ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಖಾಸಭಾಗ ಯೋಜನಾ ಕಚೇರಿ ಬೆಳಗಾವಿ- 1 ಜಿಲ್ಲಾ ವ್ಯಾಪ್ತಿಯಲ್ಲಿ ಪರಮ ಪೂಜ್ಯ ಡಾ|| ಡಿ. ವಿರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಅಜಯ ಕಿವುಡ ಮತ್ತು ಮೂಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಪೂಜ್ಯರ ಜನ್ಮ ದಿನಾಚರಣೆ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷರಾದ ಬಸವರಾಜ ಸೊಪ್ಪಿಮಠ ರವರು ಭಾಗವಹಿಸಿ ಮಾತನಾಡಿದ ಅವರು ಪೂಜ್ಯರು ಸಾಮಾಜಿಕ ಸೇವೆಯ ಮೂಲಕ ಸಮಾಜದ ಆಸ್ತಿಯಾಗಿದ್ದಾರೆ.ಪೂಜ್ಯರ ಸಾಮಾಜಿಕ ಸೇವೆ ಗುರುತಿಸಿ ಭಾರತ ಸರ್ಕಾರ ಪೂಜ್ಯರನ್ನು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡುವ ಮೂಲಕ ದೇಶದ ಆಸ್ತಿಯಾಗಿ ಮಾಡಿದ್ದಾರೆ.
ಚತುರ್ವಿದ ದಾನ ಪರಂಪರೆಯನ್ನು ನಡೆಸಿಕೊಂಡು ಬರುವ ಮೂಲಕ ಧರ್ಮಸ್ಥಳ ಕ್ಷೇತ್ರವನ್ನು ಜಗದ್ವಿಖ್ಯಾತ ಗೊಳಿಸಿದ್ದಾರೆ.ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಮಾಡುವ ಮೂಲಕ ಸಮಾಜ ಸೇವೆಗೆ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.ಇವತ್ತು ಮೂಕ ಮತ್ತು ಕಿವುಡ ಮಕ್ಕಳ ಜೊತೆ ಹುಟ್ಟು ಹಬ್ಬ ಆಚರಣೆ ಮಾಡಿದ್ದು ಅರ್ಥಪೂರ್ಣವಾಗಿದೆ ಎಂದು ಮಾತನಾಡಿದರು.
ಅಯ್ಯಪ್ಪ ನವದುರ್ಗ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಆನಂದ ನಾರಾಯಣ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶೈಲಜಾ ಹಿರೇಮಠ, ಬಸವರಾಜ ಹಣ್ಣಿಕೇರಿ, ತಾಲ್ಲೂಕಿನ ಯೋಜನಾಧಿಕಾರಿಯವರಾದ ಸುಭಾಸ ಪಿ.ಸಿ. ಒಕ್ಕೂಟ ಅಧ್ಯಕ್ಷರಾದ ಸುನೀತಾ,ಶಾಲಾ ಸಹಶಿಕ್ಷಕರಾದ ಶಿಲ್ಪಾ ರವರು ಉಪಸ್ಥಿತರಿದ್ದರು.
ಮೇಲ್ವಿಚಾರಕ ಭರತ ಉಳ್ಳೂರು, ಕೃಷಿ ಮೇಲ್ವಿಚಾರಕ ಮಂಜುನಾಥ ಗೌಡ, ಸೇವಾಪ್ರತಿನಿಧಿ ಮಂಗಲಾ,ವಂದನಾ,ಗೀತಾ ಭಾಗವಹಿಸಿದ್ದರು.
ಮಹಾಂತೇಶ್: ಎಸ್ ಹುಲಿಕಟ್ಟಿ




