ಹಾವೇರಿ : ಶಿಗ್ಗಾoವಿ ತಾಲ್ಲೂಕಿನ ಬಂಕಾಪುರ ಹೊರವಲಯದ ಹತ್ತಿ ಜೀನ್ ನಲ್ಲಿ ಅಕ್ರಮ ಪಡಿತರ ಅಕ್ಕಿಯನ್ನ ತುಂಬಿದ ಸುಮಾರು 545 ಚಿಲಗಳನ್ನ ಆಹಾರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದು ಸುಮಾರು 5.50ಲಕ್ಷ ರುಪಾಯಿ ಬೆಲೆಬಾಳುವ ಪಡಿತರ ಅಕ್ಕಿಯನ್ನ ಸಂಗ್ರಹಣೆ ಮಾಡಿದ್ದ ವ್ಯಕ್ತಿಗಳ ವಿರುದ್ಧ ಬಂಕಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಡಿತರ ಅಕ್ಕಿಯನ್ನ ಕಾಳು ಸಂತೆಯಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ ಎಂಬ ಆರೋಪದ ಹಿನ್ನೆಲೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ..
ಸುಮಾರು ವರ್ಷಗಳಿಂದ ಇದೇ ಅಕ್ರಮ ಚಟುವಟಿಕೆಯಲ್ಲಿ ಬಾಗಿಯಾಗಿರು ಶಂಕೆ ವ್ಯಕ್ತವಾಗಿದೆ.
ಪಡಿತರ ಅಕ್ಕಿ ದಾಸ್ತಾನು ಮಾಡಲು ಬಳಸುತ್ತಿದ್ದ ಸುಮಾರು 15 ಲಕ್ಷ ಬೆಲೆ ಬಾಳುವ KA634483 ವಾಹನವನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.
A1 ಆರೋಪಿ ಮೈನುದ್ದಿನ ತಂದೆ ಅಬ್ದುಲವಹಿದ ಖತೀಬ್. ಎ2 ಆರೋಪಿ ಸೈಯದ್ ಶಾಬೀರ್ ಅಹಮ್ಮದ್ ತಂದೆ ಸೈಯದ್ ಶಬ್ಬೀರ್ ಅಹ್ಮದ್ ದೊಡ್ಡಮನಿ ವಿರುದ್ಧ ಎಫ್ಐಆರ್ ಮಾಡಿದ್ದು ಬಂಕಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ವರದಿ : ರಮೇಶ್ ತಾಳಿಕೋಟಿ




