ಕುಡಚಿ : ಬೆಲ್ಲದ ಪುಡಿ ತಯಾರಿಕೆ ಮಾಲೀಕರ ವಿರುದ್ಧ ಸ್ಪಷ್ಟನೆ ನೀಡಿದ ರಾಯಲ್ ಇಂಡಿಯನ್ ಆಕಾಡೆಮಿ ಸ್ಕೂಲ್ ಫಾದರ್ ಮಾರ್ಟಿನ್ ಡಿಸಿಲ್ವ
ರಾಯಲ್ ಸ್ಕೂಲ್ ಬಳಿ ಯಾವುದೇ ದಾಖಲಾತಿಗಳು ಇಲ್ಲದೇನೆ ಈ ಶಾಲೆಯನ್ನು ನಡೆಸುತ್ತಿದ್ದಾರೆ ಎಂದು ಸುಳ್ಳಿನ ಸರಮಾಲೆ ನಮ್ಮ ಮೇಲೆ ಹೊರಿಸಲಾಗಿದೆ ಎಂದು ಒಂದು ವರದಿಯಲ್ಲಿ ಪ್ರಸಾರವಾಗಿತ್ತು.
ಇದೇ ವಿಷಯ ಕುರಿತು ನಾವು ಎಲ್ಲಾ ದಾಖಲೆಗಳ ಸಮೇತ ಇ ಶಾಲೆಯನ್ನು 2011 ರಿಂದ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ನಾವು ಈ ಶಾಲೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದ ಫಾದರ್ ಮಾರ್ಟಿನ್ ಡಿಸಲ್ವಾ.
ಮೊಟ್ಟಮೊದಲು ಟೇಶನ್ ರೋಡ್, ಕುಡಚಿ ಬಂದಿದ್ದು ನಾವು ಎರಡು ಸಾವಿರ 2009ರಲ್ಲಿ 2010ರಲ್ಲಿ ಬ್ಲೇಓ ಮತ್ತು ಎಲ್ಕೆಜಿ ಯುಕೆಜಿ ಎಂಬುವ ಎರಡು ಸ್ಕೂಲುಗಳನ್ನು ಸ್ಟೇಷನ್ ರೋಡ್ ಕುಡಚಿ ಪಟೇಲ್ ಬಿಲ್ಡಿಂಗನಲ್ಲಿ ಪ್ರಾರಂಭಿಸಿದೆವು ಆ ಬಿಲ್ಡಿಂಗ್ ನಲ್ಲಿ 3 ಕ್ಲಾಸ್ ನಡೆಸಲಿಕ್ಕೆ ಮಾತ್ರ ಜಾಗವಿತ್ತು.
ಆದ್ದರಿಂದ ನಾವು ಕುಡಚಿ ಪಟ್ಟಣದ ಗಣಿ ಕೂಡಿ ಇಲ್ಲಿಗೆ ಬಂದಿದ್ದು 2011ರಲ್ಲಿ ಅಲ್ಲಿಂದ ಬೌಂಡ್ ಮುಖಾಂತರ ಈ ಜಾಗವನ್ನು ಲೀಸ್ ಪಡೆದು ನಂತರ ಹಂತ ಹಂತವಾಗಿ ಎಲ್ಲ ಪರ್ಮಿಷನಗಳನ್ನು ಪಡೆದು ಈ ಕಟ್ಟಡ ಕಟ್ಟಲು ಪ್ರಾರಂಭಿಸಿ ಈಗ ಈ ಮಟ್ಟಕ್ಕೆ ಬೆಳೆದಿದೆ 500 ವಿದ್ಯಾರ್ಥಿಗಳು ಸದ್ಯದಲ್ಲಿ ಕಲಿಯುತ್ತಿದ್ದಾರೆ.
ಆದರೆ ನಮಗೆ ಇಲ್ಲಿಯ ಸುತ್ತ ಮುತ್ತಲಿನ ಬೆಲ್ಲದ ಫ್ಯಾಕ್ಟರಿ ಶಾಲೆಯ ಪರಿಸರವನ್ನು ನಾಶ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದೆ ನಮ್ಮ ಇಡೀ ದಾಖಲೆಗಳನ್ನು ಪರಿಶೀಲಿಸಿ ಇದಕ್ಕೆ ನ್ಯಾಯವನ್ನು ಒದಗಿಸಬೇಕೆಂದು ಮಾಧ್ಯಮದ ಮುಖಾಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ವಿನಂತಿಸಿಕೊಳ್ಳುತ್ತಿದ್ದೇನೆ ಎಂದರು.
ವರದಿ :ರಾಜು ಮುಂಡೆ




