ಪಾವಗಡ :ಪಟ್ಟಣದಲ್ಲಿ ಇರುವ ಪ್ರವಾಸಿ ಮಂದಿರದಲ್ಲಿ ನಿಡಗಲ್ ಸಂಸ್ಥಾನ ಪೀಠದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಹಾಗೂ ಕೆ.ಎನ್. ರಾಜಣ್ಣ ಮಂತ್ರಿ ಮಾಡಲು ವಿಚಾರದೊಂದಿಗೆ ವಾಲ್ಮೀಕಿ ಶ್ರೀಗಳ ಗುರುವಾರ ಮಧ್ಯಾಹ್ನ 2 ಗಂಟೆ ಸಮಯಕ್ಕೆ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಮಾತನಾಡಿ ಕರ್ನಾಟಕ ರಾಜ್ಯದ ಪ್ರಸಕ್ತ ರಾಜಕಾರಣದಲ್ಲಿ ರಾಜ್ಯದ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದರೆ ಕರ್ನಾಟಕ ರಾಜ್ಯದ ಶೋಷಿತ ಸಮುದಾಯಗಳ ಬಹುದಿನಗಳ ಬೇಡಿಕೆಯಾದ ದಲಿತರ ಮುಖ್ಯಮಂತ್ರಿಯ ಬೇಡಿಕೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಈಡೇರಿಸಿ ದಲಿತ ಮುಖ್ಯಮಂತ್ರಿ ಯನ್ನು ಮಾಡಬೇಕೆಂದು ಒತ್ತಾಯಿಸಿದರು ಹಾಗೂ ಕರ್ನಾಟಕ ರಾಜ್ಯದ ಶೋಷಿತ ಸಮುದಾಯದ ಗಟ್ಟಿ ಧ್ವನಿ ಮಾಜಿ ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ಅವರನ್ನು ಮತ್ತೆ ಪುನರ್ ಸಂಪುಟಕ್ಕೆ ಸೇರಿಸಿಕೊಂಡು ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು
ಇದೇ ಸಂದರ್ಭದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷರಾದ ಪಾಳೇಗಾರ ಲೋಕೇಶ್ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಸಮುದಾಯದ ಮೂರು ಜನ ಶಾಸಕರಿಗೆ ಮಂತ್ರಿ ಸ್ಥಾನ ನೀಡಿ ಮಾನ್ಯ ನಾಗೇಂದ್ರ ಅವರನ್ನು ಹಾಗೂ ಕೆ.ಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ. ಮಾತನಾಡಿ ಅತಿ ಜೋರಾಗಿ ಮಾನ್ಯ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ವಾಲ್ಮೀಕಿ ಸಮುದಾಯದ ಕೆ.ಎನ್. ರಾಜಣ್ಣ ಅವರನ್ನು ಮಂತ್ರಿ ಮಾಡಿ ಸಮುದಾಯದ ಇನ್ನೊಬ್ಬ ಶಾಸಕರನ್ನು ನಾಗೇಂದ್ರ ಅವರ ಸ್ಥಾನಕ್ಕೆ ಮಂತ್ರಿ ಮಾಡಬೇಕಾಗಿ ಒತ್ತಾಯಿಸಿ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಸಮುದಾಯವನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು ಹಿಂದೆ ಬಿಜೆಪಿ ಸರ್ಕಾರ ವಾಲ್ಮೀಕಿ ಸಮುದಾಯದ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯ ಮಾಡುತ್ತೇವೆ ಎಂದು ಮೋಸ ಮಾಡಿದ್ದಕ್ಕೆ ವಾಲ್ಮೀಕಿ ಸಮುದಾಯ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ 15 ಕ್ಷೇತ್ರಗಳಲ್ಲಿ ಒಂದರಲ್ಲಿಯೂ ಸಹ ಬಿಜೆಪಿ ಗೆಲ್ಲದಂತೆ ತಕ್ಕ ಪಾಠ ಕಳಿಸಿದ್ದೇವೆ ವಾಲ್ಮೀಕಿ ಸಮಾಜ ರಾಜ್ಯದ ಮುಖ್ಯಮಂತ್ರಿ ಬದಲಾದರೆ ರಾಜ್ಯದ ದಲಿತ ಸಮುದಾಯದ ಪ್ರಬಲ ನಾಯಕರಾದ. ಕೆ ಎಚ್ ಮುನಿಯಪ್ಪ. ಸತೀಶ್ ಜಾರಕಿಹೊಳಿ. ಪರಮೇಶ್ವರ್. ಯಾರನ್ನಾದರೂ ದಲಿತ ಮುಖ್ಯಮಂತ್ರಿ ಮಾಡಬೇಕೆಂದು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಜಾಗೃತಿ ವೇದಿಕೆಯ ಕಾರ್ಯದರ್ಶಿ ಭಾಸ್ಕರ್ ನಾಯಕ. ಶಿವಪ್ಪ ಮೀನುಗುಂಟನಹಳ್ಳಿ ಹಾಜರಿದ್ದರು.
ವರದಿ: ಶಿವಾನಂದ




