ಬೆಳಗಾವಿ :ಜಿಲ್ಲೆ ರಾಮದುರ್ಗ ತಾಲೂಕಿನ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಕ್ಕು ಸಂರಕ್ಷಣಾ ಸಭೆ ನಡೆಯಿತು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಹಿತ ಕಾಯಲು ರಾಜ್ಯ ಸರಕಾರ ಬದ್ಧವಾಗಿದ್ದು, ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ, ಶಾಸಕ ಅಶೋಕ ಪಟ್ಟಣ ಅವರು ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಕ್ಕು ಸಂರಕ್ಷಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಎಸ್.ಸಿ. ಮತ್ತು ಎಸ್.ಟಿ. ಸಮುದಾಯದ ಜನರಿಗೆ ಕೊಳವೆ ಭಾವಿ ಕೊರೆಸಲು ಕ್ರಮ ತೆಗೆದುಕೊಂಡಿದ್ದೇವೆ. ಅಂಬೇಡ್ಕರ್ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಭೋವಿ, ಆದಿಜಾಂಬವ ಅಭಿವೃದ್ಧಿ ನಿಗಮದ ಮೂಲಕ ಸೇರಿದಂತೆ ಸಮುದಾಯದ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿದ್ದೇನೆ ಎಂದು ಹೇಳಿದರು.ನಾನು ಬಸವಣ್ಣನ ಪಕ್ಕಾ ಅನುಯಾಯಿಯಾಗಿದ್ದು, ಜಾತಿ ಬೇಧ, ಪಕ್ಷ ಪಂಗಡ ಮಾಡದೇ ಸರ್ವರ ಹಿತಕ್ಕಾಗಿ ಶ್ರಮಿಸುತ್ತಿದ್ದೇನೆ. ಆದರೂ ನನ್ನ ಮೇಲೆ ಕೆಲವರು ಪರಿಶಿಷ್ಟರ ವಿರೋಧಿ ಎಂಬತೆ ಬಿಂಬಿಸಲು ಹೊರಟಿದ್ದಾರೆ. ನಾನು ದಲಿತ ಸಮುದಾಯದ ಮುಖಂಡರ ಗರಡಿಯಲ್ಲಿ ಪಳಗಿದ್ದು, ನಾನು ಯಾವುದೇ ಬೇಧ-ಭಾವ ಮಾಡದೆ, ಅನ್ಯಾಯಕ್ಕೊಳಗಾದ ಜನತೆಗೆ ನ್ಯಾಯ ದೊರಕಿಸಿಕೊಡುವುದೇ ನನ್ನ ಮುಖ್ಯ ಧ್ಯೇಯ ಎಂದ ಅವರು, ಪಟ್ಟಣದ ಶ್ರೀಪತಿ ನಗರ, ಭಾಗ್ಯ ನಗರದಲ್ಲಿ ಸರ್ವೇ ನಡೆಸಿ, ಕಂಪ್ಯೂಟರ್ ಉತಾರ ಸೇರಿದಂತೆ ಇತರೆ ಬೇಡಿಕೆ ಇಡೇರಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ಶೀಘ್ರ ಅಲ್ಲಿನ ನಿವಾಸಿಗಳ ಬಹು ದಿನದ ಬೇಡಿಕೆ ಇಡೇರಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದಂತ ಮುಖಂಡರು ಕೆಲವ ಅಧಿಕಾರಿಗಳ ಜೊತೆ ಕೆಲಸ ಕಾರ್ಯಗಳ ಬಗ್ಗೆ ಸರ್ಕಾರಿ ಅಧಿಕಾರಿಗಳ ಜೊತೆ ಚಕಾ ಮುಖಿ ನಡೆಯಿತು
ಸಭೆಯಲ್ಲಿ ದಲಿತ ಸಮುದಾಯದ ಜನರ ಮೇಲೆ ೫ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ನ್ಯಾಯ ಸಮ್ಮತೆ ತನಿಖೆ ನಡೆಸಿ, ದಲಿತರ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಯುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದರು.
ತಾಲೂಕಿನಲ್ಲಿ ಇನ್ನೂ ಕೆಲವು ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಿಲ್ಲ ಎಂಬ ಚಂದ್ರು ಬೆಳವಾಡಿ ಅವರು ಪ್ರಶ್ನೆ ಮಾಡಿದರು, ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಧ್ಯ ಪ್ರವೇಶಿಸಿ, ತಾಲೂಕಿನಲ್ಲಿ ಈಗಾಗಲೇ ಎರಡು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಇನ್ನುಳಿದ ಕೆಲವು ತಾಂಡಾ ಸೇರಿದಂತೆ ಒಟ್ಟು ೯ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಇನ್ನು ಆರು ತಿಂಗಳಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭಸದಲ್ಲಿ ತಾಲೂಕು ಪಂಚಾಯಿತಿ ಇಓ ಬಸವರಾಜ ಐನಾಪೂರ, ಡಿವೈಎಸ್ಪಿ ಚಿದಂಬರ ಮಡಿವಾಳರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹನುಮಂತ ವಕ್ಕುಂದ, ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ದಲಿತ ಸಮುದಾಯದ ಮುಖಂಡರು ಸೇರಿದಂತೆ ಇನ್ನಿತರರು ಈ ಸಭೆಗೆ ಭಾಗಿಯಾಗಿದ್ದರು.
ವರದಿ: ಮಂಜುನಾಥ ಕಲಾದಗಿ




