ಸಿಂಧನೂರು : ನ ೩೦, ರವಿವಾರ “ಸಿಂಧನೂರು ಗೆಳೆಯರ ಬಳಗ ಸಂಘ” ಸ್ಥಾಪನೆಗೊಂಡು ೫ ವರ್ಷ ತುಂಬಿದ ಹಿನ್ನೆಲೆ ವಾರ್ಷಿಕೋತ್ಸವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನಗರದ ಸರ್ಕಾರಿ ನೌಕರರ ಭವನದಲ್ಲಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಆಚರಿಸಲಾಯಿತು.
ಈ ವೇಳೆ: ಆರ್.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಸೋಮನಗೌಡ ಬಾದರ್ಲಿ, ಮುಖಂಡರಾದ ಮರಿಯಪ್ಪ ಬಿಎಸ್ಪಿ ಶಿವು ಗುಂಜಳ್ಳಿ, ಸೈಯಾದ್ ಆರೂನ್ ಸಾಬ್, ಎಂ.ಡಿ.ನದಿಮುಲ್ಲಾ, ಅಮರೇಶ ಗಿರಿಜಾಲಿ, ಹೊಳೆಯಪ್ಪ ದಿದ್ದಿಗಿ, ಶಿಕ್ಷಕ ವೀರೇಶ ಸಾಸಲಮರಿ, ವೀರೇಶ ಉಪ್ಪಲದೊಡ್ಡಿ, ದವಲಸಾಬ್ ದೊಡ್ಮನಿ, ಮೌನೇಶ ಜಾಲವಾಡಗಿ, ವೆಂಕಟೇಶ ನಾಯಕ, ಸೇರಿದಂತೆ ಅನೇಕರು ಈ ಪೋಸ್ಟರ್ ಬಿಡುಗಡೆಗೆ ಅತಿಥಿಗಳಾಗಿ ಭಾಗವಹಿಸಿ ಪೋಸ್ಟರ್ ಬಿಡುಗಡೆ ಗೊಳಿಸಿದರು.
ಈ ಬಳಗವು 28 ಜನವರಿ 2026 ರಂದು ರಂಗಮಂದಿರದಲ್ಲಿ 5 ನೇ ವರ್ಷದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಜೊತೆಗೆ ಪ್ರಬಂಧ ಸ್ಪರ್ಧೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾಕೂಟ ಮತ್ತು ಜೀ ಟಿವಿ ಕಾಮಿಡಿ ಕಲಾವಿದರಿಂದ ಹಾಸ್ಯ ಸಂಜೆ, ಮತ್ತು ಖ್ಯಾತ ಜನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಗೆ ಎಲ್ಲಾರು ಸಹಕರಿಸಲು ಕೋರಿದರು.
ಈ ವೇಳೆ: ಬಳಗದ ಅಧ್ಯಕ್ಷ ಸೈಯಾದ್ ಬಂದೇನವಾಜ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ, ಸಂಚಾಲಕ ವೀರೇಂದ್ರ ಶೆಟ್ಟಿ, ಖಜಾಂಚಿ ಬಸವರಾಜ ಬುಕನಹಟ್ಟಿ, ಸದಸ್ಯರಾದ ರಾಜು ನಾಯಕ, ಶ್ರೀಷಾ ಮೆಲೋಡಿಸ ಸಂಸ್ಥಾಪಕ ಅಲ್ಲಾಭಕ್ಷಿ, ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಇದ್ದರು. ಕಾರ್ಯಕ್ರಮದ ನಿರೂಪಣೆ ಉಮೇಶ ಕಲ್ಮಂಗಿ ನೆರವೇರಿಸಿದರು.
ವರದಿ:ಬಸವರಾಜ ಬುಕ್ಕನಹಟ್ಟಿ




