ಸಂತೋಷ್ ಪೂಜಾರಿ ಇವರ ನೇತೃತ್ವದಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ಮುಖಾಂತರ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಮನವಿ.
ಚಿಕ್ಕೋಡಿ: ಕುರುಬ ಸಮಾಜಕ್ಕೆ ST ಮೀಸಲಾತಿಯನ್ನು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು.
ಕುರುಬ ಸಮಾಜಕ್ಕೆ ಮಿಸಲಾತಿ ಕೊಡಲು ಕುರಿತು. ಡಾ|| ಬಾಬಾಸಾಹೇಬ ಅಂಬೇಡ್ಕರವರ 1951 ರಲ್ಲಿ ಒಕ್ಕೂಟ ವ್ಯವಸೆಯಲ್ಲಿ ಹಲವಾರು ಸಮಾಜಗಳಲ್ಲಿ ಮೀಸಲಾತಿ ವಂಚಿತರಾಗಿದ್ದರು, ಎಂದು ಗಮನಿಸಿ ರಚಿಸಿದರು ಇದಕ್ಕಾಗಿ ಎ.ಎಡಿ ಲೊರಿಲಿಸ್ ಕಮೀಟಿಯನ್ನು ರಚಿಸಿದ್ದರು. ಆ ಕಮೀಟಿಯನ್ನು ಈ ಇಡಿ ದೇಶದಲ್ಲಿ ಸಮಾನ ಹಾಗೂ ಸಮೀಕ್ಷೆ ಮಾಡಿ ಸುಮಾರು 154 ಸಮಾಜಗಳ ಜನಾಂಗೀಯ ಅಧ್ಯಯನ ವರದಿಯನ್ನು ಆಧಾರದ ಮೇಲೆ ಕರ್ನಾಟಕದಲ್ಲಿ ಬೇವಿ ಕುರುಬರು, ಲಮಾಣಿ, ನಾಯಕ, ಬೇಡ ದಾಸರು, ಹೀಗೆ ಅನೇಕ ಸಮಾಜಗಳಿಗೆ ಮಿಸಲು ಕಲ್ಪಿಸಿದರು.

1976 ರಿಂದ 1986 ವರೆಗೆ ಕುರುಬ ಸಮಾಜಕ್ಕೆ ಮಿಸಲಾತಿ ಸಿಕ್ಕಿತ್ತು ಆದರೆ ಕೆಲವು ರಾಜಕೀಯ ಷಡ್ಯಂತರಗಳಿಂದ ಮಿಸಲಾತಿ ಕ್ಷೇತ್ರವನ್ನು ನಿಲ್ಲಿಸಿದರು.
ಸಂವಿಧಾನದಲ್ಲಿ ಮಿಸಲಾತಿ ವಿಷಯದಲ್ಲಿ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರವನ್ನು ಕೇಂದ್ರದಲ್ಲಿ ಬೇರೆ ಬಂದಂತಹ ಸರ್ಕಾರವು ತಿದ್ದುಪಡಿ ಮಾಡಬಾರದೆಂದು ಸಂವಿಧಾನದಲ್ಲಿದೇ.
ಆದರೂ ಕೂಡ ಕುರುಬ ಸಮಾಜಕ್ಕೆ ಅನ್ಯಾಯವಾಗಿದೆ 1986 ರಲ್ಲಿ ಸುಪ್ರೀಂ ಕೋರ್ಟ ಕುರುಬ ಸಮಾಜಕ್ಕೆ ಮೀಸಲಾತಿ ಕೊಡಬೇಕೆಂದು ಆದೇಶ ಮಾಡಿದೆ. ಆದೇಶದ ಮೇರೆಗೆ ಅವತ್ತಿನ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಒಂದು ಕಮೀಟಿಯನ್ನು ರಿಚಿಸಿತ್ತು
ಆ ಕಮೀಟಿಯಲ್ಲಿ ಎ. ಆರ್. ಪಾಟೀಲ, ಮಲ್ಲಿಕಾರ್ಜುನ ಖರ್ಗೆ ಸಿದ್ರಾಮಯ್ಯಾ ಮತ್ತು ಆಗಿನ ಮುಖ್ಯಮಂತ್ರಿ ಕೂಡ ಇದ್ದರು ಆದರೂ ಕೂಡ ಇನ್ನೂವರೆಗೂ ನಮ್ಮ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಮಾಡಲು ಸಾಧ್ಯವಾಗಿಲ್ಲ ಈ ಸಲ ಚಳಿಗಾಲ ಅಧಿವೇಶನದಲ್ಲಿ ನಮ್ಮ ಸಮಾಜಕ್ಕೆ ಎಸ್ಟಿ ಮೀಸಲಾತಿಗೆ ಸೇರಿಸಿಕೊಳ್ಳಲು ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.

-ಇದೇ ವಿಷಯವನ್ನು ಕುರಿತು ಕುರುಬ ಸಮಾಜದ ಎಸ್ ಟಿ ಮೀಸಲಾತಿ ಅಧ್ಯಕ್ಷರಾದ ಸಿದ್ದಣ್ಣ ತೆಜಿ ರಾಜ್ಯ ಕುರುಬರ ಸಂಘದ ಯುವ ಘಟಕದ ಅಧ್ಯಕ್ಷರಾದ ಶ್ರೀ ಹೆಗಡೆ ಇವರು ಮಾತನಾಡಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಕುರುಬರ ಸಮಾಜದ ಜಿಲ್ಲಾ ಅಧ್ಯಕ್ಷರಾದ ಸಂತೋಷ್ ಪೂಜಾರಿ,ಕರವೇ ಚಿಕ್ಕೋಡಿ ತಾಲೂಕಿನ ಅಧ್ಯಕ್ಷರಾದ ಸಂಜು ಬಡಿಗೇರ್,ಚಿಕ್ಕೋಡಿ ಸಮಾಜ ಸೇವಕರಾದ ಚಂದ್ರಕಾಂತ್ ಹುಕ್ಕೇರಿ, ಮಾಳು ಕರ್ಯಾಯನ್ನವರ್, ರಮೇಶ್ ಪಾಟೀಲ್, ಮರಿಯಪ್ಪ ತೇಲಿ, ಸಂಜು ಹಾಗೂ ಕುರುಬರ ಸಮಾಜದ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ :ರಾಜು ಮುಂಡೆ




