ಕಾಗವಾಡ : ದಿ. 3 ಡಿಸೆಂಬರ್ 2025 ರಂದು ಕಾಗವಾಡ ತಾಲೂಕಿನ ಕಾಗವಾಡ ಪಟ್ಟಣದ ಪಂಚಾಯತ್ ಒಳಗೆ ಮೂರು ಜನರು ದನದ ಶಗಣಿ ಹಾಗೂ ಕಸ ಕಡ್ಡಿ ತಂದು ಚೆಲ್ಲಿದ್ದು. ಅವರ ವಿರುದ್ಧ ಕ್ರಮಕೈಗೊಳಲು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಕಾಗವಾಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾದಾಗ ಪಿಎಸ್ಆಯ್ ರಾಘವೇಂದ ಖೋತ್ ಅವರು ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿ.
ಕಸ ಚೆಲ್ಲಿದ ಜನರನ್ನು ಕರೆದು ಪಟ್ಟಣ ಪಂಚಾಯತ್ ಆವರಣದಲ್ಲಿ ಚೆಲ್ಲಿರುವ ಕಸವನ್ನು ನೀವೇ ತೆಗೆದು ಸ್ವಚ್ಛಗೊಳಿಸಿ ಮತ್ತು ಕ್ಷಮೆ ಕೇಳಬೇಕೆಂದು ಹೇಳಿದಲ್ಲದೆ ಸ್ವಚ್ಛಗೊಳಿಸುವ ವಿಡಿಯೋವನ್ನು ಮಾಡಿ ನನಗೆ ಕಳಿಸಿ ಎಂದು ಹೇಳಿ. ಸಮಸ್ಯೆಯನ್ನು ತಿಳಿಗೊಳಿಸಿದರು. ಆದರೆ ಕಿತ್ತೂರು ಕರ್ನಾಟಕ ಸೇನೆಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಸಾವಕಾರ ಸಿದ್ರಾಮ ಎಸ್. ಬಸ್ತವಾಡೆ ಹಾಗೂ ಕಸ ಚೆಲ್ಲಿದ ಜನರ ಮಧ್ಯದಲ್ಲಿ ಮಾತಿನ ಚಕಮಕಿ ಆಯಿತು.
ನಂತರ ಕಾಗವಾಡ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಕೆ ಕೆ ಗಾವಡೆ, ದೀಪಕ್ ಕಾಂಬಳೆ, ಪಂಚಾಯಿತಿ ಸಿಬ್ಬಂದಿಗಳು ಪಪಂಮುಂದುಗಡೆ ಶಗಣಿ ಕಸವನ್ನು ಸ್ವಚ್ಛ ಮಾಡಿ ಅದರ ವಿಡಿಯೋವನ್ನು ಮಾಡಲಾಯಿತು.
ವರದಿ : ಚಂದ್ರಕಾಂತ ಕಾಂಬಳೆ




