ಕಾಗವಾಡ : ತಾಲೂಕಿನ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ರೈತರು, ಟ್ರ್ಯಾಕ್ಟರ್ ಮತ್ತು ಲಾರಿ ಮಾಲೀಕರು ಮತ್ತು ಚಾಲಕರು ಕಾರ್ಖಾನೆಗಳಿಗೆ ಕಬ್ಬುಸಾಗಾಟ ಮಾಡುವಾಗ ಹಿಂದುಗಡೆ ಕಡ್ಡಾಯವಾಗಿ ರೆಡಿಯಂ ಬಾವುಟಗಳನ್ನು ರೆಡಿಯಂ ಸ್ಟಿಕಸ್ 9ಗಳನ್ನು ಅಳವಡಿಸಬೇಕು ಎಂದು ಕರವೇ ತಾಲೂಕ ಉಪಾಧ್ಯಕ್ಷರಾದ ಗಣೇಶ್ ಕೋಳಿಕರ್ ಆಗ್ರಹಿಸಿದರು.
ಅವರು ಶುಕ್ರವಾರ ಸ್ಥಳೀಯ ಶಿರಗುಪ್ಪಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ಅರುಣ ಪರಾಂಡೆ ಹಾಗೂ ಕಾಗವಾಡ ಪಿಎಸ್ಐ ರಾಘವೇಂದ್ರ ಖೋತ ಅವರಿಗೆ ಮನವಿ ಸಲ್ಲಿಸಿ ಮಾತನಾಡುತ್ತ ಕಬ್ಬು ಸಾಗಿಸುವ ಟ್ಯಾಕ್ಟರ್, ಎತ್ತಿನ ಬಂಡಿ ಲಾರಿಗಳ ಹಿಂಬದಿಯಲ್ಲಿ ರೇಡಿಯಂ ಸಿಕ್ಟರ್ ಅಳವಡಿಸುವುದರಿಂದ, ಹಿಂದಿನಿಂದ ಬರುವ ವಾಹನಗಳಿಗೆ ಕಬ್ಬು ಸಾಗಿಸುವ ವಾಹನಗಳು ಸರಿಯಾಗಿ ಕಾಣುವುದರಿಂದ ಅಪಘಾತ ಆಗುವುದಿಲ್ಲ ಆದಕಾರಣ ಸಕ್ಕರೆ ಕಾರ್ಖಾನೆಯವರು ಮತ್ತು ಟ್ಯಾಕ್ಟರ್, ಲಾರಿ ಮತ್ತು ಎತ್ತಿನ ಬಂಡಿ ರೆಡಿಯಂ ಸ್ಟಿಕರ್‌ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕುಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ. ಕರವೇ ತಾಲೂಕ ಅಧ್ಯಕ್ಷರಾದ ಸಿದ್ದು ಒಡಿಯರ್, ತಾಲೂಕ ಉಪಾಧ್ಯಕ್ಷ ಗಣೇಶ್ ಕೋಳಿಕರ್, ಅಸ್ಲಾಂ ಜಮಾದಾರ್, ಅಪಲಾಲ್, ಫಾರೂಕ್ ಅಲಾಸ್ಕರ್, ಸಚಿನ್ ಗಾವಡೆ, ಬಾಬಾಸಾಹೇಬ್ ಕೊತ್ತಲಗೆ, ಹಸನ್ ಪಾನಾರೆ.
ವರದಿ : ಚಂದ್ರಕಾಂತ ಕಾಂಬಳೆ




