ಗೋಕಾಕ:ವಿಕಲಚೇತನರಿಗೆ ಮಂಜೂರಾದ ಶೌಚಾಲಯ ನಿರ್ಮಾಣ ಕಟ್ಟಡ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ ಘಟನೆ ಗೋಕಾಕ ತಾಕೂಕಿನ ಕೊಣ್ಣೂರ ಪಟ್ಟಣದ ಅಂಬೇಡ್ಕರ ನಗರದಲ್ಲಿ ನಡೆದಿದೆ.
ನಗರೋತ್ಥಾನದ ಯೋಜನೆಯಡಿಯಲ್ಲಿ ಮಂಜೂರಾಗಿದ್ದ ವಿಕಲಚೇತನರ ಶೌಚಾಲಯವನ್ಮು ಪೌಮಡೆಷನ್ ಹಾಕದೆ ನಿರ್ಮಿಸಿದ್ದು ಅದರ ಜೊತೆಯಲ್ಲಿ ನಿರ್ಮಾಣ ಹಂತದಲ್ಲಿಯೇ ಗೊಡೆಗಳಲ್ಲಿ ಬಿರುಕು ಬಿಟ್ಟಿದೆ,

ಇನ್ನು ನಿರ್ಮಾಣ ಹಂತದಲ್ಲೆ ಈ ರೀತಿ ಕಳಪೆ ಕಾಮಗಾರಿ ಮಾಡಿದರೆ ಮುಂದೆ ವಿಕಲಚೇತನರ ಪರಿಸ್ಥಿತಿ ಹೇಗೆ ಎಂಬುದು ಗೊತ್ತಿಲ್ಲ,,ಒಂದು ವೇಳೆ ವಿಕಲಚೇತನರಿಗೆ ಅನಾಹುತ ಆದಲ್ಲಿ ಹೊನೆಗಾರರು ಯಾರು,,ಅನ್ನೊದೆ ಯಕ್ಷ ಪ್ರಶ್ನೆ,,
ಇನ್ನು ಈ ರೀತಿ ಕಳಪೆ ಕಾಮಗಾರಿ ಆದರೂ ಸಹ ಕೊಣ್ಣೂರ ಪುರಸಭೆ ಅಧಿಕಾರಿಗಳು ,ಸಂಬಂದಪಟ್ಟ ನಗರೋತ್ಥಾನದ ಅಧಿಕಾರಿಗಳು ಕಣ್ಮುಚ್ವಿ ಕುಳಿತು ಗುತ್ತಿಗೆದಾರನಿಗೆ ಸಹಕಾರ ನೀಡುತಿದ್ದಾರೆಂದು ಸ್ಥಳಿಯರು ಸಂಶಯ ವ್ಯಕ್ತಪಡಿಸಿದ್ದಾರೆ.
ವರದಿ:ಮನೋಹರ ಮೇಗೇರಿ




