Ad imageAd image

ಡಿ.ಕೆ ಶಿವಕುಮಾರ್ ಸಿಎಂ ಆಗಿ ಸಚಿವ ಸ್ಥಾನ ನೀಡುವುದಾದರೇ ಬೇಡವೇ ಬೇಡ : ಕೆ. ಎನ್ ರಾಜಣ್ಣ

Bharath Vaibhav
ಡಿ.ಕೆ ಶಿವಕುಮಾರ್ ಸಿಎಂ ಆಗಿ ಸಚಿವ ಸ್ಥಾನ ನೀಡುವುದಾದರೇ ಬೇಡವೇ ಬೇಡ : ಕೆ. ಎನ್ ರಾಜಣ್ಣ
WhatsApp Group Join Now
Telegram Group Join Now

ತಮಕೂರು: ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ, ನನಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದಾದರೇ ಬೇಡವೇ ಬೇಡ ಎಂಬುದಾಗಿ ಮಾಜಿ ಸಚಿವ ಕೆ.ಎನ್ ರಾಜಣ್ಣ ಭಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಡಿಕೆ ಸಂಪುಟದಲ್ಲಿ ನನಗೆ ಸ್ಥಾನ ಕೊಟ್ಟರೇ ಬೇಡವೇ ಬೇಡ.ನನಗೆ ಸಚಿವ ಸ್ಥಾನ ಬೇಡ ಮತ್ತೊಬ್ಬರಿಗೆ ಅವಕಾಶ ಕೊಡಲಿ. ಹಾಗಂತ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆಂದು ಹೇಳುತ್ತಿಲ್ಲ. ಅದೇನು ಸಿಎಂ ಆಗೇ ಬಿಡುತ್ತಾರೆ ಅಂದುಕೊಂಡಿದ್ದೀರಾ? ಎಂಬುದಾಗಿ ಹೇಳಿದ್ದಾರೆ.

ರಾಜಣ್ಣಗೆ ಮತ್ತೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರ ಬೇಡಿಕೆ ವಿಚಾರವಾಗಿ ಮಾತನಾಡಿ, ಯಾರು ನನ್ನ ಪರವಾಗಿ ಹೋರಾಟ ಮಾಡ್ತಿದ್ದಾರೋ ಅವರಿಗೆ ಚಿರಋಣಿ. ನನಗೆ ಅಧಿಕಾರದ ದಾಹ ಇಲ್ಲ ಎಂಬುದಾಗಿ ತಿಳಿಸಿದರು.

ನಾನು ಮೊದಲೇ ಹೇಳಿದ್ದೇನೆ ಡಿ.ಕೆ ಶಿವಕುಮಾರ್ ಸಿಎಂ ಆದ್ರೆ ಅವರ ಸಂಪುಟದಲ್ಲಿ ಸಚಿವ ಆಗೋಲ್ಲ. ಮತ್ತೆ ಅದನ್ನೇ ಹೇಳ್ತೀನಿ. ನನ್ನ ಪರ ಅಭಿಪ್ರಾಯ, ವಿಶ್ವಾಸ ವ್ಯಕ್ತಪಡಿಸಿದವರಿಗೆ ಅಭಾರಿಯಾಗಿರುವೆ. ನಾನು ಯಾವತ್ತೂ ಅಧಿಕಾರ ಹುಡುಕಿಕೊಂಡು ಹೋದವನಲ್ಲ.

ಅಧಿಕಾರ ಬೇಕು ಅಂತ ಸಂಪೂರ್ಣ ಆಪೇಕ್ಷೆ ಪಡೋನೂ ಅಲ್ಲ. ಅಧಿಕಾರ ಬಂದ್ರೆ ಏನೆಲ್ಲಾ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದೀನಿ. ನನ್ನ ಅವಧಿಯ ವಿಧೇಯಕ ಜಾರಿಯಾದ್ರೆ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ. ಸೊಸೈಟಿಗಳಲ್ಲೂ ನಾನು ಮೀಸಲಾತಿ ವ್ಯವಸ್ಥೆ ಜಾರಿ ಮಾಡಿದ್ದೇನೆ. ವಿಧೇಯಕದಲ್ಲಿ ಇಂತಹ ಹಲವು ಕ್ರಾಂತಿಕಾರಿ ಬದಲಾವಣೆ ತಂದಿದ್ದೇನೆ ಎಂದರು.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!