Ad imageAd image

ಜೈ ಭೀಮ ಯುವ ಶಕ್ತಿ ಸೇನಾ(ರಿ)ಸಂಘಟನೆಯಿಂದ ಸಾಮೂಹಿಕ ವಿವಾಹ 

Bharath Vaibhav
ಜೈ ಭೀಮ ಯುವ ಶಕ್ತಿ ಸೇನಾ(ರಿ)ಸಂಘಟನೆಯಿಂದ ಸಾಮೂಹಿಕ ವಿವಾಹ 
WhatsApp Group Join Now
Telegram Group Join Now

ಹುಬ್ಬಳ್ಳಿ: ನಗರದ ಕರ್ಕಿ ಬಸವೇಶ್ವರ ನಗರದ ಮುಖ್ಯದ್ವಾರ ಎದುರುಗಡೆ ಜೈ ಭೀಮ ಯುವ ಶಕ್ತಿ ಸೇನಾ(ರಿ) ಸಂಘಟನೆಯ ವತಿಯಿಂದ ದಿವ್ಯ ಸಾನಿಧ್ಯ ಬಸವಆನಂದ ಸ್ವಾಮಿಗಳು ಸಿದ್ದಾರೂಡ ಮಠ ಹುಬ್ಬಳ್ಳಿ ಪರಮಾಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು ರುದ್ರಾಕ್ಷಿ ಮಠ ರವರ ಸಮ್ಮುಖದಲ್ಲಿ ಸರ್ವಧರ್ಮ ಬಡ ಕುಟುಂಬಗಳಿಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಯಶಸ್ವಿಯಾಗಿ ಮಾಡಲಾಯಿತು.

ಸಂಘಟನೆಯ ಜಿಲ್ಲಾಧ್ಯಕ್ಷರಾದ ಹರೀಶ ಗುಂಟ್ರಾಳ, ಉಪಾಧ್ಯಕ್ಷ ವಿಜಯ್ ಮಾದರ,ಪ್ರಧಾನ ಕಾರ್ಯದರ್ಶಿ ರಮೇಶ್ ಹಿರೇಮನಿ ಹಾಗೂ ಸಂಘಟನೆಯ ಎಲ್ಲಾ ಸದಸ್ಯರ ನೇತೃತ್ವದಲ್ಲಿ ಉಚಿತ ಸಾಮೂಹಿಕ ಮದುವೆ ಮಾಡಲಾಯಿತು.

ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಸರಕಾರ ಇಂಧನ ಇಲಾಖೆ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ,ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆಯ ಸಂಸ್ಥಾಪಕ ರಾದ ಎಸ್ ಎಸ್ ಪಾಟೀಲ್, ಪೌರ ಕಾರ್ಮಿಕ ಸಂಘದ ಅಧ್ಯಕ್ಷರಾದ ವೆಂಕಟೇಶ್ ಅಶೋಕ್ ಕಾಟವೇ,ಕೆ ಜಿ ಪಿ ಪೌಂಡೆಶನ್ ಮಾಲೀಕರಾದ ಶ್ರೀಗಂಧ ಶೇಟ್,ಕನ್ನಡ ಚಲನಚಿತ್ರ ನಿರ್ದೇಶಕರಾದ ಶ್ರೀ ವಿನೋದ್ ಕುಮಾರ್ ಶೆಟ್ಟಿ, ಶಶಿಧರ್ ಬೀಜವಾಡ, ನದಾಫ್ ಪಿಂಜಾರ ಸಂಘದ ಉಪಾಧ್ಯಕ್ಷರಾದ ಶ್ರೀ ದಿವಾನ್ ನದಾಫ್, ಪೌರ ಕಾರ್ಮಿಕ ಸಂಘದ ಅಧ್ಯಕ್ಷರಾದ ವಿಜಯ್ ಗುಂಟ್ರಾಳ್ ಹಾಗೂ ಅನೇಕ ಗಣ್ಯರು ಉಚಿತ ಮದುವೆ ಸಮಾವೇಶವನ್ನು ಯಶಸ್ವಿಯಾಗಿ ಮಾಡಿದರು.

ವರದಿ: ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!