ಹುಬ್ಬಳ್ಳಿ: ದಿನಾಂಕ 19-11-2025 ರಂದು ಮದ್ಯಾಹ್ನ 3-15 ಗಂಟೆಗೆ ಹಳೇ ಬಸ್ ನಿಲ್ದಾಣದ ಮುಂಬಾಗದಲ್ಲಿ ಒಬ್ಬ ಚಿನ್ನದ ವ್ಯಾಪಾರಿಯಿಂದ 5-6 ಜನ ಅಪರಿಚಿತ ಆರೋಪಿತರು ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳೆಂದು ಹೇಳಿ ತಮ್ಮ ಐಡಿ ಕಾರ್ಡನ್ನು ತೋರಿಸಿ ಅವರಿಗೆ ಹೆದರಿಸಿ ಒತ್ತಾಯ ಪೂರ್ವಕವಾಗಿ ತಮ್ಮ ವಾಹನದಲ್ಲಿ ಹತ್ತಿಸಿಕೊಂಡು ಬೆಳಗಾಂವ ಕಡೆಗೆ ಹೋಗಿ ಮಾರ್ಗ ಮದ್ಯದಲ್ಲಿ ಅವರನ್ನು ಕೆಳಗೆ ಇಳಿಸಿ ಅವರಿಂದ 2.942 ಕೆಜಿ ಚಿನ್ನದ ಆಭರಣಗಳನ್ನು ಹಾಗೂ 2 ಲಕ್ಷ ರೂ ನಗದು ಹಣವನ್ನು ಅಪಹರಿಸಿಕೊಂಡು ಹೋಗಿದ್ದಾರೆಂದು ಕೊಟ್ಟ ದೂರಿನ ಮೇರೆಗೆ ಹುಬ್ಬಳ್ಳಿ ಉಪನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇತ್ತು.
ಈ ಪ್ರಕರಣದ ತನಿಖೆಯನ್ನು ಸಿಸಿಬಿ ವಿಭಾಗಕ್ಕೆ ಕೊಟ್ಟದ್ದು ಸಿಸಿಬಿ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯವರು ಈ ಕೆಳಕಂಡ 4 ಜನ ಆರೋಪಿತರನ್ನು ಉತ್ತರ ಪ್ರದೇಶ ರಾಜ್ಯದ ಗೋರಕಪುರ ಪಟ್ಟಣದಲ್ಲಿ ದಸ್ತಗೀರ ಮಾಡಿದ್ದು ಇರುತ್ತದೆ.
1)ಅಂಕುಶ ತಂದೆ ರಾಮಚಂದ್ರ ಕದಂ ಸಾ|| ಥಾನೆ ಮುಂಬೈ 2)ಚಂದ್ರಶೇಖರ ರಾಕೇಶ ತಂದೆ ಏಕನಾಥ ಜಾಧವ ಸಾ.ಕಲ್ಯಾಣ ಮುಂಬೈ
3)ಜಿಸ್ಟ್ರೇಶಕುಮಾರ ತಂದೆ ಹಸ್ಮುಖ ಸಾ||ವೊಡೊದರಾ ಗುಜರಾತ. 4)ವಿಲಾಸ ತಂದೆ ಕೇಶವ ಮೋಹಿತೆ ಸಾ.ಥಾನೆ ಮುಂಬೈ.
ಸದರಿವರಿಂದ ಒಟ್ಟು 6,65,284/-ರೂ ಬೆಲೆಬಾಳುವ 56.26 ಗ್ರಾಂ ಚಿನ್ನದ ಒಡವೆಗಳು, ನಗದು ಹಣ 60,000/-ರೂ ಮತ್ತು 7 ಮೊಬೈಲ್ ಫೋನ್ ಗಳನ್ನು ಜಪ್ತ ಮಾಡಿದ್ದು ಇರುತ್ತದೆ.
ಇನ್ನುಳದ ಆರೋಪಿತರು ತಲೆಮರೆಸಿಕೊಂಡಿದ್ದು, ಎಲ್ಲರೂ ಹೊರ ರಾಜ್ಯದವರಾಗಿದ್ದು, ಅವರನ್ನು ದಸ್ತಗೀರ ಮಾಡಿ ಉಳಿದ ಆಭರಣಗಳನ್ನು ಜಪ್ತ ಮಾಡುವುದು ಬಾಕಿ ಇರುತ್ತದೆ. ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
3 ಕೋಟಿ ಮೌಲ್ಯದ ಚಿನ್ನವನ್ನು ದೋಚಿದ ಆರೋಪಿಗಳನ್ನು ಬಂಧನ




