Ad imageAd image

ವಾಯುವ್ಯ ಸಾರಿಗೆ ಇಲಾಖೆಯಲ್ಲಿ ನೌಕರಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ನೆಮ್ಮದಿ.

Bharath Vaibhav
ವಾಯುವ್ಯ ಸಾರಿಗೆ ಇಲಾಖೆಯಲ್ಲಿ ನೌಕರಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ನೆಮ್ಮದಿ.
WhatsApp Group Join Now
Telegram Group Join Now

ಹುಬ್ಬಳ್ಳಿ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 2019ರ ಸಾಲಿನಲ್ಲಿ ಒಟ್ಟು 2,814 ಚಾಲಕರು ಚಾಲಕ ನಿರ್ವಾಹಕ ಹುದ್ದೆಗಳಿಗಾಗಿ ಅರ್ಜಿಗಳನ್ನು ಕರೆಯಲಾಗಿತ್ತು .ಇದಕ್ಕೆ ಒಟ್ಟಾರೆ ರಾಜ್ಯದಿಂದ 57 ಸಾವಿರ ಜನ ಅರ್ಜಿಗಳನ್ನು ಇದಕ್ಕೆ ರಾಜ್ಯದಿಂದ ಒಟ್ಟಾರೆ 57,000 ಜನ ಅರ್ಜಿಗಳನ್ನು ಸಲ್ಲಿಸಿದ್ದರು ಒಂದುವರೆ ವರ್ಷಗಳ ಅವಧಿಯಲ್ಲಿ ಹೆಚ್ಚು ಕಡಿಮೆ 21,000 ಇದರಲ್ಲಿ ಅರ್ಹತೆಯನ್ನು ಪಡೆದಿದ್ದರು. ಅದಾದ ಮೇಲೆ ಕರೊನಾ ಬಂದಂತ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈ ನೇಮಕಾತಿಗಳಿಗೆ ತಡೆಯನ್ನು ಹಾಕಿತು.

ನಂತರ ಪ್ರಕ್ರಿಯೆ ಮುಂದುವರಿಯಲು ಸರ್ಕಾರ ಕೇವಲ ಒಂದು ಸಾವಿರ ಹುದ್ದೆಗಳನ್ನು ಮಾತ್ರ ತುಂಬಿಕೊಳ್ಳುತ್ತೇವೆ ಎಂದು ಹೇಳಿದಾಗ ಜೂನ್ 9ನೇ ತಾರೀಕಿನಿಂದ ನಮ್ಮ ಹೋರಾಟ ಪ್ರಾರಂಭವಾಯಿತು ಉಳಿದಂತಹ 1814 ಹುದ್ದೆಗಳನ್ನು ತುಂಬಿಕೊಳ್ಳಲೇಬೇಕು ಈಗಾಗಲೇ ಎಲ್ಲಾ ಪರೀಕ್ಷೆಗಳನ್ನು ಮುಗಿಸಿ ಅರ್ಹತೆಯನ್ನು ಪಡೆದಿರ ತಕ್ಕಂತಹ ಮೆರಿಟ್ ಆಧಾರಿತ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಬೇಕು. ಅಂತ ಹೇಳಿ ಪ್ರಾರಂಭದಲ್ಲಿ ಈ ಹೋರಾಟಕ್ಕೆ ಸರಿಯಾದ ನೇತೃತ್ವ ಇಲ್ಲದ ಕಾರಣ ಸರಿಯಾದ ಮಾರ್ಗದಲ್ಲಿ ಹೋಗುತ್ತಾ ಇರಲಿಲ್ಲ ಆದರೆ ಜೂನ್ 9 ನೆ ತಾರೀಕು ಸಾಮಾಜಿಕ ಕಾರ್ಯಕರ್ತರು ಆಗಿರುವ ಸುಭಾಸಿಂಗ್ ಜಮಾದಾರ್ ಅವರು ನೇತೃತ್ವ ವಹಿಸಿಕೊಂಡರು.

ಅದಾದ ನಂತರ ಜೂನ್ 18ನೇ ತಾರೀಕು ವಾಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಒಂದು ವಿಸ್ತೃತ ಬೇಡಿಕೆಯನ್ನು ಕೊಡಲಾಯಿತು. ಅದಾದ ನಂತರ ನಾವು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿರ ತಕ್ಕಂತ ರಾಜು ಕಾಗೆಯವರಿಗೆ ಮನವಿಯನ್ನು ಸಲ್ಲಿಸಲಾಯಿತು .ಈ ಒಂದು ಹೋರಾಟಕ್ಕೆ ಇಡೀ ರಾಜ್ಯದ ಶಾಸಕರ ಬೆಂಬಲವನ್ನು ಪಡೆದುಕೊಳ್ಳಬೇಕು ಎಂಬ ಕಾರಣದಿಂದ ರಾಜ್ಯದಲ್ಲಿರುವ 80ಕ್ಕಿಂತ ಹೆಚ್ಚು ಶಾಸಕರನ್ನು ಮತ್ತು ಸಚಿವರನ್ನು ಭೇಟಿ ಮಾಡುವ ಪ್ರಯತ್ನ ಮಾಡಲಾಯಿತು. 12ಕ್ಕೂ ಹೆಚ್ಚು ಸಂಸದರು ಭೇಟಿ ಮಾಡಿ ನಮಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿಯನ್ನು ಸಲ್ಲಿಸಲಾಯಿತು.

ಅದಾದ ನಂತರ ಜೂನ್ 18ನೇ ತಾರೀಕು ಒಂದು ಪ್ರತಿಭಟನೆಯನ್ನು ಕೂಡ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಎದುರುಗಡೆ ಪ್ರತಿಭಟನೆ ಮಾಡಲಾಯಿತು ಈ ವಿಚಾರ ಎಲ್ಲರಿಗೂ ಗೊತ್ತಿರುತಕ್ಕಂತಹ ಸಂಗತಿ ಈ ಒಂದು ಹೋರಾಟ ಸ್ಪಷ್ಟ ರೂಪ ಪಡೆಯಿತು. ನಾವು ಸರಕಾರಕ್ಕೆ ಹೋಗಿ ನಮ್ಮ ಕೆಲಸ ಮಾಡಿಸಲು ಸತತವಾಗಿ ಪ್ರಯತ್ನ ಮಾಡಲಾಯಿತು..ಸಾರಿಗೆ ಸಚಿವರಾಗಿರತಕ್ಕಂತಹ ಶ್ರೀ ರಾಮಲಿಂಗ ರೆಡ್ಡಿ ಅವರ ಜೊತೆ ಮಾತುಕತೆ ಮಾಡಲಾಯಿತು ಕಾನೂನು ಸಚಿವ ಶ್ರೀ ಎಚ್. ಕೆ.ಪಾಟೀಲ ರೊಂದಿಗೆ ಮಾತುಕತೆ ಮಾಡಲಾಯಿತು. ಅದಾದ ನಂತರ ಜುಲೈ 18ನೇ ತಾರೀಕು ರಾಮಲಿಂಗ ರೆಡ್ಡಿ ಅವರು ಬಂದಿರತಕ್ಕಂತಹ ಸಂದರ್ಭದಲ್ಲಿ ಒಂದು ಬೃಹತ್ ಪ್ರತಿಭಟನಾ ಪ್ರದರ್ಶನ ಕೂಡ ಮಾಡಲಾಯಿತು ಆ ಸಂದರ್ಭದಲ್ಲಿ ನಮ್ಮ ಜೊತೆ ನಮ್ಮ ಜೊತೆ ಮಾತುಕತೆ ಮಾಡಿರತಕ್ಕಂತಹ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ನಮಗೆ ಭರವಸೆಯನ್ನು ನೀಡಿದರು .

ನಾನು ಆದಷ್ಟು ಬೇಗನೇ ನೇಮಕಾತಿ ಮಾಡಿಕೊಳ್ಳುತ್ತೇನೆಂದು ಭರವಸೆ ನೀಡಿದರು ಆದರೂ ಕೂಡ ಯಾವುದೋ ಒಂದು ಕಾರಣದಿಂದ ನೇಮಕಾತಿ ಪ್ರಕ್ರಿಯೆ ನಡೆಯಲಿಲ್ಲ ಆದರೂ ಕೂಡ ಸತತವಾಗಿ ಬೆಂಗಳೂರಿಗೆ ಕಂಡ ತಂಡವಾಗಿ ಹೋಗಿ ನಮ್ಮ ಪ್ರಯತ್ನ ಮಾಡಲಾಯಿತು ವಿಶೇಷವಾಗಿ ಈ ಒಂದು ಸಂದರ್ಭದಲ್ಲಿ ಕೇಂದ್ರ ಸಚಿವರಾಗಿರತಕ್ಕಂತಹ ಪ್ರಹ್ಲಾದ್ ಜೋಶಿ ಅವರು ಸಭಾಪತಿಗಳಾಗಿರ ತಕ್ಕಂತಹ ಶ್ರೀ ಬಸವರಾಜ ಹೊರಟ್ಟಿಯವರು ಕೂಡ ಸಾರಿಗೆ ಸಚಿವರಾಗಿರತಕ್ಕಂತಹ ಶ್ರೀ ರಾಮಲಿಂಗ ರೆಡ್ಡಿ ಅವರ ಜೊತೆ ಎರಡು ಬಾರಿ ಮಾತುಕತೆ ಮಾಡಿದರು.ಅವರಿಗೆ ಪತ್ರವನ್ನು ಕೂಡ ಬರೆದರು.

ಅನೇಕ ಸಚಿವರು ಶಾಸಕರು ಕೂಡ ಈ ಸಂದರ್ಭದಲ್ಲಿ ರಾಮಲಿಂಗ ರೆಡ್ಡಿಯವರಿಗೆ ಪತ್ರವನ್ನು ಬರೆದರು ಅದಾದ ನಂತರ ವಿಶೇಷವಾಗಿ ಕಾನೂನು ಸಚಿವರಿಗೆ ಎಚ್ ಕೆ ಪಾಟೀಲ್ ಅವರು ಈ ಹೋರಾಟದಲ್ಲಿ ಮಹತ್ವವಾದ ಪಾತ್ರವನ್ನು ವಹಿಸಿ ಸಾರಿಗೆ ಸಚಿವರಿಗೆ ಮನದಟ್ಟು ಮಾಡುವಂತಹ ಕೆಲಸ ಮಾಡಿದರು ಕೂಡ ನಮ್ಮ ಕೆಲಸ ಆಗಿರಲಿಲ್ಲ ನವಂಬರ್ 5 ನೇ ತಾರೀಕು ಕುಟುಂಬ ಸಮೇತರಾಗಿ ನಾವು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಪ್ರಾರಂಭವಾಯಿತು ಆ ಒಂದು ಸಂದರ್ಭದಲ್ಲಿ ನಮ್ಮ ಪ್ರತಿಭಟನೆ ವಿಕೋಪ ಸ್ವರೂಪಕ್ಕೆ ಹೋಗುತ್ತಿರುವುದನ್ನು ಕಂಡು ಸಾರಿಗೆ ಅಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು ಆಗಮಿಸಿ ನವೆಂಬರ್ 6ನೇ ತಾರೀಕಿನಂದು ಪ್ರತಿಭಟನೆ ಮಾಡಬೇಡಿ ನವೆಂಬರ್ 7ನೇ ತಾರೀಖು ,ಸಾರಿಗೆ ಸಚಿವರು ನೂತನ ಬಸ್ಟಾಂಡ್ ಓಪನಿಂಗ್ ಗೆ ಬರುತ್ತಿದ್ದಾರೆ ಆ ಸಂದರ್ಭದಲ್ಲಿ ಅವರ ಜೊತೆ ಮಾತುಕತೆ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದರು ಹಾಗಾಗಿ ನಾವು ನಂಬರ್ 6ನೇ ತಾರೀಖಿನಂದು ಪ್ರತಿಭಟನೆಯನ್ನು ಮಾಡಲಿಲ್ಲ ಮತ್ತೆ 7ನೇ ತಾರೀಖಿನಂದು ಪ್ರತಿಭಟನೆಯನ್ನು ಮಾಡಲಾಯಿತು ರಾಜ್ಯಾದ್ಯಂತ 3,000 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಮ್ಮ ಹೋರಾಟದ ಸ್ಥಳಕ್ಕೆ ಶ್ರೀ ರಾಮಲಿಂಗಾರೆಡ್ಡಿಯವರು ಭೇಟಿ ಕೊಟ್ಟರು ನಾನು ಸಾಯಂಕಾಲ ನಿಮ್ಮ ಜೊತೆ ಮಾತುಕತೆ ಮಾಡುತ್ತೇನೆ ಎಂದು ಹೇಳಿದರು ಅದೇ ಪ್ರಕಾರ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮಾತುಕತೆ ಮಾಡಿದರು ಆ ಸಮಯದಲ್ಲಿ ವಿಸ್ತೃತವಾಗಿ ನಮ್ಮ ಬೇಡಿಕೆಗಳನ್ನು ಮನದಟ್ಟಾಗುವಂತೆ ಮತ್ತೊಮ್ಮೆ ಮನವರಿಕೆ ಮಾಡಲಾಯಿತು ಈ ಸಂದರ್ಭದಲ್ಲಿ ಕಾರ್ಮಿಕ ಸಚಿವರಾದಂತಹ ಸಂತೋಷ್ ಲಾಡ್ ಅವರು ಕೂಡ ಇದ್ದರು ವ್ಯವಸ್ಥಾಪಕ ನಿರ್ದೇಶಕರಿದ್ದರು ಶಾಸಕರಾದಂತಹ ಮಹೇಶ್ ಟೆಂಗಿನಕಾಯಿ ಅವರು ಇದ್ದರು.

ಪೊಲೀಸ್ ಆಯುಕ್ತರು ಈ ಸಂದರ್ಭದಲ್ಲಿ ಇದ್ದರು .ನಮ್ಮ ಬೇಡಿಕೆಗಳನ್ನು ಚರ್ಚೆ ಮಾಡಿದ ನಂತರ ಭರವಸೆಯನ್ನು ನೀಡಿದರು ಆದಷ್ಟು ಬೇಗನೆ ಒಂದು ಸಾವಿರ ಹುದ್ದೆಗಳನ್ನು ಮೊದಲನೇ ಹಂತದಲ್ಲಿ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ನೀಡಿದರು ವಿಶೇಷವಾಗಿ ಐದನೇ ತಾರೀಖು ನಡೆದ ಪ್ರತಿಭಟನೆ ರಾಜ್ಯದ ಗಮನವನ್ನು ಸೆಳೆಯಿತು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಡೆದಿರು ತಕ್ಕಂತಹ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಶಾಸಕರಾದ ಶ್ರೀ ಎಂ ಆರ್ ಪಾಟೀಲ್,ಶ್ರೀ ಮಹೇಶ್ ಟೆಂಗಿನಕಾಯಿ,ಶ್ರೀ ಪ್ರದೀಪ ಶೆಟ್ಟರ್ ಅವರು ಕೂಡ ನಮ್ಮ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದರು .

ಕೊಟ್ಟ ಮಾತಿನಂತೆ ರಾಮಲಿಂಗ ರೆಡ್ಡಿ ಅವರು ಸಂತೋಷ್ ಲಾಡ್ ಅವರು ಬಹಳ ಕಾಳಜಿಯನ್ನು ವಹಿಸಿ ನಮ್ಮ ಜೊತೆ ನಿಂತರು ಅದರ ಪರಿಣಾಮವಾಗಿ ನವಂಬರ್ 27 ನೇ ತಾರೀಕು ನಡೆದಿರುವ ಸಚಿವ ಸಂಪುಟ ಸಭೆಯಲ್ಲಿ 1000 ನೇಮಕಾತಿಗೆ ಮೊದಲ ಹಂತದಲ್ಲಿ ಆದೇಶವನ್ನು ಸರಕಾರ ಹೊರಡಿಸಿತು ಅದಕ್ಕಾಗಿ ರಾಮಲಿಂಗ ರೆಡ್ಡಿ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳು. ವಿಶೇಷವಾಗಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ದಕ್ಷ ಸಚಿವರು ಎಂದು ಹೆಸರು ಮಾಡಿರುವಂತಹ ಶ್ರೀ ರಾಮಲಿಂಗಾ ರೆಡ್ಡಿ ಅವರು ನುಡಿದಂತೆ ನಡೆದು ಉತ್ತರ ಕರ್ನಾಟಕದ 1814 ಕುಟುಂಬಕ್ಕೆ ನೆಮ್ಮದಿಯನ್ನು ಕೊಡುವಂತಹ ಕೆಲಸವನ್ನು ಮಾಡಿದ್ದಾರೆ ಅದಕ್ಕೆ ಹೋರಾಟ ಸಮಿತಿಯ ಪರವಾಗಿ ನಾವು. ಮತ್ತೊಮ್ಮೆ ಧನ್ಯವಾದಗಳು ಹೇಳಲಿಕ್ಕೆ ಇಷ್ಟಪಡುತ್ತೇವೆ ಈ ಒಂದು ನಮ್ಮ ಕಾರ್ಯ ಈಡೇರಿಸಲು ಎಚ್ ಕೆ ಪಾಟೀಲ್ ಅವರು ಕಾರ್ಮಿಕ ಸಚಿವರಾಗಿರತಕ್ಕಂತಹ ಸಂತೋಷ್ ಲಾಡ್ ಅವರು ಬಹಳ ಬೆಂಬಲವನ್ನು ಕೊಟ್ಟಿದ್ದಾರೆ ಅವರಿಗೂ ಕೂಡ ನಮ್ಮ ಕಡೆಯಿಂದ ಹೃತ್ಪೂರ್ವಕವಾದ ಧನ್ಯವಾದಗಳು ಈ ಹೋರಾಟದಲ್ಲಿ ನಮಗೆ ಬೆಂಬಲವನ್ನು ಸೂಚಿಸಿರುತಕಂತಹ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರಿಗೆ ಬಸವರಾಜ್ ಹೊರಟ್ಟಿ ಅವರಿಗೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲ ಶಾಸಕ ಮಿತ್ರರಿಗೂ ಕೂಡ ನಾವು ಧನ್ಯವಾದಗಳು ಹೇಳಲಿಕ್ಕೆ ಇಚ್ಛೆ ಪಡುತ್ತೇವೆ.

ವಿಶೇಷವಾಗಿ ವಾಯುವ್ಯ ಕರ್ನಾಟಕ ಸಾರಿಗೆ ಅಧ್ಯಕ್ಷರು ರಾಜು ಕಾಗೆಯವರು ನಮ್ಮ ಬೇಡಿಕೆಗಳ ಪರವಾಗಿ ಇದ್ದರೂ,ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗ ಅವರು ಕಾಲಕಾಲಕ್ಕೆ ನಮಗೆ ಬೇಕಾಗಿರುತಕಂಹ ಪತ್ರಗಳನ್ನು ತಯಾರಿ ಮಾಡಿದರು ಅವರಿಗೂ ಕೂಡ ನಮ್ಮ ಹೃತ್ಪೂರ್ವಕವಾದ ಧನ್ಯವಾದಗಳು ತಿಳಿಸಲು ಬಯಸುತ್ತೇನೆ ಅದೇ ರೀತಿ ಪೊಲೀಸ್ ಆಯುಕ್ತರು ಕೂಡ ತಮ್ಮ ತಂಡದೊಂದಿಗೆ ನೀವು ಒಂದು ಹೋರಾಟಕ್ಕೆ ಸಂಪೂರ್ಣ ಸಹಕಾರವನ್ನು ಕೊಟ್ಟು ಸರಿಯಾದಂತಹ ರಕ್ಷಣೆಯನ್ನು ಒದಗಿಸಿದರು ಅವರಿಗೂ ಕೂಡ ನಮ್ಮ ಹೃತ್ಪೂರ್ವಕವಾದ ಧನ್ಯವಾದಗಳನ್ನು ಹೇಳ ಬಯಸುತ್ತೇವೆ.ಈ ಹಿಂದೆ ಕೂಡ 2012 13 ನೇ ಸಾಲಿನಲ್ಲಿ ಇದೇ ರೀತಿ ಆದಾಗ ಸುಭಾಷ್ ಸಿಂಗ್ ಜಮಾದಾರ್ ಅವರ ನೇತೃತ್ವದಲ್ಲಿ 9 ತಿಂಗಳ ಸತತ ಹೋರಾಟದ ನಂತರ 2016ರಲ್ಲಿ 2,257 ಅಭ್ಯರ್ಥಿಗಳನ್ನು ವಾಯುವ್ಯ ಕರ್ನಾಟಕ ಸಾರಿಗೆಯಲ್ಲಿ ಸೇರಿಸುವ ಮೂಲಕ ಯಶಸ್ವಿಯಾಗಿದ್ದರು ಅವರ ನೇತೃತ್ವದಲ್ಲಿ ಮತ್ತೊಂದು ಹೋರಾಟ ಇದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಯಾರೋ ಒಬ್ಬರಿಗೂ ಕೂಡ ನಾಲ್ಕು ಸಾವಿರ ಸರ್ಕಾರಿ ಹುದ್ದೆಗಳನ್ನು ಕೊಡಿಸಲು ಆಗಿಲ್ಲ ಅಂತ ಹೇಳಬಹುದು ಸುಭಾಷ್ ಸಿಂಗ್ ಜಮಾದಾರ್ ಅವರ ಪ್ರಾಮಾಣಿಕವಾದ ನೈತಿಕ ಬೆಂಬಲ ಬಲವನ್ನು ತಂದು ಕೊಟ್ಟಿತು. ಕಾರ್ಮಿಕ ಕ್ಷೇತ್ರದಲ್ಲಿ ವಿಶೇಷವಾಗಿ ಸಾರ್ವಜನಿಕವಾಗಿ ಹೊಸ ಇತಿಹಾಸ ಸೃಷ್ಟಿ ಮಾಡುವ ಮೂಲಕ ಹೋರಾಟ ಯಶಸ್ವಿಗೊಳಿಸಿದ್ದಾರೆ .

ಈ ಹೋರಾಟಕ್ಕೆ ಸಹಕಾರ ನೀಡಿರುವಂತಹ ಪತ್ರಿಕಾ ಮಾಧ್ಯಮದವರಿಗು ಎಲೆಕ್ಟ್ರಾನಿಕ್ ಮಾಧ್ಯಮದವರಿಗೂ ಪ್ರತಿಯೊಬ್ಬರಿಗೂ ಕೂಡ ಪ್ರತ್ಯಕ್ಷವಾಗಿ ಅಪರೋಕ್ಷವಾಗಿ ಸಹಕರಿಸಿದಂತಹ ಹೋರಾಟದ ಸಮಿತಿಯ ಪರವಾಗಿ ಧನ್ಯವಾದಗಳು. 1814 ಕುಟುಂಬಗಳು ನೆಮ್ಮದಿಯಿಂದ ಬದುಕುವಂತಹ ಕೆಲಸ ಆಗುತ್ತೆ ಈಗ ಒಂದು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು .814 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಕೂಡ ಆರಂಭವಾಗಿದೆ.

ಅದನ್ನು ಕೂಡ ನಮಗೆ ಮಾಡಿಕೊಡುತ್ತೇವೆಂದು ಶ್ರೀ ರಾಮಲಿಂಗ ರೆಡ್ಡಿಯವರು ನಮಗೆ ಭರವಸೆಯನ್ನು ನೀಡಿದ್ದಾರೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ನಮಗೆ ಸಂಪೂರ್ಣ ಬೆಂಬಲವನ್ನು ಕೊಡುತ್ತಿದ್ದಾರೆ .ಒಟ್ಟು 1814 ಕುಟುಂಬಗಳಿಗೆ ನೆಮ್ಮದಿ ನೀಡಲಿಕ್ಕೆ ಸಹಕಾರ ಮಾಡಿರ್ತಕ್ಕಂತ ಸಾರಿಗೆ ಸಚಿವರಿಗೆ ಕಾರ್ಮಿಕ ಸಚಿವರಿಗೆ ಕಾನೂನು ಸಚಿವರಿಗೆ ಧನ್ಯವಾದಗಳು ಜನರ ಬದುಕಿಗೆ ಒಂದು ನೆಮ್ಮದಿ ಸಿಕಂತಾಗುತ್ತದೆ ಎಷ್ಟು ಹಣ ನೀಡಿದರು ಸಿಗದಂತಹ ನೆಮ್ಮದಿ ಸಿಕ್ಕಂತೆ ಸಿಗುತ್ತದೆ..ಧನ್ಯವಾದಗಳು..ಸುಭಾಸಸಿಂಗ ಜಮಾದಾರ ಮಾಲತೇಶ ನೂಲಗೇರಿ,ರೇಣಪ್ಪ ಅರೆಗೌಡ, ಮೊಹಮ್ಮದ ಸಾಬ ಇಂಚಲ, ಮಲ್ಲು ಗರಡೆ,ಫಕೀರಗೌಡ ಹಿರೇಗೌಡರ,ಫಕ್ಕಿರೇಶ ಹೊಸಕಟ್ಟಿ ಉಪಸ್ಥಿತರಿದ್ದರು.

ವರದಿ : ಗುರುರಾಜ ಹಂಚಾಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!