ಬೆಂಗಳೂರು : ಇಂಡಿಗೋ ವಿಮಾನಯಾನ ಸಂಸ್ಥೆಯ “ಆಪರೇಷನಲ್ ಕ್ರೈಸಿಸ್” ಕಾರಣ ದೇಶದಾದ್ಯಂತ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ.
ಅನೇಕರು ತಮ್ಮ ಪ್ರಮುಖ ವೈಯಕ್ತಿಕ, ವೈದ್ಯಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗಲಾಗದೇ ಸಂಕಷ್ಟಕ್ಕೀಡಾಗಿದ್ದಾರೆ.
ಕಷ್ಟಕ್ಕೆ ಸಿಲುಕಿದ ಸಾವಿರಾರು ಪ್ರಯಾಣಿಕರಲ್ಲೊಬ್ಬರಾದ ನಾಮಿತಾ, ತಮ್ಮ ತಂದೆಯ ಅಸ್ತಿಗಳನ್ನು ವಿಸರ್ಜಿಸಲು ಸಾಧ್ಯವಾಗದೇ ಬೇಸರ ವ್ಯಕ್ತಪಡಿಸಿದ್ದಾರೆ.
“ನಾನು ನನ್ನ ತಂದೆಯ ಅಸ್ಥಿಗಳನ್ನು ಹರಿದ್ವಾರದಲ್ಲಿ ವಿಸರ್ಜಿಸಬೇಕಿದ್ದು, ಇಂದು ಬೆಂಗಳೂರು-ದೆಹಲಿ-ಡೆಹರಾಡೂನ್ ಮೂಲಕ ಪ್ರಯಾಣಿಸಬೇಕಿತ್ತು. ನಾಳೆ ಹರಿದ್ವಾರಕ್ಕೆ ಹೋಗಿ ನನ್ನ ತಂದೆಯ ಅಸ್ಥಿ ವಿಸರ್ಜನೆ ಮಾಡಬೇಕಿತ್ತು. ಆದರೆ ವಿಮಾನ ವ್ಯತ್ಯದಿಂದ ಈ ಕಾರ್ಯ ಮಾಡಲಾಗುತ್ತಿಲ್ಲ” ಎಂದು ನಾಮಿತಾ ಮಾಧ್ಯಮಗಳೊಂದಿಗೆ ಬೇಸರ ತೋಡಿಕೊಂಡರು.




