ಅಥಣಿ :ಪರಮ ಪೂಜ್ಯ ಪದ್ಮವಿಭೂಷಣ ಡಾ ಡಿ ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಪ್ರಯುಕ್ತ ಕಾಗವಾಡ ಯೋಜನಾ ಕಚೇರಿ ವ್ಯಾಪ್ತಿಯ ಮದಬಾವಿ ಗ್ರಾಮದ ಶ್ರೀ ಶಾರದಾದೇವಿ ಬುದ್ದಿಮಾಂದ್ಯ ವಸತಿ ಶಾಲೆಯ ಮಕ್ಕಳಿಗೆ ೪೫ ಹೊದಿಕೆ ಬ್ಲಾಂಕೆಟ್ ಸಿಹಿ ತಿಂಡಿ ವಿತರಿಸುವುದರ ಮೂಲಕ ಪೂಜ್ಯರ ಜನ್ಮದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮಾದೇವ ಕೋರೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ವಿನಾಯಕ ಬಾಗಡಿ ಜಿಲ್ಲಾ ಜನಜಾಗ್ರತಿ ಕೋಶಾಧಿಕಾರಿಗಳಾದ ವಿಠ್ಠಲ್ ಹಾಳ್ಳೊಳ್ಳಿ, ಡಾ ಸತೀಶ್ ಚೌಗಲಾ ಯೋಜನಾಧಿಕಾರಿಗಳಾದ ಸಂಜೀವ ಮರಾಠಿ ಮತ್ತು ಶಾಲಾ ಶಿಕ್ಷಕರು ಮೇಲ್ವಿಚಾರಕರು ಸೇವಾಪ್ರತಿನಿಧಿಗಳು ಕಾರ್ಯಕರ್ತರು ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವರದಿ :ಸುಕುಮಾರ ಮಾದರ




