ಬಾಗಲಕೋಟೆ : ಬಂಡಿಗಣಿ ದಾನೇಶ್ವರ ಸ್ವಾಮೀಜಿ ಅವರು ಶುಕ್ರವಾರ ನಿಧನ ಹೊಂದಿದ್ದಾರೆ. ಅವರಿಗೆ 75 ವರ್ಷ ವಯಸಾಗಿದ್ದು, ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲುಕಿನ ಬಂಡಿಗಣಿ ಗ್ರಾಮದ ಬಸವಗೋಪಾಲ ನೀಲಮಾಣಿಕ ಮಠದ ಪ್ರಮುಖ ಸ್ವಾಮಿಯಾಗಿದ್ದ ಅವರು ದಾಸೋಹ ಚಕ್ರವರ್ತಿ ಎಂದೇ ಹೆಸರಾಗಿದ್ದರು.
ಇಂದು ರಾತ್ರಿ 11 ಕ್ಕೆ ಅವರ ಪಾರ್ಥಿವ ಶರೀರವು ಮಠಕ್ಕೆ ಆಗಮಿಸಲಿದ್ದು, ನಾಳೆ ಬೆಳಗ್ಗೆ 6 ರಿಂದ ಭಕ್ತರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.




