ಬೈಲಹೊಂಗಲ: ಹೋಬಳಿ ಗುಡಿಕಟ್ಟಿ ಗ್ರಾಮದಲ್ಲಿ ಕೃಷಿ ಇಲಾಖೆ, ಬೈಲಹೊಂಗಲ ಆತ್ಮ ಯೋಜನೆ ಅಡಿ ನೈಸರ್ಗಿಕ ಕೃಷಿಯಲ್ಲಿ ಪಶು ಸಂಗೋಪನೆ ಮಹತ್ವ ಕುರಿತು ಕೌಶಲ್ಯ ಅಭಿವೃದ್ಧಿ ಮತ್ತು ಬಲವರ್ಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆ, ಬೈಲಹೊಂಗಲ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಬಸವರಾಜ್ ದಳವಾಯಿ ಅವರು ಆಗಮಿಸಿದ್ದರು.ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಕೆಎಲ್ಇ ಕೆ ವಿ ಕೆ ಮತ್ತಿಕೊಪ್ಪದ ಪಶು ವಿಜ್ಞಾನಿಗಳಾದ ಶ್ರೀ ಗುರುರಾಜ್ ಕೌಜಲಗಿ ಅವರು ಆಗಮಿಸಿದ್ದರು.ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಕುರಿತು ಆತ್ಮ ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ಚಂದಕಾಂತ ಮರಡಿ ಅವರು ವಿಶ್ವ ಮಣ್ಣು ದಿನಾಚರಣೆಯ ಹಿನ್ನೆಲೆ ಹಾಗೂ ಮಣ್ಣು ಸಂರಕ್ಷಣೆಯ ಉಪಯೋಗಗಳನ್ನು ತಿಳಿಸಿ ಮಣ್ಣು ಫಲವತ್ತತೆ ಮಾಡುವುದರ ಕುರಿತು ಬೆಳಕು ಚೆಲ್ಲಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕರು ಮಣ್ಣಿನ ಮಹತ್ವ ಮಣ್ಣಿಗೆ ಬೇಕಾಗುವ ಪೋಷಕಾಂಶಗಳು ಮಣ್ಣು ಸಂರಕ್ಷಣೆ ಗೋಸ್ಕರ ಸಾವಯುವ ಕೊಟ್ಟಿಗೆ ಗೊಬ್ಬರ ಹಸಿರೆಲೆ ಗೊಬ್ಬರ ವಿವಿಧ ಬೆಳೆ ಪದ್ಧತಿಳು ಹಾಗೂ ಸಮಗ್ರ ಕೃಷಿಯ ಜೊತೆ ನಮ್ಮ ಮಣ್ಣನ್ನ ಯಾವ ರೀತಿಯಾಗಿ ರೈತ ಬಾಂಧವರು ಕಾಪಾಡಿಕೊಳ್ಳಬೇಕು ಮತ್ತು ನೈಸರ್ಗಿಕ ಕೃಷಿ ಅಳವಡಿಸಿಕೊಂಡು ಪಾರಂಪರಿಕ ಕೃಷಿಯನ್ನು ಮತ್ತೆ ಮುನ್ನಾಲಿಗೆ ತರಬೇಕೆಂದು ರೈತರಿಗೆ ತಿಳಿಹೇಳಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪದ ಪಶು ವಿಜ್ಞಾನಿಗಳಾದ ಗುರುರಾಜ್ ಕೌಜಲಗಿ ಅವರು ಮಾತನಾಡಿ ಕೃಷಿಯಲ್ಲಿ ಪಶು ಸಂಗೋಪನೆಯ ಮಹತ್ವ ತಿಳಿಸಿದರು.

ರೈತರು ಹೆಚ್ಚು ಹೆಚ್ಚು ಪಶುಸಂಗೋಪನೆಯಲ್ಲಿ ತೊಡಗಿ ಪಶುವಿನ ಸಗಣಿ ಮತ್ತು ಗೋಮೂತ್ರಗಳಿಂದ ಬೀಜಾಮೃತ ಜೀವಾಮೃತ ಗಣಜೀವಾಮೃತ ಗಳನ್ನು ತಯಾರಿಸಿ ನೈಸರ್ಗಿಕ ಕೃಷಿಯಲ್ಲಿ ತೊಡಗಿ ಕೃಷಿಯಲ್ಲಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬೇಕೆಂದು ರೈತರಿಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿಗಳಾದ ಶ್ರೀಮತಿ ಎಸ್ ಎಸ್ ಮಾಳಗಿ ,ಪಂಚಾಯತಿ ಉಪಾಧ್ಯಕ್ಷರಾದ ಗಂಗಪ್ಪ ತಳವಾರ್ ಗ್ರಾಮದ ಹಿರಿಯರಾದ ಬಸಪ್ಪ ಸಣ್ಣಕ್ಕಿ ಕೃಷಿ ಸಖಿಯವರಾದ ಅನ್ನಪೂರ್ಣ ದೊಡವಾಡ ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ಖಾಸಗಿ ನಿವಾಸಿ ಯುವರಾಜ್ ಹಾಗೂ ಇಲಾಖೆ ಕೃಷಿ ಸಂಜೀವಿನಿ ಸಿಬ್ಬಂದಿ ಮತ್ತು ಊರಿನ ಗ್ರಾಮಸ್ಥರು ಮತ್ತು ರೈತ ಮಹಿಳೆಯರು ಉಪಸ್ಥಿತರಿದ್ದರು.
ವರದಿ: ದುಂಡಪ್ಪ ಹೂಲಿ




