ಬೆಂಗಳೂರು: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಜನೆ ಜೊತೆಗೆ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸಿಕೊಡುತ್ತಿರುವ ಸನಾತನ ಧರ್ಮದ ಅಡಿಯಲ್ಲಿ ಜೀವನ ನಡೆಸುತ್ತಿರುವ ಬಹು ದೊಡ್ಡ ಹಿಂದೂ ರಾಷ್ಟ್ರ ದೇಶ ನಮ್ಮದು’ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಅಭಿಪ್ರಾಯಪಟ್ಟರು.
ಬಾಗಲಗುಂಟೆ ವಿಡಿಯಾ ಪೂರ್ಣ ಪ್ರಜ್ಞಾ ಪಿಯು ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಚಕ್ರವ್ಯೂಹ-2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

800 ವರ್ಷ ಮೊಘಲರು ಹಾಗೂ 200 ವರ್ಷಗಳ ಕಾಲ ಬ್ರಿಟೀಷರು ದೇಶವನ್ನು ಆಳಿದರೂ ಕೂಡ ಹಿಂದೂ ಸನಾತನ ಧರ್ಮದ ಕಾರಣದಿಂದ ವಿಶ್ವದಲ್ಲಿ ತಲೆ ಎತ್ತಿ ನಿಂತಿರುವ ದೇಶ ಭಾರತ. ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಗುರಿ ಮುಖ್ಯ ನಿಮ್ಮ ಪ್ರದರ್ಶನವನ್ನು ಸ್ಪರ್ಧೆಯಲ್ಲಿ ಪಣಕ್ಕಿಟ್ಟು ಚಕ್ರವ್ಸೂಹ ಭೇದಿಸಬೇಕು. ಮೊಬೈಲ್ ಗೆ ಮಕ್ಕಳು ಅಡಿಟ್ ಆಗಬಾರದು ನಮ್ಮ ಉಸಿರಿರುವವರೆಗೂ ನಮ್ಮ ಜೊತೆಯವ್ಲಿರುವುದು ವಿದ್ಯೆ ಮಾತ್ರ’ ಎಂದು ಸಲಹೆ ನೀಡಿದರು.
ವಿವಿಧ ಶಾಲೆಯ ಸಾಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ರಂಗಕರ್ಮಿ ಮೈಸೂರ್ ರಮಾನಂದ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿಡಿಯಾ ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎಂ.ಎನ್. ಉಮೇಶ್ ಕುಮಾರ್, ಕಾರ್ಯದರ್ಶಿ ಗೋಪಾಲ್ ಶಬರಾಯ, ಜಂಟಿ ಕಾರ್ಯದರ್ಶಿ ಜಿ.ವಿ.ಕೃಷ್ಣ, ಅಕಾಡಮಿಕ್ ಡೈರಕ್ಟರ್ ಪ್ರವೀಣ್ ಕುಮಾರ್, ಸೇರಿದಂತೆ ಹಲವಾರು ಮುಖಂಡರು, ಕಾಲೇಜಿನ ಆಡಳಿತ ಮಂಡಳಿ, ಭೋದಕರು ಭೋದಕೆತರು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




