Ad imageAd image

ಚಿಣ್ಣರ ಕೈಯಲ್ಲಿ ಬೈಕ್‌: ಚೇಳೂರಿನ ರಸ್ತೆಗಳಲ್ಲಿ ಜೀವ ಭಯದ ಸವಾರಿ

Bharath Vaibhav
ಚಿಣ್ಣರ ಕೈಯಲ್ಲಿ ಬೈಕ್‌: ಚೇಳೂರಿನ ರಸ್ತೆಗಳಲ್ಲಿ ಜೀವ ಭಯದ ಸವಾರಿ
WhatsApp Group Join Now
Telegram Group Join Now

ಚೇಳೂರು : ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶದ ರಸ್ತೆಗಳಲ್ಲಿ ಅಪ್ರಾಪ್ತ ವಯಸ್ಕರು, ಅದರಲ್ಲೂ ಮುಖ್ಯವಾಗಿ ಶಾಲಾ ವಿದ್ಯಾರ್ಥಿಗಳು ಮೋಟಾರ್‌ ಸೈಕಲ್‌ ಚಾಲನೆ ಮಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಕನಿಷ್ಠ 16 ವರ್ಷ ವಯಸ್ಸನ್ನೂ ದಾಟದ ಮಕ್ಕಳು ಅತಿ ವೇಗದಲ್ಲಿ ವಾಹನ ಚಲಾಯಿಸುವುದು, ಅಪಾಯಕಾರಿಯಾಗಿ ‘ವೀಲಿಂಗ್’ ಮಾಡುವುದು ನಿರಂತರವಾಗಿ ನಡೆಯುತ್ತಿದ್ದರೂ, ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಚೇಳೂರು ಪೊಲೀಸ್‌ ಠಾಣೆಯ ಅಧಿಕಾರಿಗಳು ಹಬ್ಬದ ಸಭೆಗಳು ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಅಪ್ರಾಪ್ತರಿಗೆ ಬೈಕ್‌ ಕೊಡಬೇಡಿ, ವೀಲಿಂಗ್ ಮಾಡಿದರೆ ಕೇಸು ದಾಖಲಿಸುತ್ತೇವೆ ಎಂದು ಕೇವಲ ಎಚ್ಚರಿಕೆ ನೀಡುವುದಕ್ಕೆ ಸೀಮಿತರಾಗಿದ್ದಾರೆ. ಇದು ಕೇವಲ ಭಾಷಣದ ಭರವಸೆಯಾಗಿ ಉಳಿದಿದ್ದು, ವಾಸ್ತವದಲ್ಲಿ ಅಪ್ರಾಪ್ತ ಚಾಲಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶಾಲೆಗೆ ಹೋಗುವ ಮತ್ತು ಬರುವ ಸಮಯದಲ್ಲಿ ಶಾಲಾ ಸಮವಸ್ತ್ರದಲ್ಲೇ ಮಕ್ಕಳು ಬೈಕ್‌ಗಳನ್ನು ಓಡಿಸುತ್ತಾ, ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಓಡಾಡುವುದು ಪಟ್ಟಣದ ಪ್ರಮುಖ ವೃತ್ತಗಳು ಮತ್ತು ಶಾಲಾ ಮಾರ್ಗಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕೆಲವರು ಹೆಲ್ಮೆಟ್‌ ಧರಿಸದೆ, ಮೂರು ಜನ ಕೂತು ಚಲಾಯಿಸುವುದು ಕೂಡ ಕಂಡುಬಂದಿದೆ. ಅತಿ ವೇಗ ಮತ್ತು ಅಪಾಯಕಾರಿ ವೀಲಿಂಗ್‌ನಿಂದಾಗಿ ದಾರಿಹೋಕರು ಮತ್ತು ಇತರ ವಾಹನ ಚಾಲಕರು ರಸ್ತೆಯಲ್ಲಿ ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾನೂನಿನ ಪ್ರಕಾರ, ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ಮಾಡಲು ಅವಕಾಶವಿಲ್ಲ. ಒಂದು ವೇಳೆ ಅವರು ಅಪಘಾತ ಉಂಟುಮಾಡಿದರೆ, ಮಗುವಿಗೆ ವಾಹನ ನೀಡಿದ ಹೆತ್ತವರು ಅಥವಾ ಪೋಷಕರೇ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಪ್ರಮುಖ ಜವಾಬ್ದಾರರಾಗಿರುತ್ತಾರೆ. ಈ ಅಪರಾಧಕ್ಕೆ ಮಾಲೀಕರಿಗೆ ಗರಿಷ್ಠ ₹25,000 ದಂಡ ಮತ್ತು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಆದರೂ, ಸ್ಥಳೀಯ ಪೊಲೀಸರು ಕೇವಲ ಮೌಖಿಕ ಎಚ್ಚರಿಕೆ ನೀಡುತ್ತಾ, ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗದಿರುವುದು ಟೀಕೆಗೆ ಕಾರಣವಾಗಿದೆ. ಕೂಡಲೇ ಪೊಲೀಸ್‌ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (RTO) ಜಂಟಿ ಕಾರ್ಯಾಚರಣೆ ನಡೆಸಿ, ಅಪ್ರಾಪ್ತ ಚಾಲಕರು ಮತ್ತು ಅವರಿಗೆ ವಾಹನ ಒದಗಿಸಿದ ಪೋಷಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವರದಿ :ಯಾರಬ್. ಎಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!