ಚಿಟಗುಪ್ಪ:ತಾಲ್ಲೂಕಿನ ಮನ್ನಾಏಖೇಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಗುರುವಾರ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದ ಹಿನ್ನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ಮಾಡಿದರು.ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಅಗಸಿ ಮಾತನಾಡಿ, ಮನ್ನಾಏಖೇಳ್ಳಿ ಗ್ರಾಮ ಪಂಚಾಯಿತಿ ಪಟ್ಟಣದ ಪಂಚಾಯಿತಿ ಮಾಡುವಂತೆ ಬಹುದಿನಗಳ ಬೇಡಿಕೆ ಆಗಿತ್ತು.ಅನೇಕ ಬಾರಿ ಶಾಸಕ ಮತ್ತು ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು.ಈಗ ರಾಜ್ಯ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಸಂತೋಷ ಹಳ್ಳಿಖೇಡ,ಮಹ್ಮದ ಫಾರೋಕ್ ಜಮಾದಾರ,ಹಾಗೂ ವೀರಸಂಗಣ್ಣ ಪಾವಡೆ, ಭೀಮಶಟ್ಟಿ ಹಸರಗುಂಡಗಿ,ಮಹಮ್ಮದ್ ಜಾವೀದ್ ಪೀರಸಾಬವಾಲೆ,ರಾಜಕುಮಾರ ರಾಯಗೊಂಡ,ಸೈಯದ್ ಖದೀರ್,ಸೈಯದ್ ಮುಬಿನ್,ಪ್ರಮುಖರಾದ ಯೂಸುಫ್ ಅಲಿ ಜಾಮಾದಾರ,ಮಲ್ಲಯ್ಯ ಸ್ವಾಮಿ,ಸುಭಾಷ ಅಲ್ಲರೆಡ್ಡಿ,ಡಾ.ರಫೀಕ್,ವಿನೋದ ಕೋಟೆ ಸೇರಿದಂತೆ ಇತರರು ಇದ್ದರು.




