Ad imageAd image

ಸಂವಿಧಾನ ದಿನಾಚರಣೆಗೆ ಸರ್ವರೂ ಹಾಜರಾಗಲು ಚೇಳೂರು ತಹಸೀಲ್ದಾರ್ ಮನವಿ

Bharath Vaibhav
ಸಂವಿಧಾನ ದಿನಾಚರಣೆಗೆ ಸರ್ವರೂ ಹಾಜರಾಗಲು ಚೇಳೂರು ತಹಸೀಲ್ದಾರ್ ಮನವಿ
WhatsApp Group Join Now
Telegram Group Join Now

ಚೇಳೂರು: ತಾಲ್ಲೂಕಿನಲ್ಲಿ ನವೆಂಬರ್ 26, 2025 ರಂದು ಆಯೋಜಿಸಲಾಗಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಸಕಾಲದಲ್ಲಿ ಹಾಜರಾಗಬೇಕೆಂದು ತಹಸೀಲ್ದಾರ್ ಶ್ವೇತಾ ಬಿ.ಕೆ. ಅವರು ಕೋರಿದ್ದಾರೆ.

ಈ ಕುರಿತು ಅವರು ಮಂಗಳವಾರ ತಹಸೀಲ್ದಾರ್ ಕಚೇರಿಯಲ್ಲಿ ಪತ್ರಿಕಾ ಹೇಳಿಕೆಯನ್ನು ನೀಡಿ ಮಾತನಾಡಿದ ಅವರು ಸಂವಿಧಾನ ದಿನದ ಕಾರ್ಯಕ್ರಮವು ಬೆಳಗ್ಗೆ 10:00 ಗಂಟೆಗೆ ಪಟ್ಟಣದ ಕೆ.ಪಿ.ಎಸ್. ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಈ ಮಹತ್ವದ ಕಾರ್ಯಕ್ರಮಕ್ಕೆ ತಾಲ್ಲೂಕಿನಾದ್ಯಂತ ಪ್ರತಿಯೊಂದು ಸಂಘಟನೆಯ ಪದಾಧಿಕಾರಿಗಳು ಹಾಗೂ ಮುಖಂಡರು, ಅದರಲ್ಲೂ ವಿಶೇಷವಾಗಿ ದಲಿತಪರ ಸಂಘಟನೆಯ ಮುಖಂಡರು ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು ಎಂದು ತಹಸೀಲ್ದಾರ್ ಶ್ವೇತಾ ಬಿ.ಕೆ. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!