ಗೋಕಾಕ : ನೂರಾರು ವರ್ಷ ಇತಿಹಾಸವುಳ್ಳ ಪಾರಂಪರಿಕ ಗೋಕಾಕ ತಾಲೂಕಿನ ಕೊಣ್ಣೂರ, ಮರಡಿಮಠದ ಶ್ರೀಮದ್ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ಕಾರ್ತಿಕೋತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ ಲಕ್ಷ ದೀಪೊತ್ಸವ ಅತಿ ವಿಜೃಂಭಣೆಯಿಂದ ನಡೆಯಿತು.
ಶ್ರೀ ಕಾಡಸಿದ್ದೇಶ್ವರ ಜಾತ್ರೆಯಂದು ಸಾವಿರಾರು ಭಕ್ತರು ಭಕ್ತಿಯಿಂದ ರಥದ ಮೇಲೆ ಹೂ,ಬಾಳೆ ಹಣ್ಣನ್ನು ಹಾರಿಸಿ ತಮ್ಮ ಹರಕೆ ತಿರಿಸಿಕೊಂಡು ಭಕ್ತಿಯಿಂದ ರಥ ಎಳೆದರು.
ಸಾವಿರಾರು ಭಕ್ತರು ಸೇರಿದಂತೆ ಯುವಕರು, ಮಕ್ಕಳು ವಯೋವೃದ್ದರು ಜಾತ್ರೆಯಲ್ಲಿ ಸಂಭ್ರಮಿಸಿದರು.ಈ ಮಠದ ಕಾರ್ತಿಕೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವದಲ್ಲಿ ವಿಶೇಷವಾಗಿ ಜಗದ್ಗುರು ಕಾಡಸಿದ್ದೇಶ್ವರ ಭಾವ ಚಿತ್ರವು ಎಲ್ಲರನ್ನು ಕಂಗೊಳಿಸಿತ್ತು.
ಇನ್ನು ದೀಪ ಹಚ್ಚುವ ಸಮಯದಲ್ಲಿ ಮಠದ ಶ್ರೀಗಳು ಭಕ್ತರಿಗೆ ದೀಪ ಮಹತ್ವವನ್ನು ತಿಳಿಸಿದರು. ಸಾವಿರಾರು ಭಕ್ತರು ತಮ್ಮ ಕುಟುಂಬ ಸಮೇತ ಆಗಮಿಸಿ ದೀಪ ಬೆಳಗಿಸಿ ಕಾಡಸಿದ್ದೇಶ್ವರ ಆಶಿರ್ವಾದ ಪಡೆದು ಪುಣಿತರಾದರು.
ಮಠದಲ್ಲಿ ನಡೆದ ಲಕ್ಷ ದೀಪೋತ್ಸವದಲ್ಲಿ ಪೋಲಿಸರು ಕೂಡ ದೀಪ ಹಚ್ಚಿ ತಮ್ಮ ಭಕ್ತಿ ಮೆರೆದರು.ಅದರ ಜೊತೆಯಲ್ಲಿ ಆಗಮಿಸುವ ಭಕ್ತರಿಗೆ ಯಾವುದೆ ತೊಂದರೆ ಆಗದಂತೆ ಪಿಎಸ್ಐ ಕೆ ವಾಲಿಕಾರ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಗಳು ಎಲ್ಲ ಕಡೆ ನಿಗಾವಹಿಸಿ ಅಚ್ಚುಕಟ್ಟಾಗಿ ಪಾರ್ಕಿಂಗ್ ಮಾಡಿ ಬಂದೊ ಬಸ್ತ ಮಾಡಿದ್ದರು.
ಇನ್ನು ಮರಡಿಮಠದ ಜಾತ್ರೆ ಮತ್ತು ಕಾರ್ತಿಕೊತ್ಸವಕ್ಕೆ ಕರ್ನಾಟಕವಷ್ಟೆ ಅಲ್ಲದೆ ಮಹಾರಾಷ್ಟ್ರದಿಂದ ಭಕ್ತರು ಆಗಮಿಸಿ 3 ದಿನ ನಡೆಯುವ ಜಾತ್ರೆ,ಕಾರ್ತಿಕೊತ್ಸವ ಸಾವಿರಾರು ಭಕ್ತರ ಭಕ್ತಿಯಲ್ಲಿ ಲಕ್ಷದೀಪೋತ್ಸವದ ಸಂಪನ್ನಗೊಂಡಿತು.
ವರದಿ : ಮನೋಹರ ಮೇಗೇರಿ




