ಬಾಗಲಕೋಟ : ಕುಡಚಿ ರೈಲ್ವೆ ಮಾರ್ಗ ಪೂರ್ತಿ ಗೊಳಿಸಲು ಮತ್ತು ಲೋಕಾಪುರ ನಿಲ್ದಾಣದವರೆಗೆ ರೈಲು ಸಂಚಾರ ಪ್ರಾರಂಭಿಸಬೇಕು ಹಾಗೂ ಲೋಕಾಪುರ ದಿಂದ ಧಾರವಾಡ ವರೆಗೆ ರೈಲ್ವೆ ಮಾರ್ಗದ ಕುರಿತು ಸರ್ವೆ ನಡೆಸಲು ಒತ್ತಾಯಿಸಿ ಬಾಗಲಕೋಟದಲ್ಲಿ ರೈಲ್ ರೋಖೋ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೆ ಹೋರಾಟ ಸಮಿತಿಯ ರಾಜ್ಯ ಅಧ್ಯಕ್ಷರಾದ ಕುತಬುದಿನ್ ಖಾಜಿ ಅವರು ಮಾತನಾಡಿ ಕಳೆದ 30 ವರ್ಷಗಳಿಂದ ಹೋರಾಟ ಮಾಡಿ ಕುಡಚಿ, ಬಾಗಲಕೋಟ ರೈಲ್ವೆ ಮಾರ್ಗ ಮಂಜೂರು ಮಾಡಿಸಲಾಗಿದೆ, ಲೋಕಾಪುರದವರೆಗೆ ಮಾರ್ಗ ನಿರ್ಮಾಣ ಕಾರ್ಯ ಮುಗಿದು, ಮುಂದೆ ಕುಡಚಿ ವರೆಗೆ ರೈಲು ಮಾರ್ಗ ನಿರ್ಮಾಣ ಮಾಡಲು ಕೇಂದ್ರ ಸರಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬೇಕೆಂದರೆ ಲೋಕಾಪುರ ದಿಂದ ಧಾರವಾಡ ವರೆಗೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಮುಂದಾಗಬೇಕು, ಇಲ್ಲಿ ಐತಿಹಾಸಿಕ ಧಾರ್ಮಿಕ ಸ್ಥಳಗಳು ಇವೆ. ಒಂದು ವರ್ಷದಲ್ಲಿ ಸುಮಾರು ಒಂದು ಕೋಟಿ ಜನ ಯಲ್ಲಮ್ಮನ ಜಾತ್ರೆ ಗೆ ಜನ ಬರುತ್ತಾರೆ. ಅದೇ ರೀತಿ ಶಿರಸಂಗಿ ಕಾಳಮ್ಮದೇವಿ ಜಾತ್ರೆಗೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. 2016-17 ರಲ್ಲಿ ಈ ಮಾರ್ಗದ ಸರ್ವೇ ಆಗಿದೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈಲ್ವೆ ಬೋರ್ಡ್ ಗೆ ಸರಿಯಾದ ಮಾಹಿತಿ ಹೋಗಿಲ್ಲ, ಕೂಡಲೇ ಲೋಕಾಪುರ ದಿಂದ ಧಾರವಾಡ ವರೆಗೆನ ರೇಲ್ವೆ ಮಾರ್ಗದ ಸರ್ವೆ ಆಗಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ತೀವ್ರಗೊಳಿಸುತ್ತೇವೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರೈಲ್ವೆ ನಿಲ್ದಾಣ ಎದುರು ಪ್ರತಿಭಟನೆ ಹೋರಾಟದ ಸ್ಥಳಕ್ಕೆ ಬಂದ ರೈಲ್ವೆ ಅಧಿಕಾರಿಯಾದ ರಾಜಕುಮಾರ ಅವರಿಗೆ ಲೋಕಾಪುರದಿಂದ ಧಾರವಾಡದ ವರೆಗೆ ರೈಲ್ವೆ ಮಾರ್ಗದ ಕುರಿತು ರೈಲ್ವೆ ಹೋರಾಟ ಸಮಿತಿಯ ಸದಸ್ಯ M k ಯಾದವಾಡ ಮನವಿ ಅರ್ಪಿಸಿದರು.
ಈ ಸಂಧರ್ಭದಲ್ಲಿ A R. ಪಠಾಣ್, ಚಂದ್ರು ಮಾಳದಕರ್, ಅಫ್ತಾಬ್ ಸರಮುಲ್ಲಾ ಹೋರಾಟದಲ್ಲಿ ಭಾಗವಹಿಸಿದ್ದರು.
ವರದಿ : ಮಂಜುನಾಥ ಕಲಾದಗಿ




