Ad imageAd image

ಬುದ್ಧಿವಾದ ಹೇಳಿದ್ದಕ್ಕೆ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

Bharath Vaibhav
ಬುದ್ಧಿವಾದ ಹೇಳಿದ್ದಕ್ಕೆ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
WhatsApp Group Join Now
Telegram Group Join Now

ಗದಗ : ಬುದ್ಧಿವಾದ ಹೇಳಿದ್ದಕ್ಕೆ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗದಲ್ಲಿ ನಡೆದಿದೆ.ನಗರದ ಭೀಷ್ಮ ಕೆರೆಗೆ ಹಾರಿ ಚಂದ್ರಿಕಾ ನಡುವಿನಮನಿ (21) ಎನ್ನುವ ವಿದ್ಯಾರ್ಥಿನಿ ಆತ್ಮಹತ್ಯೆ ಶರಣಾಗಿದ್ದಾಳೆ.

ಚಂದ್ರಿಕಾ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿದ್ದಳು.

ಬಾಗಲಕೋಟೆಯ ಶಿರೂರು ಮೂಲದ ಚಂದ್ರಿಕಾ ಗದಗದಲ್ಲೇ ಬಾಡಿಗೆ ಮನೆಯಲ್ಲಿ ರೂಂ ಮಾಡಿ ವಾಸವಿದ್ದಳು.

ಗೆಳತಿಯರ ಜೊತೆ ರೂಮ್ನಲ್ಲಿ ವಾಸವಿದ್ದಳು ನೆನ್ನೆ ರಾತ್ರಿ 1:30ಕ್ಕೆ ಚಂದ್ರಿಕಾ ಹೊರಗಡೆ ಹೋಗಿದ್ದಾಳೆ. ಚಂದ್ರಿಕಾ ಶವವಾಗಿ ಪತ್ತೆಯಾಗಿದ್ದಾಳೆ. ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

ಎಸ್ ಎಸ್ ಎಲ್ ಸಿ ಪಿಯುಸಿಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿದೆ, ಇತ್ತೀಚಿಗೆ ಚಂದ್ರಿಕಾ ಓದುವುದರಲ್ಲಿ ಆಸಕ್ತಿ ಕಡಿಮೆ ಮಾಡಿದ್ದಳು ಹಾಗಾಗಿ ನಾನು ಸ್ವಲ್ಪ ಓದಿನ ಕಡೆಗೆ ಗಮನ ಕೊಡು ಚೆನ್ನಾಗಿ ಓದು ಅಂತ ಹೇಳಿದ್ದಕ್ಕೆ ಚಂದ್ರಿಕಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಚಂದ್ರಿಕಾ ಸಹೋದರ ಆಳಲು ತೋಡಿಕೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!