ಕೊಪ್ಪಳ : 28 ವರ್ಷದ ಯುವಕ, ನಾದಬ್ರಹ್ಮ ಇಡ್ಲಿ ಸೆಂಟರ್ ಮಾಲೀಕನಾಗಿರುವ ಸಂದೇಶ್ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಜಿಮ್ ಮುಗಿಸಿ ಬಂದ ಕೆಲವೇ ನಿಮಿಷದಲ್ಲಿ ಸಂದೇಶ್ ಸಾವು ಕಂಡಿದ್ದಾರೆ ಎನ್ನಲಾಗಿದೆ.
ಜಿಮ್ನಲ್ಲಿ ವರ್ಕ್ಔಟ್ ಮಾಡುವಾಗಲೇ ಸಂದೇಶ್ಗೆ ಎದೆನೋವು ಕಾಣಿಸಿಕೊಂಡಿತ್ತು. ಇದರಿಂದಾಗಿ ಜಿಮ್ನಿಂದ ನೇರವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಂದೇಶ್ ಸಾವು ಕಂಡಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಕೊಪ್ಪಳದಲ್ಲಿ ನಾದಬ್ರಹ್ಮ ಇಡ್ಲಿ ಸೆಂಟರ್ ಓಪನ್ ಮಾಡಿದ್ದರು.




