ಕಲಘಟಗಿ :ತಾಲೂಕಿನ ಮಿಶ್ರಿಕೋಟೆ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಕರ್ನಾಟಕ ಗ್ರಾಮೀಣ ಜಾನಪದ ಕಲಾಭಿವೃದ್ಧಿ ಸಂಸ್ಥೆರಿ ಸಾ ಭೊಗೇನಾಗರಕೊಪ್ಪ ಪೋಸ್ಟ್ ಗಂಜಿಗಟ್ಟಿ ತಾಲೂಕು ಕಲಘಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಮುಂಜಾನೆಯ ಇಂದ ಸಾಯಂಕಾಲದವರೆಗೆ ವಿವಿಧ ಕಲಾಪ್ರಕಾರಗಳ ಕಲಾತಂಡಗಳಿಂದ ಜನಪದ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಟಿ ಎಸ್ ಮನ್ಸಾಲಿ ಗ್ರಾಮದ ಹಿರಿಯರು ವಹಿಸಿದರು ಉದ್ಘಾಟಕರಾಗಿ ಶ್ರೀ ಇಮಾಮ್ ಸಾಬ್ ಎಂ ವಲ್ಲಪ್ಪನವರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ. ಸನ್ಮಾನ್ಯ ಶ್ರೀಮತಿ ವಿದ್ಯಾ ಗ್ರಾಮ ಪಂಚಾಯತಿ ಸದಸ್ಯರು ಸಿಂತ್ರಿಯವರು ನೆರವೇರಿಸಿದರು. ಅತಿಥಿಗಳಾಗಿ ಪೊಲೀಸ್ ಅಧಿಕಾರಿಗಳಾದ ಎಸ್ಐ ಆರ್ ಎಂ ಸಂಕಿನದಾಸರ ಹಾಗೂ ಸಾತಪ್ಪ ಕುಂಕುರ ಅಧ್ಯಕ್ಷರು ಸಂಗ್ರಾಮ ಸೇನೆ ಪತ್ರಕರ್ತರಾದ ಪ್ರಭು ವಿ ರಂಗಾಪುರ್ ಹಾಗೂ ಮತ್ತೊಬ್ಬ ಪತ್ರಕರ್ತರಾದ ನಿತೀಶ್ ಗೌಡ ತಡಸ ಪಾಟೀಲ್ ಧಾರವಾಡ ಬಸವರಾಜ್ ಮನಗುಂಡಿ ಗ್ರಾಮ ಪಂಚಾಯತಿ ಸದಸ್ಯರ. ಬಸವಾನಂದ ಶಾಸ್ತ್ರಿಗಳು ಹುಬ್ಬಳ್ಳಿ ಹಾಗೂ ವೀರಭದ್ರೇಶ್ವರ ಸಮಿತಿಯ ಸದಸ್ಯರಾದ ಸನ್ಮಾನ್ಯ ಶ್ರೀ ಪ್ರಕಾಶ್ ತುಕಪ್ಪನವರ್ ಬಾಬು ತಮಟೆ ರಾಜಪ್ಪ ಶಿವಪುತ್ರಯ್ಯ ಎಲಿಮಟ ಕಲ್ಲಯ್ಯ ಬೆನ್ನಿ ಭರತ್ ಮುತ್ತಿಗೆ ಈರಣ್ಣ ಬೆಟಗೇರಿ ರಾಜು ಕಲ್ತಂಡಿ ನೆರವೇರಿಸಿದರು.
ಈ ಬೃಹತ್ ರಾಜ್ ಮಠ ಜಾನಪದ ಜಾತ್ರೆಯಲ್ಲಿ ವಿವಿಧ ಕಲ ಪ್ರಕಾರದ ಜನಪದ ಕಲಾತಂಡಗಳು ಸುಗ್ಗಿ ಪದ ಪದ ಹಂತಿ ಪದ ಪದ ಗೀಗಿ ಪದ ಲಾವಣಿ ಪದ ಸೋಬಾನ ಪದಗಳು ಸಾಂಪ್ರದಾಯ ಪದಗಳು ಲಾವಣಿ ಪದಗಳು ಭಜನೆಗಳು ತತ್ವಪದಗಳು ಜಗ್ಗಲಗಿ ಕರಡಿ ಮಜಲು ಕಣಿವಾದನ ಲಮಾಣಿ ನೃತ್ಯ ಕೋಲಾಟಗಳು ನಾಟಕ ಇನ್ನು ಅನೇಕ ಕಲಾ ಪ್ರಕಾರದ ಸುಮಾರು 45 ಕಲಾತಂಡಗಳು ಭಾಗವಹಿಸಿದ್ದರು. ಕರ್ನಾಟಕ ಗ್ರಾಮೀಣ ಜಾನಪದ ಕಲಾಭಿವೃದ್ಧಿ ಸಂಸ್ಥೆಯ ಸಂಸ್ಥೆಯ ಅಧ್ಯಕ್ಷ ಶ್ರೀ ನಿಂಗಪ್ಪ ಬಾ ದೊಡ್ಡಪೂಜಾರ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಸ್ವಾಗತ ಕಾರ್ಯಕ್ರಮ ನಿರೂಪಿಸಿದರು ಸನ್ಮಾನ್ಯ ಶ್ರೀ ಈಶ್ವರ ವಿ ಜವಳಿ ಶಿಕ್ಷಕರು ಜನಪದ ಸಂಘಟಕರು. ಸಂಸ್ಕೃತಿ ಕಾರ್ಯಕ್ರಮ ನಡೆಸಿಕೊಟ್ಟರು. ಬಸುರಾಜ್ ಖಾನಾಪುರ್
ವರದಿ:ವಿನಾಯಕ ಗುಡ್ಡದಕೇರಿ




