Ad imageAd image

ಪಿಎಂ ಕುಸುಮ್ – ಬಿ ಯೋಜನೆಯಡಿ ಸೋಲಾರ್ ಪಂಪ್ಸೆಟ್ ಗೆ ಅರ್ಜಿ ಆಹ್ವಾನ

Bharath Vaibhav
ಪಿಎಂ ಕುಸುಮ್ – ಬಿ ಯೋಜನೆಯಡಿ ಸೋಲಾರ್ ಪಂಪ್ಸೆಟ್ ಗೆ ಅರ್ಜಿ ಆಹ್ವಾನ
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯದಲ್ಲಿ MNRE ಮತ್ತು KREDL ಸಹಯೋಗದೊಂದಿಗೆ ರೈತರ ಜಮೀನಿನ ಕೊಳವೆ/ತೆರದ ಬಾವಿಗಳಿಗೆ ಸೋಲಾರ್ ಪಂಪ್-ಸೆಟ್ ಗಳನ್ನು ಅಳವಡಿಸಲು ರೈತರಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ, www.souramitra.com ವೆಬ್‌ಸೈಟ್ ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಸದರಿ ಪೋರ್ಟಲ್ ಮುಖಾಂತರ ಸೋಲಾರ್ ಪಂಪ್‌-ಸೆಟ್‌ಗಳ www.souramitra.com ನಲ್ಲಿ ಅರ್ಜಿ ನೋಂದಾಯಿಸಿಕೊಂಡು ವೆಂಡರ್ /ಏಜೆನ್ಸಿ ಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ರೈತಬಾಂಧವರಿಗೆ ತಿಳಿಯಪಡಿಸುವುದೇನೆಂದರೆ, PM-KUSUM Component-B ಯೋಜನೆಗೆ ಸಂಬಂಧಿಸಿದಂತೆ, www.kredi.karnataka.gov.in ವೆಬ್‌ಸೈಟ್‌ನಲ್ಲಿ ಹೊರಡಿಸಿದ ಪ್ರಕಟಣೆ/ಮಾಹಿತಿಗಳನ್ನು ಮಾತ್ರ ಪರಿಗಣಿಸಲು ಕೋರಲಾಗಿದೆ.

ಸೌರ ಪಂಪ್ ಸೆಟ್ ನೋಂದಣಿ ಹಾಗೂ ಪಾವತಿಗೆ ಸಂಬಂಧಿಸಿದಂತೆ www.souramitra.com ನಲ್ಲಿ ಹಾಗೂ KREDL ನ ಸಹಾಯವಾಣಿ ಸಂಖ್ಯೆ: 080-22202100 & 8095132100 ಮುಖಾಂತರ ಮಾತ್ರವೇ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ ಹಾಗೂ ಸದರಿ ನೋಂದಣಿ ಪ್ರಕ್ರಿಯೆಯಲ್ಲಿ ಸ್ವೀಕೃತವಾಗುವ ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ತಾವೇ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!