Ad imageAd image

ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಜೀತುಲಾಲ್ ಪವರ್

Bharath Vaibhav
ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಜೀತುಲಾಲ್ ಪವರ್
WhatsApp Group Join Now
Telegram Group Join Now

ಸಿಂಧನೂರು:ನ 28,ರಾಜ್ಯ ಕೀಟ ಶಾಸ್ತ್ರಜ್ಞ ಅಧ್ಯಯನ ತಂಡದಿಂದ ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಮಹಿಬೂಬ್ ಕಾಲೋನಿ, ವೆಂಕಟೇಶ್ವರ ನಗರ, ಎಗ್ಗಾಪುರ, ವಾರ್ಡ್ ಗಳಿಗೆ ಭೇಟಿ ನೀಡಿ, ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ, ಹಾಗೂ ವಿಶೇಷವಾಗಿ ಆನೆಕಾಲು ರೋಗಗಳಿಗೆ ಕಾರಣವಾಗುವ ಸೊಳ್ಳೆಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಲಾಯಿತು.

ಮುಖ್ಯ ಉದ್ದೇಶ ಸಾಂಕ್ರಾಮಿಕ ರೋಗಗಳು ಹಬ್ಬಲಿಕ್ಕೆ ಕಾರಣವಾಗುವ ಸೊಳ್ಳೆಗಳ ವರ್ಗಿಕರಣದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲು ಅಗತ್ಯವಾದ ಪರಿಹಾರ ಕ್ರಮದ ಪ್ರಚಾರಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಬೀದರ ಜಿಲ್ಲೆಯ ಕೀಟ ಶಾಸ್ತ್ರಜ್ಞ ಜೀತುಲಾಲ್ ಪವರ್ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಈ ವೇಳೆ ಮೇಲ್ವಿಚಾರಕ ಎಚ್.ಎಫ್.ಅಣಗಿ ಮಾತನಾಡಿ, ಈಡಿಸ್ ಇಜಿಪ್ಟ್, ಅನೋಫಿಲಿಯಸ್, ಕುಲಿಕ್ಸ್ ಪ್ರಭೇದಗಳ ಸೊಳ್ಳೆಗಳ ಬೆಳವಣಿಗೆಗೆ ಮತ್ತು ಹರಡುವ ಸ್ಥಳಗಳನ್ನು ಪರೀಕ್ಷೆ ಮಾಡಿ, ಮುಂಜಾಗ್ರತಾ ಕ್ರಮಗಳಿಗೆ ಈ ಕಾರ್ಯಕ್ರಮ ಅನುಕೂಲವಾಗಿದೆ ಎಂದರು.

ಈ ವೇಳೆ ಆಶಾ ಕಾರ್ಯಕರ್ತರಾದ ಮಹಾನಂದಿ, ಮಹಾದೇವಿ, ಕಸ್ತೂರಿ, ಯಶೋಧ, ಈರಮ್ಮ, ಸರೋಜ, ಖಾಸಿಬಾಯಿ, ಸೇರಿದಂತೆ ಎಚ್.ಐ.ಒ. ಕೇಂದ್ರದ ಹನುಮಂತ, ಪಿಎಚ್ ಸಿಒ ತೇಜಾ, ಭಾಗವಹಿಸಿದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!