Ad imageAd image

ಪ್ರಧಾನಿ ಮೋದಿಗೆ ಭಾರತ ಭಾಗ್ಯವಿದಾತ’ ಎಂಬ ವಿಶೇಷ ಬಿರುದು ನೀಡಿ ಸನ್ಮಾನ

Bharath Vaibhav
ಪ್ರಧಾನಿ ಮೋದಿಗೆ ಭಾರತ ಭಾಗ್ಯವಿದಾತ’ ಎಂಬ ವಿಶೇಷ ಬಿರುದು ನೀಡಿ ಸನ್ಮಾನ
WhatsApp Group Join Now
Telegram Group Join Now

ಉಡುಪಿ: ಶ್ರೀಕೃಷ್ಣನೂರು ಉಡುಪಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡರು. ಈ ವೇಳೆ ಪ್ರಧಾನಿ ಮೋದಿಯವರಿಗೆ ವಿಶೇಷ ಬಿರುದು ನೀಡಿ ಸನ್ಮಾನಿಸಲಾಯಿತು.

ಶ್ರೀಕೃಷ್ಣ ಮಠದ ಆವರಣದಲ್ಲಿ ನಡೆದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿಯವರಿಗೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು, ‘ಭಾರತ ಭಾಗ್ಯವಿದಾತ’ ಎಂಬ ವಿಶೇಷ ಬಿರುದು ನೀಡಿ ಸನ್ಮಾನಿಸಿದರು.

ಇದೇ ವೇಳೆ ರಾಷ್ಟ್ರ ರಕ್ಷಾ ಕವಚ, ಶ್ರೀಕೃಷ್ಣನ ಫೋಟೋಗಳನ್ನು ನೀಡಿ ಪ್ರಧಾನಿ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಪುತ್ತಿಗೆ ಶ್ರೀಗಳು ಕಾಶಿ ಕಾರಿಡಾರ್ ರೀತಿ ಉಡುಪಿ ಕಾರಿಡಾರ್ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿದರು. ಲಕ್ಷ ಕಂಠ ಗೀತಾ ಪಾರಾಯಣದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಲಾಯಿತು. ಈ ವೇಳೆ ಪ್ರಧಾನಿ ಮೋದಿ ಕೂಡ ಗೀತಾ ಪಾರಾಯಣ ಪಠಣ ಮಾಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!