ನಿಪ್ಪಾಣಿ : ಕೊಪ್ಪಳ ಜಿಲ್ಲೆಯ ಕಿಸ್ಕಿಂದದ ಶ್ರೀ ಕ್ಷೇತ್ರ ಅಂಜನೆಯ ಬೆಟ್ಟಕ್ಕೆ ಕಳೆದ ನಾಲ್ಕು ವರ್ಷಗಳಿಂದ ಜೊಲ್ಲೆ ಉದ್ಯೋಗ ಸಮೂಹ ಹಾಗೂ ಬಜರಂಗದಳ ಸಂಯುಕ್ತಾಶ್ರಯದಲ್ಲಿ ಹನುಮ ಮಾಲಾಧಾರಿಗಳಿಗೆ ಆಂಜನೇಯ ಬೆಟ್ಟದ ದರ್ಶನ ಮಾಡಿಸಲಾಗುತ್ತಿದ್ದು ಮಂಗಳವಾರ ಬೆಳಿಗ್ಗೆ ನಿಪ್ಪಾಣಿಯ ಮುನ್ಸಿಪಲ್ ಹೈಸ್ಕೂಲ್ ಗ್ರೌಂಡದಲ್ಲಿ ಪ.ಪೂ.ಪ್ರಾಣಲಿಂಗ ಸ್ವಾಮೀಜಿ, ಬಸವಮಲ್ಲಿಕಾರ್ಜುನ, ಸದಲಗಾ ಗೀತಾಶ್ರಮದ ಡಾ. ಶ್ರದ್ಧಾನಂದಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಬಸವ ಯುಥ ಫೌಂಡೇಶನ್ ಅಧ್ಯಕ್ಷ ಬಸವಕುಮಾರ ಜೊಲ್ಲೆಯವರು 33 ಬಸ ಮುಖಾಂತರ 2000ಕ್ಕೂ ಅಧಿಕ ಹನುಮ ಮಾಲಾಧಾರಿಗಳನ್ನು ಬೀಳ್ಕೊಟ್ಟರು.
ನಿಪ್ಪಾಣಿ ತಾಲೂಕಿನ ಸೌಂದಲಗಾ, /ಅಕ್ಕೋಳ, ಬೇನಾಡಿ, ಕಾರದಗಾ,ಕೊಗನೋಳಿ, ಬೇಡಕಿಹಾಳ ಸೇರಿ 6 ಝೋನಗಳಲ್ಲಿಯ 2000 ಹನುಮ ಮಾಲಾಧಾರಿಗಳ ಉಪಸ್ಥಿತಿಯಲ್ಲಿ ನಡೆದ ಶಿಸ್ತುಬದ್ಧ ಕಾರ್ಯಕ್ರಮದಲ್ಲಿ ಬೆಳಗಾವಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯದರ್ಶಿ ಪ್ರಾ. ಮುಕುಂದ ಗೋಖಲೆ ಮಲಾಧಾರಿಗಳಿಗೆ ಮಾರ್ಗದರ್ಶನ ಮಾಡಿದರು. ಒಟ್ಟು 33 ಬಸಗಳಲ್ಲಿಯ ಹನುಮ ಭಕ್ತರು,ಭಜನೆ,ಕೀರ್ತನೆ,ಬಜರಂಗ ಬಲಿಯ ಘೋಷಣೆಯೊಂದಿಗೆ ಪ್ರಯಾಣ ಬೆಳಸಿದರು.
ಮಲಾಧಾರಿಗಳಿಗೆ ಜೊಲ್ಲೆ ಉದ್ಯೋಗ ಸಮೂಹದಿಂದ ಉಚಿತ ಉಪಹಾರ, ಊಟ,ವಸತಿ,ಬಸ್ ವ್ಯವಸ್ಥೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಬಸವಪ್ರಸಾದ್ ಜೊಲ್ಲೆ ಮಾತನಾಡಿ *ಯುವಕರಿಗೆ ವ್ಯಸನ ಮುಕ್ತಿಯೊಂದಿಗೆ ನಮ್ಮ ಸಂಸ್ಕೃತಿ, ಧರ್ಮ ಜಾಗೃತಿ ಮೂಡಿಸುವ ಉದ್ದೇಶದಿಂದ 2021ರಲ್ಲಿ ಕೇವಲ 7 ಮಾ ಲಾಧಾರಿಗಳಿಂದ ಪ್ರಾರಂಭವಾದ ಆಂಜನೇಯ ಬೆಟ್ಟಕ್ಕೆ ಇದುವರೆಗೆ.2500O ಭಕ್ತರು ತೆರಳಿ ಆಂಜನೇಯನ ದರ್ಶನ ಪಡೆದು ಕೃತಾರ್ಥರಾಗಿದ್ದಾರೆಂದು ತಿಳಿಸಿದರು.
ವರದಿ : ಮಹಾವೀರ ಚಿಂಚಣೆ




