ವಿಜಯಪುರ : ರಾಜ್ಯದಲ್ಲಿ ಒಂದು ಅಮಾನವೀಯ ಘಟನೆ ನಡೆದಿದ್ದು, ಪತ್ನಿ ಮೂರು ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೆ ನಾಲ್ಕನೇ ಮಗು ಗಂಡಾಗಲಿ ಎಂದು ಮಾಟಗಾತಿಯ ಮಾತು ಕೇಳಿ ಪಾಪಿ ಪತಿಯೊಬ್ಬ ಪತ್ನಿಯ ಕೂದಲು ಕತ್ತರಿಸಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.
ಪತ್ನಿಯ ಕೂದಲು ಕತ್ತರಿಸಿದ ಗಂಡ, ಅತ್ತೆ, ಮಾವ ವಿಜಯಪುರ ತಾಲೂಕಿನ ಹೊನ್ನುಟಿಗಿ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಕೂದಲು ಕತ್ತರಿಸಿ ಪತಿ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾನೆ. ನಾಲ್ಕನೇ ಮಗು ಗಂಡಾಗಲಿ ಎಂದು ಮಾಟ ಮಂತ್ರ ಮಾಡಲಾಗಿದೆ ಈಗಾಗಲೇ ಪತ್ನಿ ಮೂರು ಹೆಣ್ಣು ಹತ್ತಿದ್ದು ಪತಿ ಅತ್ತೆ ಮಾವನಿಂದ ಈ ಒಂದು ಅಮಾನವೀಯ ಘಟನೆ ನಡೆದಿದೆ. ಗ್ರಾಮದ ಜ್ಯೋತಿ ಪತಿ ದುಂಡೇಶ್ ಎಂಬಾತ ಈ ಒಂದು ಕೃತ್ಯ ಎಸಗಿದ್ದು, 12 ದಿನಗಳಿಂದ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.




