಿತಾಲಕ್ಷಿö್ಮÃ ತಂಡ ತೃತಿಯ ಸ್ಥಾನ ಪಡೆದರೆ, ಬುಲ್ ಬುಲ್ ವಿಭಾಗದಲ್ಲಿ ಪೂರ್ವಿಕ ಟಿ.ಎಂ, ರೋಹಿಣಿ, ಪೂರ್ಣಿಮಾ, ವರ್ಷಿಣಿ, ಮರಿಯ ಫಾತಿಮಾ, ದೀಕ್ಷಾ ಜೆ.ಪಿ. ಅವರನ್ನೊಳಗೊಂಡ ತಂಡ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇದಲ್ಲದೆ ಶಿಕ್ಷಕರ ವಿಭಾಗದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದಂತಹ ಮುನಿರಾಜು ಆರ್. (ಪ್ರೀಎ.ಎಲ್.ಟಿ ಸ್ಕೌಟ್ ಮಾಸ್ಟರ್) ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕÉ ಆಯ್ಕೆಯಾಗಿರುತ್ತಾರÉ.
ವಿಭಾಗೀಯ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು, ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕಲ್ಪನಾ ಮುನಿರಾಜು, ಸೌರಭ ಕಾನ್ವೆಂಟ್ ಶಾಲೆಯು ಅಪ್ಪಟ ಕನ್ನಡ ಶಾಲೆಯಾಗಿ ತಾಲೂಕಿನಲ್ಲಿ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದಲ್ಲಿನ ಶಿಕ್ಷಣ ಮಾತ್ರವಲ್ಲದೆ ಗುಣಾತ್ಮಕ ಹಾಗೂ ಮೌಲ್ಯಯುತ ಶಿಕ್ಷಣವನ್ನು ಶಾಲೆಯಲ್ಲಿ ನೀಡಲಾಗುತ್ತಿದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ, ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ. ಮಕ್ಕಳಲ್ಲಿ ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಮೌಲ್ಯಗಳನ್ನು, ದೇಶಪ್ರೇಮವನ್ನು ಮೂಡಿಸುವಂತಹ ಮೌಲ್ಯಯುತ ಶಿಕ್ಷಣವನ್ನು ನೀಡಲಾಗುತ್ತಿದೆ. ಮಕ್ಕಳ ಸರ್ವತೋಮುಖ ಪ್ರಗತಿ ಶಾಲೆಯ ಗುರಿಯಾಗಿದೆ ಎಂದರು.

ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿದಂತಹ ಎಲ್ಲಾ ವಿದ್ಯಾರ್ಥಿಗಳಿಗೆ ತುರುವೇಕೆರÉ ತಾಲೂಕಿನ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕಮಲ್ ರಾಜು, ತುಮಕೂರು ಜಿಲ್ಲಾ ಸಂಘಟನಾ ಅಧಿಕಾರಿ ನವೀನ್, ಶಿಕ್ಷಕರಾದ ನುಸರತ್ ಜಬಿನ್, ಲಲಿತಾ ಭಟ್, ಗೀತಾಮಣಿ, ಪ್ರಭ, ಸೌಮ್ಯ, ನಮಿರಾ ಖಾನಮ್, ವಾಹನ ಮಾಲೀಕರಾದ ಶಶಿಕುಮಾರ್, ಜಗದೀಶ್, ದಿನೇಶ್, ಅಝದ್ ಖಾನ್ ಹಾಗೂ ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್




