ಗಂಗಾವತಿ : ಭರತ ನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟವನ್ನು 8 ನಿಮಿಷ 59 ಸೆಂಕೆಂಡಗಳಲ್ಲಿ ಏರಿ ಕಲಾವಿದೆ ಆರ್.ಹರ್ಷಿತಾ ಗಮನ ಸೆಳೆದಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆಯ ಆರ್.ಹರ್ಷಿತಾ ಭರತನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟ ಏರಿ ಸೇವೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದರು.
ಅದರಂತೆ ಪಾಲಕರ ಮಾರ್ಗದರ್ಶನದಲ್ಲಿ ಹನುಮದ್ ವ್ರತಾಚರಣೆ ಸಂದರ್ಭದಲ್ಲಿ 574 ಮೆಟ್ಟಿಲುಗಳ ಮೇಲೆ ವಿವಿಧ ಭಂಗಿಯಲ್ಲಿ ನಾಟ್ಯ ಮಾಡುತ್ತಾ ಹತ್ತಿದ್ದಾರೆ.
ನಂತರ ದೇಗುಲದ ಆವರಣದಲ್ಲಿ ಭರತನಾಟ್ಯ ಮಾಡಿ ದೇವರ ದರ್ಶನ ಪಡೆದಿದ್ದಾರೆ. ನಂತರ ದೇವಸ್ಥಾನದಲ್ಲಿ ಆರ್. ಹರ್ಷಿತಾರನ್ನು ಸನ್ಮಾನಿಸಿ ಗೌರವಿಸಿದರು.




