ಸೇಡಂ: ಪಟ್ಟಣದ ನೌಕರರ ಭವನದಲ್ಲಿ ಹಮ್ಮಿಕೊಂಡಿರುವ ಶಿವಶರಣ ಮಾದರ ಚೆನ್ನಯ್ಯ ಅವರ ಮೂರ್ತಿ ಅನಾವರಣ ಹಾಗೂ ಜಯಂತ್ಯೋತ್ಸವ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸೇಡಂ ತಾಲೂಕಿನ ಮಾದಿಗ ಸಮಾಜ ಅಧ್ಯಕ್ಷರಾದ ಮಾರುತಿ ಕೊಡಂಗಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ನಮ್ಮ ಸೇಡಂ ನಲ್ಲಿ ಅನಾವರಣಗೊಳ್ಳುತ್ತಿರುವ ಶ್ರೀ ಶಿವಶರಣ ಮಾದರ ಚೆನ್ನಯ್ಯ ಅವರ ಮೂರ್ತಿ ರಾಜ್ಯದಲ್ಲೇ ಎರಡನೆಯದಾಗಿದ್ದು ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಮಾಡಬೇಕು ಇದಕ್ಕೆ ತಮ್ಮೆಲ್ಲರಿಗೂ ಜವಾಬ್ದಾರಿಯನ್ನು ನೀಡಲಾಗಿದೆ ಅದಕ್ಕೆ ಸಂಬಂಧಿಸಿದಂತೆ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮಾದಿಗ ಸಮಾಜದ ಒಗ್ಗಟ್ಟು ತಿಳಿಯಪಡಿಸಬೇಕು ಎಂದು ಹೇಳಿದರು.
ಇದೇ ವೇಳೆ ಶ್ರೀ ಶಿವಶರಣ ಮಾದರ ಚನ್ನಯ್ಯನವರ ಪುತ್ಥಳಿ ಸೇಡಂ ನಗರದಲ್ಲಿ ಡಿಸೆಂಬರ್ 28ರಂದು ಅನಾವರಣ ಹಾಗೂ 975ನೇ ಜಯಂತ್ಯೋತ್ಸವ ಸಮಾರಂಭಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು ಶ್ರೀ ಶಿವಶರಣ ಮಾದರ ಚನ್ನಯ್ಯನವರ ಪುತ್ಥಳಿ ಅನಾವರಣ ಹಾಗೂ ಜಯಂತ್ಯೋತ್ಸವ ಸಮಿತಿಗಳು ರಚಿಸಲಾಗಿದೆ ಆ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಆಯ್ಕೆ ಮಾಡಲಾಗಿದ್ದು ಅವರಿಗೆ ನೀಡಿರುವಂತಹ ಜವಾಬ್ದಾರಿಯನ್ನು ಶಿಸ್ತುಬದ್ಧವಾಗಿ ಒಗ್ಗಟ್ಟಿನಿಂದ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಪುತ್ಥಳಿಯ ಅನಾವರಣ ಜಯಂತ್ಯೋತ್ಸವ ಕಾರ್ಯಕ್ರಮ ಯಶಸ್ವಿಗೆ ಸರ್ವರೂ ಒಮ್ಮತದಿಂದ ಸಹಕರಿಸಿ ಎಂದು ಶ್ರೀ ಶಿವಶರಣ ಮಾದರ ಚನ್ನಯ್ಯನವರ ಪುತ್ಥಳಿಯ ಅನಾವರಣ ಹಾಗೂ 975 ನೇ ಜಯಂತೋತ್ಸವ ಕಾರ್ಯಕ್ರಮದ ಪ್ರಧಾನ ಸಂಯೋಜಕರಾದ ಬಸವರಾಜ ಮಳಗಿ ಹೇಳಿದರು.
ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿರುವ ಶ್ರೀ ಶಿವಶರಣ ಮಾದರ ಚನ್ನಯ್ಯನವರ ಪುತ್ಥಳಿಯ ಅನಾವರಣ ಹಾಗೂ 975 ನೇ ಜಯಂತ್ಯೋತ್ಸವ ಕಾರ್ಯಕ್ರಮದ ವಿವಿಧ ಸಮಿತಿಗಳ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಶಿವಶರಣ ಮಾದರ ಚನ್ನಯ್ಯನವರ ಭಾವಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಅವರವರ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಶಿಸ್ತಿನಿಂದ ತಮ್ಮ ಕಾರ್ಯವನ್ನು ನಿಭಾಯಿಸಿ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.
ಮಾದಿಗ ಸಮಾಜದ ಗೌರವ ಅಧ್ಯಕ್ಷ ಶಂಭುಲಿಂಗ ನಾಟಿಕರ್, ಶ್ರೀ ಶಿವಶರಣ ಮಾದರ ಚನ್ನಯ್ಯನವರ ಪುತ್ಥಳಿಯ ಅನಾವರಣ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ಜಗನ್ನಾಥ್ ಚಿಂತಪಳ್ಳಿ, ಅಶೋಕ್ ಪಿರಂಗಿ,ರಾಜು ಕಾಳಗಿಕರ್, ಶ್ರೀಶೈಲ್ ಎಂ.ಜಿ ವಿಜಯರಾಜ ಕೊರಡಂಪಳ್ಳಿ, ಮಾತನಾಡಿದರು.
ಈ ಸಂದರ್ಭದಲ್ಲಿ ನಾಗರಾಜ ನಂದೂರ, ಸುಂದರ ಮಂಗಾ ಮಳಖೇಡ, ವೆಂಕಟಪ್ಪ ಮೋತಕಪಲ್ಲಿ, ಹುಸನಪ್ಪ ಪಿರಂಗಿ ,ಅನಂತಯ್ಯ, ಭೀಮರಾಯ ಮುಡುಕಿ, ಬಂದಪ್ಪ ಬುರಗಪಲ್ಲಿ, ನರಸಪ್ಪ ರಂಜೋಳ , ಈಶ್ವರ ವಾಲಿಕಾರ ವಿಠಲ್ ಇಂಜಳ್ಳಿಕರ್, ರಾಮುಂಗ ಶಂಭು ಕುಕ್ಕುಂದಾ, ರಾಮು ಕಣೇಕಲ್, ನರಸಪ್ಪ ರಂಜೋಳ ,ದೇವು ನಾಟಿಕರ್, ಭೀಮು ಮುಧೋಳ್, ಅಶೋಕ್ ಬೀರನಳ್ಳಿ, ರವೀಂದ್ರ ಕಾಂಬಳೆ, ಕಾಶಿ ಬಸವನಗರ,ಲೋಕೇಶ್ ಹಂದರಕಿ, ಕೀರ್ತಿಕುಮಾರ್ ಮಾಳಗಿ, ಜಗನ್ನಾಥ್ ಬಿಜನಳ್ಳಿ, ಮುನಿಯಪ್ಪ ದೊಡ್ಮನಿ, ಅನೀಲ್ ರೆನೆಟ್ಲಾ, ಹನಮಂತ ಭರತನೂರ, ಸುರೇಶ್ ಬಿಜನಳ್ಳಿ, ಭಗವಂತ ಇಮಾಡಪೂರ, ವೆಂಕಟಪ್ಪ ಸುಗ್ಗಲ್,ಅಶೋಕ್ ರೆನೆಟ್ಲಾ, ಜಗನ್ನಾಥ್ ಇಂದ್ರಕರ್, ಭೀಮಶಂಕರ್ ಕೊರವಿ, ರವಿ ಎಲಪಳ್ಳಿ, ಹಣಮಂತ ಇಂಜಳ್ಳಿಕರ್ ,ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪುತ್ಥಳಿಯ ಅನಾವರಣ ಜಯಂತ್ಯೋತ್ಸವ ಸಮಿತಿಯ ಯುವ ಘಟಕದ ಅಧ್ಯಕ್ಷ ಮಾರುತಿ ಮುಗಟಿ ನಿರೂಪಣೆ ಮಾಡಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




